ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಆಗ ಗ್ರಹಗಳು ಇತರ ಗ್ರಹಗಳೊಂದಿಗೆ ಸೇರಿ ಯೋಗಗಳನ್ನು ರೂಪಿಸುತ್ತವೆ. ಮಂಗಳ ಗ್ರಹವು ಆಗಸ್ಟ್ 10 ರಂದು ರಾಜಯೋಗವನ್ನು ರೂಪಿಸುತ್ತಾನೆ. ಮಂಗಳ ಗ್ರಹವು 45 ದಿನಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಧೈರ್ಯ, ಶೌರ್ಯ, ಪರಾಕ್ರಮಕ್ಕೆ ಕಾರಕನಾದ ಮಂಗಳ, ಕನ್ಯಾ ರಾಶಿಯಲ್ಲಿ ಸಂಚರಿಸುತ್ತಾ ಪ್ಲುಟೊ ಜೊತೆ 120 ಡಿಗ್ರಿಯಲ್ಲಿ ಸಂಧಿಸಿ ನವಪಂಚಮ ಯೋಗವನ್ನು ರಚಿಸಲಿದ್ದಾನೆ. ಈ ಯೋಗವು ಮೂರು ರಾಶಿಯವರಿಗೆ ವಿಶೇಷ ಯೋಗವನ್ನು ನೀಡಲಿದೆ.