ಯೌವನದಲ್ಲಿ ಈ ತಪ್ಪು ಮಾಡಿದ್ರೆ… ಮುಂದೆ ಪಶ್ಚಾತ್ತಾಪ ಪಡಬೇಕಾದೀತು

First Published | Dec 16, 2022, 3:05 PM IST

ಚಾಣಕ್ಯನು ತನ್ನ ನೀತಿಯಲ್ಲಿ ಯೌವನವು ಜೀವನದ ಒಂದು ಭಾಗವಾಗಿದೆ, ಅದರ ಆಧಾರದ ಮೇಲೆ ನಮ್ಮ ನಾಳೆಯನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದನು. ಯೌವ್ವನದಲ್ಲಿ ನಾವು ಕೆಲವೊಂದು ಅಭ್ಯಾಸಗಳಿಂದ ದೂರ ಇರದಿದ್ದರೆ ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆದುದರಿಂದ ಅವುಗಳ ಬಗ್ಗೆ ಗಮನ ಹರಿಸಿ. 

ಆಚಾರ್ಯ ಚಾಣಕ್ಯ ತನ್ನ ಬುದ್ಧಿಮತ್ತೆ ಮತ್ತು ಜ್ಞಾನದ ಮೂಲಕ ಇಡೀ ಆಡಳಿತವನ್ನು ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿದ್ದ ವಿದ್ವಾಂಸನಾಗಿದ್ದನು. ಅವನ ನೀತಿಯ ಆಧಾರದ ಮೇಲೆ, ಒಬ್ಬ ಸಾಮಾನ್ಯ ಮಗುವ ಚಂದ್ರಗುಪ್ತ ಮೌರ್ಯ ಎಂದು ನಾವು ತಿಳಿದಿರುವ ದೊಡ್ಡ ಸಾಮ್ರಾಜ್ಯದ ಅಧಿಪತಿಯಾಗಲು ಸಾಧ್ಯವಾಯಿತು. ಚಾಣಕ್ಯನ ಮಾತುಗಳು ಇನ್ನೂ ಎಷ್ಟು ಪ್ರಸ್ತುತವಾಗಿವೆಯೆಂದರೆ ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ಜೀವನವನ್ನು ಸುಲಭಗೊಳಿಸಬಹುದು (Life Lesson). ಚಾಣಕ್ಯನು ಸಾಮಾಜಿಕ ಜೀವನವನ್ನು (Social LIfe) ಗಮನದಲ್ಲಿಟ್ಟುಕೊಂಡು ಅನೇಕ ವಿಷಯಗಳನ್ನು ಹೇಳಿದನು ಮತ್ತು ಬರೆದನು ಮತ್ತು ಇವುಗಳಿಂದ ಚಾಣಕ್ಯನು ನೀತಿ ಪುಸ್ತಕವನ್ನು ರಚಿಸಿದನು.

ಚಾಣಕ್ಯನು ತನ್ನ ಪುಸ್ತಕದಲ್ಲಿ ಯೌವನವು ಜೀವನದ ಒಂದು ಭಾಗವಾಗಿದೆ, ಅದರ ಆಧಾರದ ಮೇಲೆ ನಮ್ಮ ನಾಳೆಯನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದನು. ಯೌವ್ವನದಲ್ಲಿ ನಾವು ಮಾಡುವ ತಪ್ಪುಗಳು ಮುಂದೆ ನಮ್ಮ ಜೀವನದಲ್ಲಿ ಕಷ್ಟಪಡುವಂತೆ ಮಾಡುತ್ತದೆ. ಆದುದರಿಂದ ನಾವು ಯಾವ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ ಅನ್ನೋದನ್ನು ನೋಡೋಣ. 

Tap to resize

ಸಮಯ ವ್ಯರ್ಥ (wasting time): ಚಾಣಕ್ಯನು ಯುವಕರು ಜೀವನದ ಯಾವುದೇ ಹಂತದಲ್ಲಿ ಸಮಯ ವ್ಯರ್ಥ ಮಾಡಬಾರದು ಎಂದು ಹೇಳುತ್ತಾನೆ. ಅವರ ಪ್ರಕಾರ, ಸಮಯವು ತುಂಬಾ ಪ್ರಬಲವಾಗಿದೆ ಮತ್ತು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳದಿದ್ದರೆ, ನಾವು ಜೀವನದಲ್ಲಿ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಮಯದ ಬೆಲೆಯು ಯಶಸ್ಸಿನ ಕೀಲಿಕೈಯಾಗಿದೆ.

ಹಣದ ಮಹತ್ವ (importance of money):

ಚಾಣಕ್ಯನು ನಾವು ಹಣವನ್ನು ವ್ಯರ್ಥ ಮಾಡುವಂತಹ ತಪ್ಪುಗಳಿಂದ ದೂರವಿರಬೇಕು ಅಥವಾ ಅದರ ಮಹತ್ವವನ್ನು ಅರ್ಥಮಾಡಿಕೊಳ್ಬೇಕು ಎಂದು ಹೇಳುತ್ತಾನೆ. ನಮಗೆಲ್ಲರಿಗೂ ಹಣದ ಮಹತ್ವ ತಿಳಿದಿದೆ. ಆಚಾರ್ಯರ ಪ್ರಕಾರ, ನೀವು ಎಷ್ಟೇ ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ನೀವು ಯಾವಾಗಲೂ ಹಣವನ್ನು ಉಳಿಸಬೇಕು.

ಸೋಮಾರಿತನ (laziness):

ಚಾಣಕ್ಯ ನೀತಿಯ ಪ್ರಕಾರ, ಸೋಮಾರಿತನವು ವ್ಯಕ್ತಿಯ ಅತಿದೊಡ್ಡ ಶತ್ರುವಾಗಿದೆ. ಅದು ಯಾರನ್ನಾದರೂ ಆಳಿದರೆ, ಅವನು ಯಶಸ್ಸಿಗಾಗಿ ತನ್ನ ಜೀವನದುದ್ದಕ್ಕೂ ಹೆಣಗಾಡಬೇಕಾಗುತ್ತದೆ. ಯೌವನದಲ್ಲಿ, ಸೋಮಾರಿತನದಂತಹ ಅಭ್ಯಾಸಗಳನ್ನು ನಮ್ಮಿಂದ ದೂರವಿಡಬೇಕು.

ಕೋಪ (anger):

ಈ ಭಾವನೆಯು ನಮ್ಮನ್ನು ನೇರವಾಗಿ ವಿನಾಶದತ್ತ ಕೊಂಡೊಯ್ಯುತ್ತದೆ. ಯೌವನದಲ್ಲಿ ಕೋಪವು ನಮ್ಮನ್ನು ಆಕ್ರಮಿಸುತ್ತದೆ ಎಂಬುದು ನಿಜ, ಆದರೆ ಅದನ್ನು ಜಯಿಸುವವರನ್ನು ಮಾತ್ರ ಯಶಸ್ವಿ ಮನುಷ್ಯ ಎಂದು ಕರೆಯಲಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು ನಿಮ್ಮ ಕೋಪವನ್ನು ನಿಯಂತ್ರಿಸೋದನ್ನು ಕಲಿಯಿರಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
 

Latest Videos

click me!