ವೃಷಭ ರಾಶಿಯಲ್ಲಿ ಐದು ಗ್ರಹಗಳು ಸಂಚಾರ ಮಾಡುತ್ತಿದ್ದು ಇಲ್ಲಿ ಅಧಿಪತಿ ಶುಕ್ರ ಕೂಡ ಇರುವುದರಿಂದ ವೃತ್ತಿ, ಉದ್ಯೋಗ, ವ್ಯಾಪಾರದಲ್ಲಿ ಉನ್ನತ ಹುದ್ದೆಗೆ ಹೋಗುವುದು ನಿಶ್ಚಿತ. ಆದಾಯಕ್ಕೆ ಕೊರತೆಯಿಲ್ಲ. ಇನ್ಮುಂದೆ ಆದಾಯ ದಿನದಿಂದ ದಿನಕ್ಕೆ ವೃದ್ಧಿಯಾಗಲಿದೆ. ಎಲ್ಲೆಲ್ಲೂ ಪ್ರಾಬಲ್ಯ ಹೆಚ್ಚುತ್ತದೆ. ಹೆಚ್ಚಿನ ವೈಯಕ್ತಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿರೀಕ್ಷಿತ ಶುಭ ಸಮಾಚಾರ ಕೇಳಿ ಬರಲಿದೆ.