ಮಹಾಶಿವರಾತ್ರಿ(Mahashivratri) ಹಬ್ಬ ಬರಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಶಿವನನ್ನು ಪೂಜಿಸಲು ಈ ಹಬ್ಬವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯ ದಿನದಂದು, ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸೋದರಿಂದ ಭಕ್ತರ ಬಯಕೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಈ ವರ್ಷ, ಮಹಾಶಿವರಾತ್ರಿಯಂದು ಅನೇಕ ಅಪರೂಪದ ಕಾಕತಾಳೀಯಗಳು ಸಂಭವಿಸುತ್ತಿವೆ, ಈ ಕಾರಣದಿಂದಾಗಿ ಈ ದಿನದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚುತ್ತಿದೆ.
ಈ ವರ್ಷ, ಮಹಾಶಿವರಾತ್ರಿಯನ್ನು ಫೆಬ್ರವರಿ 18, 2023 ರಂದು ಆಚರಿಸಲಾಗುತ್ತೆ. ಈ ವರ್ಷ, 30 ವರ್ಷಗಳ ನಂತರ, ಶನಿಯು(Shani) ಮಹಾಶಿವರಾತ್ರಿಯಂದು ತನ್ನ ಸ್ಥಳೀಯ ರಾಶಿ ಕುಂಭ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ. ಗ್ರಹಗಳ ಸ್ಥಾನಗಳ ಪ್ರಭಾವದಿಂದಾಗಿ, ಮಹಾದೇವ ಮಹಾಶಿವರಾತ್ರಿಯಂದು ಕೆಲವು ರಾಶಿಗಳ ಮೇಲೆ ಅಪಾರ ಅನುಗ್ರಹ ನೀಡಲಿದ್ದಾನೆ. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.
ಮೇಷ ರಾಶಿ - ಮಹಾಶಿವರಾತ್ರಿ ಹಬ್ಬ ಮೇಷ ರಾಶಿಯವರಿಗೆ(Aries) ಬಹಳ ವಿಶೇಷವಾಗಿರಲಿದೆ. ಶಿವನ ವಿಶೇಷ ಕೃಪೆಯಿಂದ, ಮೇಷ ರಾಶಿಯ ಜನರ ಆದಾಯವು ಹೆಚ್ಚಾಗುತ್ತೆ. ವೃತ್ತಿಜೀವನದಲ್ಲಿ ಉನ್ನತಿ ಉಂಟಾಗಲಿದೆ. ಉದ್ಯೋಗಿಗಳು ಹೊಸ ಅವಕಾಶಗಳನ್ನು ಪಡೆಯಬಹುದು.
ವೃಷಭ ರಾಶಿ - ಮಹಾಶಿವರಾತ್ರಿ ವೃಷಭ ರಾಶಿಯವರಿಗೆ ಜೀವನದಲ್ಲಿ ಸಂತೋಷ ತರಲಿದೆ. ಈ ಸಮಯದಲ್ಲಿ ಭಡ್ತಿಯೊಂದಿಗೆ (Promotion) ಆದಾಯದಲ್ಲಿ ಹೆಚ್ಚಳ ಪಡೆಯಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಪಡೆಯುತ್ತೀರಿ. ನೀವು ಭೂಮಿ, ಕಟ್ಟಡ ಅಥವಾ ವಾಹನವನ್ನು ಸಹ ಖರೀದಿಸಬಹುದು.
ಮಿಥುನ ರಾಶಿ- ಮಿಥುನ ರಾಶಿಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ನೀವು ಯಾವುದೇ ರೋಗ ತೊಡೆದು ಹಾಕಬಹುದು. ಕೆಲಸದ ಸ್ಥಳದಲ್ಲಿ(Work place) ಸಾಧನೆಯೊಂದಿಗೆ, ನೀವು ಹೊಸ ಜವಾಬ್ದಾರಿ ಪಡೆಯಬಹುದು. ಮನೆಯಲ್ಲಿ ಸಂತೋಷ ನೆಲೆಸಲಿದೆ. ಜೊತೆಗೆ ಹಣದ ಒಳಹರಿವು ಹೆಚ್ಚಾಗುತ್ತೆ.
ಧನಸ್ಸು ರಾಶಿ - ಮಹಾಶಿವರಾತ್ರಿಯ ಪವಿತ್ರ ಹಬ್ಬ ಧನುಸ್ಸು ರಾಶಿಯ ಜನರಿಗೆ ತುಂಬಾ ಶುಭ. ಶಿವನ (Shiva) ಕೃಪೆಯಿಂದ, ನಿಮ್ಮ ಆಸೆ ಈಡೇರಲಿದೆ. ವೃತ್ತಿ ಜೀವನದಲ್ಲಿ (Career) ಹೊಸ ಎತ್ತರ ಏರುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುವುದು.
ತುಲಾ - ತುಲಾ ರಾಶಿಯವರು ಮಹಾಶಿವರಾತ್ರಿಯಂದು ಮಹಾದೇವನ ಆಶೀರ್ವಾದ ಪಡೆಯುತ್ತಾರೆ. ಆದಾಯ ಹೆಚ್ಚಾಗಲಿದೆ. ಆರೋಗ್ಯದಲ್ಲಿ(Health) ಸುಧಾರಣೆ ಕಂಡುಬರುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪಾಲುದಾರಿಕೆಯಲ್ಲಿ ಮಾಡಿದ ಕೆಲಸದಲ್ಲಿ ಲಾಭವಾಗಲಿದೆ. ಭಡ್ತಿ ಸಿಗುವ ಲಕ್ಷಣಗಳು ಕಾಣುತ್ತಿವೆ.
ಕುಂಭ ರಾಶಿ(Aquarius) - ಮಹಾಶಿವರಾತ್ರಿ ಹಬ್ಬವು ಕುಂಭ ರಾಶಿಯವರಿಗೆ ತುಂಬಾ ಶುಭ ತರಲಿದೆ. ಕುಂಭ ರಾಶಿಯಲ್ಲಿ ಶನಿಯು ಕುಳಿತಿರುತ್ತಾನೆ. ಶನಿ ದೇವರನ್ನು ಮಹಾದೇವನ ಅತ್ಯಂತ ಆತ್ಮೀಯ ಶಿಷ್ಯ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಮಹಾಶಿವರಾತ್ರಿ ಹಬ್ಬ ಕುಂಭ ರಾಶಿಯವರಿಗೆ ಬಹಳ ವಿಶೇಷ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಹಣ ಲಾಭವಾಗಲಿದೆ.