ಕಪ್ಪು ದಾರ ಕಾಲಿಗೆ ಕಟ್ಟೋದು ಒಳ್ಳೆಯದು, ಆದರೆ ಈ 2 ರಾಶಿಯವರು ಕಟ್ಟಕೂಡದು!

First Published Apr 17, 2022, 11:02 AM IST

ಕಪ್ಪು ದಾರವನ್ನು ಒಂದು ಕೈಗೆ ಅಥವಾ ಕಾಲಿಗೆ ದೃಷ್ಟಿ ದಾರವಾಗಿ ಕಟ್ಟಲಾಗುತ್ತದೆ. ಇದಲ್ಲದೆ, ಹಲವು ಜ್ಯೋತಿಷ್ಯ ಕಾರಣಗಳಿಗಾಗಿಯೂ ಕಟ್ಟಲಾಗುತ್ತದೆ. ಆದರೆ, ಈ ಎರಡು ರಾಶಿಯವರು ಇದನ್ನು ಕಟ್ಟಕೂಡದು.

evil eye

ದೃಷ್ಟಿ ತೆಗೆಯುತ್ತದೆ(evil eye)
ಕಪ್ಪು ಬಣ್ಣವನ್ನು ಯಾವಾಗಲೂ ದೃಷ್ಟಿ ತೆಗೆಯಲು ಅಥವಾ ದೃಷ್ಟಿಯಾಗದಂತೆ ಬಳಸಲಾಗುತ್ತದೆ. ಚಿಕ್ಕ ಮಕ್ಕಳಿಗೆ ದೃಷ್ಟಿಯಾಗಬಾರದೆಂದು ದೊಡ್ಡ ಬೊಟ್ಟಿಡುವ ರೂಢಿ ನಮ್ಮಲ್ಲಿದೆ. ಇದಲ್ಲದೆ, ದೃಷ್ಟಿಯಾಗದಂತೆ ಕಪ್ಪು ದಾರವನ್ನು ಒಂದು ಕೈಗೆ ಅಥವಾ ಒಂದು ಕಾಲಿಗೆ ಕಟ್ಟಲು ಕೂಡ ಸಲಹೆ ನೀಡಲಾಗುತ್ತದೆ. ಕಾಲಿಗೆ ದಾರ ಕಟ್ಟುವುದರಿಂದ ನಕಾರಾತ್ಮಕ ಶಕ್ತಿಗಳಿಂದ ದೂರ ಉಳಿಯಬಹುದಾಗಿದೆ. 

ಹಣಕಾಸಿನ ಸ್ಥಿತಿ ಸುಧಾರಿಸಲು
ಬಹಳಷ್ಟು ಹಣಕಾಸು ನಷ್ಟ ಎದುರಿಸುತ್ತಿದ್ದರೆ, ಇದ್ದಕ್ಕಿದ್ದಂತೆ ಉದ್ಯೋಗ ಕಳೆದುಕೊಂಡಿದ್ದರೆ, ಉದ್ಯಮದಲ್ಲಿ ನಷ್ಟವಾಗುತ್ತಿದ್ದರೆ, ಆಗ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಲು ಸಲಹೆ ನೀಡಲಾಗುತ್ತದೆ. ಇದರಿಂದ ನಷ್ಟ ಭರಿಸಿಕೊಳ್ಳುವುದಷ್ಟೇ ಅಲ್ಲ, ಆರ್ಥಿಕ ಸ್ಥಿತಿ(financial condition) ಉತ್ತಮಗೊಳ್ಳುತ್ತದೆ. 

Black thread on feet

ಯಾವ ಕಾಲಿಗೆ ಕಟ್ಟಬೇಕು?
ಜ್ಯೋತಿಷ್ಯದ ಪ್ರಕಾರ, ಮಹಿಳೆಯರು ಯಾವಾಗಲೂ ಕಪ್ಪು ದಾರವನ್ನು ತಮ್ಮ ಎಡಕಾಲಿಗೆ ಕಟ್ಟಿಕೊಳ್ಳಬೇಕು. ಪುರುಷರು ಬಲಗಾಲಿಗೆ ಕಟ್ಟಿಕೊಳ್ಳಬೇಕು. ಹೀಗೆ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಪುರುಷರು ಮಂಗಳವಾರ(Tuesday)ದ ದಿನ ಕಪ್ಪು ದಾರ ಕಾಲಿಗೆ ಕಟ್ಟಿಕೊಳ್ಳಬೇಕು. 

ಈ ರಾಶಿಯವರು ಕಟ್ಟಬಾರದು
ಕಪ್ಪು ದಾರ ಕಟ್ಟುವುದರಿಂದ ಸಾಕಷ್ಟು ಲಾಭಗಳಿವೆ ಎಂಬುದೇನೋ ತಿಳಿಯಿತು. ಹಾಗಂಥ ಎಲ್ಲರಿಗೂ ಕಪ್ಪು ದಾರ ಆಗಿ ಬರುವುದಿಲ್ಲ. ಹೌದು, ಎರಡು ರಾಶಿಯವರು ಕಪ್ಪು ದಾರ ಕಟ್ಟಿಕೊಂಡರೆ ಅದರಿಂದ ಪ್ರಯೋಜನಕ್ಕಿಂತ ಸಮಸ್ಯೆಯೇ ಹೆಚ್ಚಾಗುವುದು. ಹೀಗಾಗಿ ದಾರ ಕಟ್ಟುವ ಮುನ್ನ ಈ ಬಗ್ಗೆ ಎಚ್ಚರ ವಹಿಸಬೇಕು. 

मेष राशिफल (Aries Daily Horoscope)

ಮೇಷ(Aries)
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಮಂಗಳ ಕೆಂಪು ಬಣ್ಣದ್ದಾಗಿದ್ದು ಅದಕ್ಕೆ ಕಪ್ಪು ಬಣ್ಣ ಆಗಿ ಬರುವುದಿಲ್ಲ. ಹಾಗಾಗಿ, ಈ ರಾಶಿಯವರು ಕಪ್ಪು ದಾರ ಕಟ್ಟಬಾರದು. ಬದಲಿಗೆ ಕೆಂಪು ದಾರ ಕಟ್ಟಬಹುದು. 

বৃশ্চিক (Scorpio)

ವೃಶ್ಚಿಕ(Scorpio)
ವೃಶ್ಚಿಕ ರಾಶಿಯ ಅಧಿಪತಿ ಕೂಡಾ ಮಂಗಳನೇ ಆಗಿದ್ದಾನೆ. ಹಾಗಾಗಿ ಮೇಷದಂತೆಯೇ ವೃಶ್ಚಿಕ ರಾಶಿಯವರಿಗೂ ಕಪ್ಪು ಬಣ್ಣದ ದಾರ ಅಶುಭ ಉಂಟು ಮಾಡುತ್ತದೆ. ಜೊತೆಗೆ, ಮಂಗಳನ ಶುಭ ಪರಿಣಾಮಗಳೂ ಕೊನೆಯಾಗುತ್ತವೆ. 

कुंभ राशिफल (Aquarius monthly Horoscope)

ಈ ರಾಶಿಯವರಿಗೆ ಹೆಚ್ಚು ಶುಭ
ಕುಂಭ(Aquarius) ಹಾಗೂ ಮಕರ(Capricorn) ರಾಶಿಯ ಅಧಿಪತಿ ಶನಿಯಾಗಿದ್ದಾನೆ. ಶನಿಯ ಬಣ್ಣ ಕಪ್ಪು. ಹಾಗಾಗಿ, ಈ ಎರಡು ರಾಶಿಗಳಿಗೆ ಕಪ್ಪು ದಾರದ ಶುಭ ಪರಿಣಾಮಗಳು ಅಧಿಕವಾಗಿ ಲಭಿಸುತ್ತದೆ. ಇದರಿಂದ ಜೀವನದಲ್ಲಿ ಬಡತನ ನಿವಾರಣೆಯಾಗುವ ಜೊತೆಗೆ, ಉದ್ಯೋಗ ಸಂಬಂಧ ಉತ್ತಮ ಫಲಿತಾಂಶಗಳನ್ನು ಕಾಣಬಹುದಾಗಿದೆ. 
 

click me!