ಮೆಕ್ಕಾ ಮತ್ತು ಮದೀನಾಕ್ಕೆ ಮುಸ್ಲಿಮೇತರರಿಗೆ ಏಕೆ ಅವಕಾಶವಿಲ್ಲ ಗೊತ್ತಾ?

First Published Jun 8, 2023, 5:16 PM IST

ಮೆಕ್ಕಾ ಮುಸ್ಲಿಂ ಭಾಂದವರ ಪವಿತ್ರ ಸ್ಥಳವಾಗಿದೆ. ಆದರೆ ಮುಸ್ಲಿಂ ಸಮುದಾಯದ ಜನರು ಮಾತ್ರ ಮೆಕ್ಕಾ-ಮದೀನಾಗೆ ಹೋಗಬಹುದು. ನಗರ ವ್ಯಾಪ್ತಿಯಲ್ಲಿಯೂ ಯಾವುದೇ ಮುಸ್ಲಿಮೇತರರ ಪ್ರವೇಶವಿಲ್ಲ. ಇದು  ಯಾಕೆ ಎಂದು ತಿಳಿಯಲು ಈ ಸ್ಟೋರಿ ಓದಿ. 

ಹಜ್ ಯಾತ್ರೆ ಅಂದ್ರೆ ಮೆಕ್ಕಾ(Mecca) ಮತ್ತು ಮದೀನಾ ಎಂಬ ಹೆಸರು ಮೊದಲು ನಿಮ್ಮ ಮನಸ್ಸಿಗೆ ಬಂದಿರಬಹುದು. ಅವುಗಳನ್ನು ಇಸ್ಲಾಮಿನ ಪವಿತ್ರ ಸ್ಥಳಗಳೆಂದು ಪರಿಗಣಿಸಲಾಗಿದೆ. ಪ್ರವಾದಿ ಮುಹಮ್ಮದ್ ಕೂಡ ಇಲ್ಲಿಯೇ ಜನಿಸಿದರು. ಮೆಕ್ಕಾ ಮತ್ತು ಮದೀನಾ ನಿಜವಾಗಿಯೂ ಏನು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಮೆಕ್ಕಾ ಮತ್ತು ಮದೀನಾ ಹಜ್ ಯಾತ್ರೆ ನಡೆಯುವ ಎರಡು ನಗರಗಳಾಗಿವೆ. ಎರಡೂ ಸೌದಿ ಅರೇಬಿಯಾದಲ್ಲಿವೆ. ಇಸ್ಲಾಂ ಕೂಡ ಇಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ. ಆದರೆ ಈ ಎರಡು ನಗರಗಳ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.
 

ಈ ನಗರಗಳನ್ನು ಇಸ್ಲಾಂ(Islam) ಧರ್ಮದ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಮತ್ತು ಅದಕ್ಕಾಗಿಯೇ ಇಲ್ಲಿಗೆ ಪ್ರವೇಶಿಸುವವರಿಗೆ ಕೆಲವು ವಿಶೇಷ ನಿಯಮಗಳಿವೆ. ಇವುಗಳಲ್ಲಿ ಮುಖ್ಯವಾದುದು ಏನೆಂದರೆ ಮುಸ್ಲಿಮರು ಮಾತ್ರ ಈ ನಗರಗಳಿಗೆ ಬರಬಹುದು. ಬೇರೆ ಯಾವುದೇ ಧರ್ಮದ ವ್ಯಕ್ತಿಯು ಇಲ್ಲಿಗೆ ಬರೋದನ್ನು ನಿಷೇಧಿಸಲಾಗಿದೆ. ಮುಸ್ಲಿಮೇತರರಿಗೆ ಮೆಕ್ಕಾ ಮತ್ತು ಮದೀನಾ ಪ್ರವೇಶಿಸಲು ಏಕೆ ಅವಕಾಶವಿಲ್ಲ ಎಂದು ಇಲ್ಲಿ ತಿಳಿಯಿರಿ.

ಹಿಂದೂಗಳು(Hindu) ಮಾತ್ರವಲ್ಲ, ಪ್ರತಿಯೊಬ್ಬ ಮುಸ್ಲಿಮೇತರರೂ ಹೋಗೋದನ್ನು ನಿಷೇಧಿಸಲಾಗಿದೆ. ಇದು ಕೇವಲ ಹಿಂದೂಗಳಿಗೆ ಮಾತ್ರವಲ್ಲ. ಈ ಸ್ಥಳವನ್ನು ಇಸ್ಲಾಮಿನ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಮತ್ತು ಎಲ್ಲಾ ಮುಸ್ಲಿಮೇತರರು ಮೆಕ್ಕಾಗೆ ಹೋಗೋದನ್ನು ನಿಷೇಧಿಸಲಾಗಿದೆ. ಹೌದು, ನೀವು ಮದೀನಾವನ್ನು ಪ್ರವೇಶಿಸಬಹುದು, ಆದರೆ ಅಲ್ಲಿಯೂ ನಗರದ ಕೆಲವು ಭಾಗಗಳು ಮುಸ್ಲಿಮರಿಗೆ ಮಾತ್ರ ಸೀಮಿತವಾಗಿವೆ. ಅಂದರೆ, ನೀವು ಮುಸ್ಲಿಮೇತರರಾಗಿದ್ದರೆ, ತುಂಬಾ ಅಗತ್ಯವಿದ್ದರೆ ಮಾತ್ರ ನೀವು ಮದೀನಾ ನಗರದ ಕೆಲವು ಭಾಗಗಳಿಗೆ ಹೋಗಬಹುದು.
 

ಮೆಕ್ಕಾದ ಬಗ್ಗೆ ಮಾಹಿತಿ: ಮೆಕ್ಕಾ ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ಇಲ್ಲಿಯೇ ಪ್ರವಾದಿ ಜನಿಸಿದರು ಮತ್ತು ಕುರಾನ್ ನ(Quran) ಮೊದಲ ಧರ್ಮೋಪದೇಶವನ್ನು ನೀಡಲಾಯಿತು. ಮೊದಲ ಪೂಜಾ ಸ್ಥಳ ಅಥವಾ ಮಸೀದಿಯನ್ನು ಸಹ ಇಲ್ಲಿ ನಿರ್ಮಿಸಲಾಗಿದೆ. ವಿಶ್ವದ ಅತ್ಯಂತ ಪ್ರಸಿದ್ಧ ಮಸೀದಿ ಸೌದಿ ಅರೇಬಿಯಾದ ಮೆಕ್ಕಾ ಪ್ರಾಂತ್ಯದ ಮೆಕ್ಕಾ ನಗರದಲ್ಲಿದೆ. ಇಲ್ಲಿರುವ ಕಾಬಾ (ಮಸೀದಿಯ ಮಧ್ಯದಲ್ಲಿರುವ ಕಪ್ಪು ಕಲ್ಲಿನಂತಹ ಕಟ್ಟಡ) ಅನ್ನು ಅಲ್ಲಾಹನ ಮನೆ ಎಂದು ಪರಿಗಣಿಸಲಾಗುತ್ತೆ ಮತ್ತು ಅದರ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ಹಜ್ ತೀರ್ಥಯಾತ್ರೆಯನ್ನು ಮಾಡಲಾಗುತ್ತೆ.

ಮದೀನಾ ಬಗ್ಗೆ ಮಾಹಿತಿ: ಮದೀನಾ ಇಸ್ಲಾಂ ಧರ್ಮದ ಎರಡನೇ ಪವಿತ್ರ ಸ್ಥಳವಾಗಿದೆ. ಇದನ್ನು ಪ್ರವಾದಿಯ ನಗರ ಎಂದು ಕರೆಯಲಾಗುತ್ತೆ. ಮೆಕ್ಕಾದ ನಂತರ ಪ್ರವಾದಿ ಮದೀನಾಕ್ಕೆ ಹೋದರು. ಈ ಎರಡೂ ಸ್ಥಳಗಳಿಗೆ ಹಜ್ ಯಾತ್ರೆ ತೆರಳಲು ಪ್ರತಿವರ್ಷ ಭಕ್ತರು ತೆರಳುತ್ತಾರೆ.
 

ಮುಸ್ಲಿಮೇತರರು ಏಕೆ ಹೋಗಬಾರದು?: ಸೌದಿ ಅರೇಬಿಯಾದಲ್ಲಿ(Saudi Arab) ರಾಯಭಾರ ಕಚೇರಿಗಳನ್ನು ನಿರ್ವಹಿಸುತ್ತಿರುವ ದೇಶಗಳಿಗೆ ಮುಸ್ಲಿಮೇತರ ನಾಗರಿಕರು ಪಾಕ್ ನಗರವನ್ನು ಪ್ರವೇಶಿಸದಂತೆ ತಡೆಯಲು ಸೂಚನೆ ನೀಡಲಾಗಿದೆ. ಅದನ್ನು ಅಲ್ಲಿ ಬೋರ್ಡ್ ಮೇಲೆ ಬರೆದಿರುವುದನ್ನು ಸಹ ನೋಡಬಹುದು. ಮುಸ್ಲಿಮರು ಮತ್ತು ಮುಸ್ಲಿಮೇತರರಿಗೆ ಪ್ರತ್ಯೇಕ ಮಾರ್ಗಗಳಿವೆ. 
 

ಇಸ್ಲಾಂ ಧರ್ಮದ ಪ್ರಕಾರ, ಬಹುದೇವತಾರಾಧನೆಯನ್ನು ನಂಬುವ ಜನರು ಮೆಕ್ಕಾ ನಗರಕ್ಕೆ ಹೋಗೋದನ್ನು ನಿಷೇಧಿಸಲಾಗಿದೆ ಎಂದು ಕುರಾನ್ ನಲ್ಲಿ (ಅತ್-ತವಾಬ್ 9:28) ಬರೆಯಲಾಗಿದೆ. ಆದರೆ, ಕ್ರೈಸ್ತರು ಮತ್ತು ಯಹೂದಿಗಳು ಬಹುದೇವತಾರಾಧನೆಯನ್ನು ನಂಬುವುದಿಲ್ಲ, ಆದರೆ ಅವರು ಹೋಗೋದನ್ನು ಸಹ ನಿಷೇಧಿಸಲಾಗಿದೆ.

ಒಬ್ಬ ಮುಸ್ಲಿಮನೂ(Muslim) ಹಜ್ ಯಾತ್ರೆಗೆ ಹೋದರೆ, ಅವನು ಅದೇ ಬಟ್ಟೆಗಳನ್ನು ಧರಿಸೋದರಿಂದ ಹಿಡಿದು ಅಲ್ಲಿ ವಾಸಿಸೋದು, ತಿನ್ನುವುದು ಮತ್ತು ಪೂಜಿಸುವವರೆಗೆ ಪ್ರತಿಯೊಂದು ನಿಯಮವನ್ನು ಅನುಸರಿಸಬೇಕಾಗುತ್ತೆ. ಅನೇಕ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕಾಗುತ್ತೆ.
 

ಇಸ್ಲಾಮಿನ ನಿಯಮಗಳ ಪ್ರಕಾರ ಒಬ್ಬ ಮುಸ್ಲಿಮ್ ಪವಿತ್ರನಲ್ಲದಿದ್ದರೆ, ಅವನ ಆಗಮನವನ್ನು ಸಹ ನಿಷೇಧಿಸಲಾಗಿದೆ. ಕುರಾನ್ ನಲ್ಲಿ ಮೆಕ್ಕಾ ಬಗ್ಗೆ ಮಾತ್ರ ಬರೆಯಲಾಗಿದ್ದರೂ, ಭದ್ರತಾ ಕಾರಣಗಳಿಗಾಗಿ, ಸೌದಿ ಸರ್ಕಾರವು ಮದೀನಾದ ಕೆಲವು ಸ್ಥಳಗಳಲ್ಲಿ ಮುಸ್ಲಿಮೇತರರ ಪ್ರವೇಶವನ್ನು ನಿಷೇಧಿಸಿದೆ.

ಮುಸ್ಲಿಮೇತರರು ಒಳಹೋಗಲು ಪ್ರಯತ್ನಿಸಿದರೆ ಏನಾಗುತ್ತೆ?: ಈ ಬಗ್ಗೆ ಸೌದಿಯಲ್ಲಿ ಕಠಿಣ ನಿಯಮಗಳಿವೆ. ಯಾರಾದರೂ ಹಾಗೆ ಮಾಡಿದರೆ, ಅವರು ಇಸ್ಲಾಮಿಕ್ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಆರೋಪಿಸಬಹುದು ಮತ್ತು ಅವರು ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಯನ್ನು(Punishment) ಪಡೆಯಬಹುದು. ಈ ಸಂದರ್ಭದಲ್ಲಿ, ಸೌದಿ ಅರೇಬಿಯಾದಿಂದ ಗಡೀಪಾರು ಮತ್ತು ಜೀವಾವಧಿ ನಿಷೇಧದಂತಹ ಗಂಭೀರ ಪ್ರಕರಣಗಳಲ್ಲಿ ಭಯಾನಕ ಶಿಕ್ಷೆಗಳನ್ನು ನೀಡಬಹುದು.
 

click me!