Raksha bandhan 2026: ಮೊಘಲ್ ಚಕ್ರವರ್ತಿ ಹುಮಾಯೂನ್ ಹಿಂದೂ ರಾಣಿಯಿಂದ ರಾಖಿ ಕಟ್ಟಿಸಿಕೊಳ್ಳುತ್ತಿದ್ದ, ಆ ಒಂದು ಕರೆ ಯುದ್ಧಕ್ಕೆ ಕಾರಣವಾಯ್ತು!

Published : Aug 21, 2026, 08:33 AM IST

Raksha bandhan 2026: ಮೊಘಲ್ ರಾಜ ಹುಮಾಯೂನ್‌ಗೆ ಪತ್ರ ಬರೆದು ರಾಖಿ ಕಳಿಸಿಕೊಟ್ಟಿದ್ದ ಹಿಂದೂ ರಾಣಿ. ಆ ಒಂದು ಕರೆ ಯುದ್ಧಕ್ಕೆ ಕಾರಣವಾಯ್ತು. ರಾಖಿ ಕಳಿಸಿದ ಆ ರಾಣಿ ಯಾರು? ಯುದ್ಧ ನಡೆದಿದ್ದೇಕೆ? ರಕ್ಷಾ ಬಂಧನದ ವೇಳೆ ಸಹೋದರತ್ವದ ಸಂಕೇತವಾಗಿ ಈ ಕಥೆ ಹೇಳಲಾಗುತ್ತಿದೆ. ಇದು ನಿಜವೇ? ನಂಬಿಕೆಯೇ?

PREV
14
ರಕ್ಷಾ ಬಂಧನ: ಮೊಘಲ್ ಚಕ್ರವರ್ತಿಗೆ ರಾಖಿ ಕಳಿಸಿದ್ದ ರಾಣಿ ಯಾರು?

ರಕ್ಷಾ ಬಂಧನ(Raksha bandhan) ಹಬ್ಬ ಸಮೀಪಿಸುತ್ತಿದೆ. ಕೆಲವು ದಿನಗಳಷ್ಟೇ ಉಳಿದಿವೆ. ಈ ಹಿನ್ನೆಲೆ ರಕ್ಷಾ ಬಂಧನದ ಇತಿಹಾಸ ತಿಳಿಯುವ ಪ್ರಯತ್ನಗಳು ಯುವ ಜನರು ಉತ್ಸುಕರಾಗಿದ್ದಾರೆ. ತಲೆಮಾರುಗಳಿಂದ ಹೇಳಲಾಗುತ್ತಿರುವ ಸಹೋದರ-ಸಹೋದರಿಯರ ಪ್ರೀತಿ ಮತ್ತು ರಕ್ಷಣೆಯ ಭರವಸೆಯ ಹಳೆಯ ಕಥೆಗಳನ್ನು ನಾವೀಗ ಮತ್ತೊಮ್ಮೆ ತಿಳಿದುಕೊಳ್ಳುತ್ತಿದ್ದೇವೆ. ಅಂತಹ ಒಂದು ರಕ್ಷಾ ಬಂಧನದ ಕಥೆ ಮೇವಾರದ ರಾಣಿ ಕರ್ಣಾವತಿ ಮತ್ತು ಮೊಘಲ್ ಚಕ್ರವರ್ತಿ ಹುಮಾಯೂನ್ ಅವರದ್ದು. ಇದರಲ್ಲಿ ಒಬ್ಬ ಹಿಂದೂ ರಾಣಿ ಮುಸ್ಲಿಂ ರಾಜನಿಗೆ ರಾಖಿಯನ್ನು ಕಳುಹಿಸುವ ಮೂಲಕ ತನ್ನ ಸಹೋದರನನ್ನಾಗಿ ಮಾಡಿ ಪ್ರತಿಯಾಗಿ ತನ್ನ ರಾಜ್ಯವನ್ನು ರಕ್ಷಿಸುವ ಭರವಸೆಯನ್ನು ಪಡೆದಳು. ಈ ಕಥೆಯನ್ನು ಶತಮಾನಗಳಿಂದ ರಕ್ಷಾ ಬಂಧನದ ಸಂದರ್ಭದಲ್ಲಿ ಹೇಳಲಾಗುತ್ತಿದೆ. ಇಂದು ಈ ಕತೆಯ ಹಿನ್ನೆಲೆ ತಿಳಿಯೋಣ.

24
ರಾಣಿ ಕರ್ಣಾವತಿ ಯಾರು? ಹುಮಾಯೂನ್ ಗೆ ರಾಖಿ ಕಳಿಸಿದ್ದೇಕೆ?

ಮೇವಾರದ ದೊರೆ ರಾಣಾ ಸಂಗನ ಪತ್ನಿ ರಾಣಿ ಕರ್ಣಾವತಿ. ರಾಣಾ ಸಂಗನ ಮರಣದ ನಂತರ, ಅವನ ಮಗ ವಿಕ್ರಮಾದಿತ್ಯ ಸಿಂಗ್ ಸಿಂಹಾಸನವನ್ನು ಏರುತ್ತಾನೆ. ಆಗ ಅವನಿಗಿನ್ನೂ ಚಿಕ್ಕ ವಯಸು. ಆ ಕಾರಣದಿಂದ ರಾಣಿ ಕರ್ಣಾವತಿ ಸ್ವತಃ ಮೇವಾರದ ರಾಣಿಯಾಗಿ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಳ್ತಾಳೆ. ಇಂಥ ಸಮಯದಲ್ಲಿ ಗುಜರಾತ್‌ನ ಸುಲ್ತಾನ್ ಬಹದ್ದೂರ್ ಷಾ ಮೇವಾರದ ಮೇಲೆ ದಾಳಿ ಮಾಡಿ ಚಿತ್ತೋರ್‌ಗಢ ಕೋಟೆಯನ್ನು ಮುತ್ತಿಗೆ ಹಾಕ್ತಾನೆ. ದಂತಕಥೆಯ ಪ್ರಕಾರ, ಮೇವಾರದ ಬಿಕ್ಕಟ್ಟು ತೀವ್ರಗೊಂಡು ಸೋಲು ಸನ್ನಿಹಿತವಾಗುತ್ತಿದ್ದಂತೆ ರಾಣಿ ಕರ್ಣಾವತಿ ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಸಹಾಯಕ್ಕಾಗಿ ಬೇಡಿಕೊಂಡು ಒಂದು ಪತ್ರದೊಂದಿಗೆ ರಾಖಿಯನ್ನು ಕಳುಹಿಸುತ್ತಾಳೆ. ಆಗ ಹುಮಾಯೂನ್‌ನನ್ನು ತನ್ನ ಸಹೋದರ ಎಂದು ಪರಿಗಣಿಸಿದ ರಾಣಿ ಮೇವಾರನನ್ನು ಉಳಿಸಲು ಅವನ ರಕ್ಷಣೆಗೆ ಬರುವಂತೆ ಕೇಳಿಕೊಳ್ಳುತ್ತಾಳೆ.

34
ಕರ್ಣಾವತಿ ಸಹಾಯಕ್ಕೆ ಹುಮಾಯೂನ್ ಸೈನ್ಯ ಕಳಿಸುತ್ತಾನೆ ಆದರೆ..

ರಾಣಿ ಕರ್ಣಾವತಿಯ ರಾಖಿಯನ್ನು ಗಂಭೀರವಾಗಿ ಪರಿಗಣಿಸಿ ಹುಮಾಯುನ್ ಮೇವಾರದ ಸಹಾಯಕ್ಕೆ ತನ್ನ ಸೈನ್ಯವನ್ನು ಕಳುಹಿಸುತ್ತಾನೆ. ಆದರೆ ದುರದೃಷ್ಟವಶಾತ್ ಹುಮಾಯೂನ್‌ನ ಸೈನ್ಯವು ಸಕಾಲದಲ್ಲಿ ಚಿತ್ತೋರ್‌ಗಢವನ್ನು ತಲುಪಲು ವಿಫಲವಾಗುತ್ತದೆ. ಬಹದ್ದೂರ್ ಷಾ ಕೋಟೆಯನ್ನು ವಶಪಡಿಸಿಕೊಳ್ತಾನೆ. ಸೋಲು ಸನ್ನಿಹಿತವಾಗಿದೆ ಎಂದು ಅರಿತುಕೊಂಡ ರಾಣಿ ಕರ್ಣಾವತಿ, ಇತರ ರಜಪೂತ ರಾಣಿಯರೊಂದಿಗೆ ಮಾರ್ಚ್ 8, 1535 ರಂದು ಜೌಹರ್ ಮಾಡುತ್ತಾರೆ. ಅಂದರೆ ಅವರು ತಮ್ಮ ಗೌರವವನ್ನು ಉಳಿಸಿಕೊಳ್ಳಲು ತಮ್ಮನ್ನು ತಾವು ಬಲಿ ತೆಗೆದುಕೊಂಡರು. ಇದನ್ನು ಮೇವಾರದ ಇತಿಹಾಸದಲ್ಲಿ ಎರಡನೇ ಪ್ರಮುಖ ಜೌಹರ್ ಎಂದು ಪರಿಗಣಿಸಲಾಗಿದೆ. ಈ ಘಟನೆಯನ್ನು ತ್ಯಾಗಕ್ಕೆ ಉತ್ತಮ ಉದಾಹರಣೆಯಾಗಿ ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ.

44
ಈ ಕಥೆ ಸಂಪೂರ್ಣ ನಿಜವೇ?

ರಕ್ಷಾ ಬಂಧನದ ಸಂದರ್ಭದಲ್ಲಿ ಈ ಕಥೆಯನ್ನ ಕೇಳಲಾಗುತ್ತಿದೆ ಆದರೆ ಇದು ನೈಜ ಘಟನೆ ಎಂದು ಹೇಳಲು ಆ ಕಾಲದ ಯಾವುದೇ ಇತಿಹಾಸದ ಪುಟಗಳು ನೇರವಾಗಿ ಉಲ್ಲೇಖಿಸಿಲ್ಲ. ಕೆಲವು ಇತಿಹಾಸಕಾರರು ಈ ಘಟನೆಯನ್ನ ನಂಬುತ್ತಾರೆ. ಈ ಘಟನೆಯು ನಿಜವಾಗಿಯೂ ವಿವರಿಸಿದಂತೆ ನಡೆದಿದೆಯೇ ಎಂದು ಅನೇಕ ಇತಿಹಾಸಕಾರರು ತಮ್ಮ ಬರಹಗಳಲ್ಲಿ ಪ್ರಶ್ನಿಸಿದ್ದಾರೆ. ಇದು ನಿಜವೋ ಸುಳ್ಳೋ ಆದರೆ ಈ ಕಥೆ ಶತಮಾನಗಳಿಂದ ಸಹೋದರತ್ವದ ಸಂಕೇತವಾಗಿ, ರಕ್ಷಣೆಯ ಭರವಸೆಯಾಗಿ ನೆನಪಿಸಿಕೊಳ್ಳಲಾಗುತ್ತಿದೆ.

Read more Photos on
click me!

Recommended Stories