Published : Sep 13, 2023, 10:34 AM ISTUpdated : Sep 13, 2023, 10:35 AM IST
ನಗರದ ಬಳ್ಳಾರಿ ರಸ್ತೆಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ದೇವಿ ಮೂರ್ತಿಗೆ ನೂರಾರು ಹೊಸ ನೋಟುಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಇದಕ್ಕಾಗಿ ಕಳೆದ ಮೂರು ದಿನಗಳಿಂದ ಓಡಾಡಿ ಹಣ ಸಂಗ್ರಹಿಸಿದ್ದಾರೆ.
ಶ್ರಾವಣ ಮಾಸದ ಕಡೆಯ ಮಂಗಳವಾರದ ನಿಮಿತ್ತ ಅಂಬಾ ಭವಾನಿ ದೇವಿಗೆ ಎಸ್‌ಎಸ್‌ಕೆ ಸಮಾಜದಿಂದ ಅಲಂಕಾರ ಮಾಡಲಾಗಿದ್ದು, ಭಕ್ತಾದಿಗಳ ಗಮನ ಸೆಳೆಯಿತು.
25
ಶ್ರಾವಣ ಮಾಸದ ಕಡೆಯ ಮಂಗಳವಾರದ ನಿಮಿತ್ತ ಅಂಬಾ ಭವಾನಿ ದೇವಿಗೆ ಎಸ್‌ಎಸ್‌ಕೆ ಸಮಾಜದಿಂದ ಅಲಂಕಾರ ಮಾಡಲಾಗಿದ್ದು, ಭಕ್ತಾದಿಗಳ ಗಮನ ಸೆಳೆಯಿತು.
35
₹5 ನಾಣ್ಯದಿಂದ ಹಿಡಿದು ₹20, ₹50, ₹100, ₹200, ₹500 ಮುಖಬೆಲೆಯ ನೋಟುಗಳಿಂದ ದೇವಿಯ ಅಲಂಕಾರ ಮಾಡಲಾಗಿದೆ. ₹5.61 ಲಕ್ಷ ಬಳಕೆ ಮಾಡಲಾಗಿದೆ.
45
ಗರ್ಭಗುಡಿಯ ದ್ವಾರ ಬಾಗಿಲು ಸೇರಿದಂತೆ ದೇವಿ ಮೂರ್ತಿಯನ್ನು 6 ಜನ ಮಹಿಳೆಯರು, 7 ಜನ ಪುರುಷರು ಸೇರಿ ಒಟ್ಟು13 ಜನರು ಸೋಮವಾರ ಸಂಜೆ 7 ಗಂಟೆಯಿಂದ ಮಂಗಳವಾರ ಬೆಳಗ್ಗೆ 5 ಗಂಟೆವರೆಗೆ ಒಟ್ಟು 12 ತಾಸುಗಳ ಕಾಲ ಅಲಂಕಾರ ಮಾಡಲು ಸಮಯ ತೆಗೆದುಕೊಂಡಿದ್ದಾರೆ. ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ನೋಟುಗಳ ಅಲಂಕಾರ ಇರಲಿದೆ ಎಂದು ಅರ್ಚಕರು ತಿಳಿಸಿದ್ದಾರೆ.
55
ದೇವಿಗೆ ನೋಟುಗಳಿಂದ ಅಲಂಕಾರ ಮಾಡುವ ಸಲುವಾಗಿ ಕಳೆದ ಮೂರು ವಾರಗಳಿಂದ ನೋಟುಗಳನ್ನು ಸಂಗ್ರಹಿಸಲು ಎಸ್‌ಎಸ್‌ಕೆ ಸಮಾಜದವರು ಓಡಾಡಿದ್ದಾರೆ.