ಮನುಷ್ಯನಿಗೆ ಸಿಕ್ಕಾಪಟ್ಟೆ ಆಸೆಗಳಿರುತ್ತವೆ, ಆದರೆ ಯಾವಾಗ ಅವರಿಗೆ ಕೆಲವೊಂದು ವಿಷ್ಯಗಳ ಕಡೆಗೆ ದುರಾಸೆ ಹೆಚ್ಚಾಗುತ್ತದೆಯೋ ಆವಾಗ ಅವರ ನಾಶ ಆರಂಭವಾಗುತ್ತದೆ. ಈ ದುರಾಸೆಯಿಂದಾಗಿಯೇ ಸಮಸ್ಯೆಯ ಸುಳಿಗೆ ಸಿಲುಕಿ, ಜೀವನ ಹಾಳಾಗುವ ಸಾಧ್ಯತೆ ಇದೆ. ಹಾಗಿದ್ರೆ ಯಾವ ವಿಷ್ಯಗಳ ಕಡೆಗೆ ದುರಾಸೆ ಇರಬಾರದು ನೋಡೋಣ.
ಆಚಾರ್ಯ ಚಾಣಕ್ಯನ (Acharya Chanakya) ಅನುಸಾರ ಯಾವುದೇ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ಹಣದ ಮೇಲೆ ಯಾವ ರೀತಿಯ ಆಸೆ ದುರಾಸೆ ಇರಲೇಬಾರದು. ಇದರಿಂದ ಮುಂದೆ ಅವರಿಗೆ ಭಾರಿ ಸಮಸ್ಯೆ ಉಂಟಾಗುತ್ತದೆ.
ಅಷ್ಟೇ ಅಲ್ಲ ಇನ್ನೊಬ್ಬ ವ್ಯಕ್ತಿಯಲ್ಲಿನ ವೈಭೋಗ ಅಂದರೆ ಶ್ರೀಮಂತಿಕೆಯ (property) ಬಗ್ಗೆ ಸಹ ಆಸೆ ಪಡಬಾರದು ಎಂದು ಆಚಾರ್ಯ ಚಾಣಕ್ಯ ತಿಳಿಸಿದ್ದಾರೆ. ಇದರಿಂದವೂ ಸಮಸ್ಯೆಗಳು ಉಂಟಾಗುತ್ತವೆ.
ಆಚಾರ್ಯ ಚಾಣಕ್ಯ ಹೇಳುವಂತೆ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಶಕ್ತಿಯ ಆಧಾರದ ಮೇಲೆ ಅಥವಾ ತಮ್ಮ ಪರಿಶ್ರಮದ ಆಧಾರದ ಮೇಲೆ ಸಂಪತ್ತನ್ನು ಗಳಿಸಬೇಕೆ ವಿನಃ, ಇನ್ನೊಬ್ಬರ ಸಂಪತ್ತಿನ ಮೇಲೆ ಕಣ್ಣು ಹಾಕಬಾರದು ಇದರಿಂದ ಸಂತೋಷ ಸಿಗೋದಿಲ್ಲ.
ಯಾವ ವ್ಯಕ್ತಿ ಇನ್ನೊಬ್ಬರ ಸಂಪತ್ತಿಗಾಗಿ, ಇನ್ನೊಬ್ಬರ ಹಣಕ್ಕಾಗಿ ಅಥವಾ ಇನ್ನೊಬ್ಬರ ವೈಭವ ನೋಡಿ ಆಸೆ ಪಡುತ್ತಾನೋ, ಅದನ್ನು ಪಡೆಯಬೇಕೆಂಬ ದುರಾಸೆ ಹೊಂದುತ್ತಾನೋ ಅಂತಹ ವ್ಯಕ್ತಿ ಯಾವಾಗಲೂ ಸಮಸ್ಯೆ ಅನುಭವಿಸುತ್ತಾನೆ.
ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ಹಣದ ಆಸೆಗೆ ಬಿದ್ದು, ತನ್ನ ವಿವೇಕವನ್ನೇ ಕಳೆದುಕೊಂಡು ಬಿಡುತ್ತಾನೆ. ಇದರಿಂದಾಗಿ ತಪ್ಪು ಕೆಲಸ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ. ಇದರಿಂದ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚು.
ಹಣ ಅಥವಾ ಸಂಪತ್ತಿನ ದುರಾಸೆಗೆ ಬಿದ್ದರೆ, ಮನುಷ್ಯನಿಗೆ ತಪ್ಪು ಯಾವುದು, ಸರಿ ಯಾವುದು ಅನ್ನೋದೇ ಗೊತ್ತಾಗೋದಿಲ್ಲ. ಇದರಿಂದ ಅವನ ಜೀವನವೇ ಹಾಳಾಗುವ ಸಾಧ್ಯತೆ ಇದೆ.