ಜ್ಯೋತಿಷ್ಯದ ಪ್ರಕಾರ, 44 ವರ್ಷಗಳ ಬಳಿಕ ಶನಿದೇವನು ಮೂರು ರಾಶಿಗಳ ಮೇಲೆ ವಿಶೇಷ ಕೃಪೆ ತೋರಲಿದ್ದಾನೆ. ಇದರಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಆರ್ಥಿಕ, ವೃತ್ತಿ ಮತ್ತು ವೈಯಕ್ತಿಕವಾಗಿ ಗಮನಾರ್ಹ ಸುಧಾರಣೆಗಳು ಕಂಡುಬರಲಿವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, 44 ವರ್ಷಗಳ ಬಳಿಕ ಮೂರು ರಾಶಿಚಕ್ರದವರ ಮೇಲೆ ಶನಿದೇವ ಕೃಪೆ ತೋರಲಿದ್ದಾನೆ. ಈ ಕೃಪೆಯಿಂದ ಮೂರು ರಾಶಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬರಲಿವೆ. ಆ ಮೂರು ರಾಶಿಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
24
ಮಿಥುನ ರಾಶಿ
ಶನಿಯ ಮಹಾ ಸಂಯೋಗದಿಂದ ಮಿಥುನ ರಾಶಿಯ ಮನೆಯಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣವಾಗುತ್ತದೆ. ಅತಿಥಿಗಳ ಆಗಮನ ಮನೆಯಲ್ಲಿ ಹೆಚ್ಚಿನ ಸಂತಸನ್ನುಂಟು ಮಾಡುತ್ತದೆ. ನವದಂಪತಿ ಪ್ರಣಯದ ಸಮಯ ಕಳೆಯಲಿದ್ದು, ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಇದು ಸೂಕ್ತ ಸಮಯವಾಗಿದೆ. ವ್ಯಾಪಾರಿಗಳು ಮತ್ತು ಉದ್ದಿಮೆಗಳಿಗೆ ಲಾಭದಾಯಕ ಆರ್ಡರ್ ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಲಿದ್ದಾರೆ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತೆಗೆದುಕೊಂಡ ಬರಲು ಇದು ಶುಭ ಸಮಯವಾಗಿದೆ.
34
ವೃಷಭ ರಾಶಿ
ಶನಿ ಕೃಪೆಯಿಂದ ಆರೋಗ್ಯ ಉತ್ತಮವಾಗಿರಲಿದ್ದು, ಹೊಸ ಜವಾಬ್ದಾರಿಗಳಿಂದ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ವೃಷಭ ರಾಶಿಯವರ ಭವಿಷ್ಯದಲ್ಲಿ ಬುದ್ಧಾದಿತ್ಯನಿದ್ದು, ಮುಂದಿನ ದಿನಗಳಲ್ಲಿ ಹೊಸ ಅವಕಾಶಗಳು ಲಭ್ಯವಾಗಲಿವೆ. ಈ ಸಮಯದಲ್ಲಿ ಸಂಗಾತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳೋದನ್ನು ಮರೆಯಬೇಡಿ. ಹೂಡಿಕೆಗೆ ಇದು ಶುಭ ಸಮಯವಾಗಿದ್ದು, ಗಮನಾರ್ಹವಾದ ಸಂಪತ್ತು ಲಾಭ ನಿಮ್ಮದಾಗಲಿದೆ. ಬಡವರಿಗೆ ದಾನ ಮಾಡಿ, ಮನೆಯಲ್ಲಿರುವ ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳಿ.
ಈ ಸಮಯದಲ್ಲಿ ಯಾವುದೇ ವ್ಯವಹಾರ ಆರಂಭಿಸಿದರೂ ನಿಮಗೆ ಒಳ್ಳೆಯ ರಿಟರ್ನ್ ನೀಡುತ್ತದೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆಗಳಿರುತ್ತವೆ. ಹೊಸ ಅವಕಾಶ ಮತ್ತು ಜವಾಬ್ದಾರಿಗಳಿಂದ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ನಿಮ್ಮೆಲ್ಲಾ ಕೆಲಸಗಳಿಗೆ ಮನೆಯವರಿಂದ ಅಪಾರ ಬೆಂಬಲ ಸಿಗುತ್ತದೆ. ಕೆಲಸದ ಒತ್ತಡದಲ್ಲಿದ್ರೂ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ.