ಸಾಲ ಇಸ್ಕೋಂಡೋರು ವಾಪಾಸ್ ಕೊಡ್ತಾ ಇಲ್ವಾ? ಹಾಗಿದ್ರೆ ರಾತ್ರಿ ಈ ಕೆಲ್ಸ ಸದ್ದಿಲ್ಲದೆ ಮಾಡಿ

First Published Jun 23, 2024, 10:11 AM IST

ಜ್ಯೋತಿಷ್ಯದಲ್ಲಿ, ಸಾಲ ಪಡೆದ ಹಣವನ್ನು ಪಡೆಯಲು ಕೆಲವು ವಿಶೇಷ ಪರಿಹಾರಗಳನ್ನು ವಿವರಿಸಲಾಗಿದೆ. ಈ ಕ್ರಮಗಳನ್ನು ಮಾಡುವುದರಿಂದ, ನಿಮ್ಮ ಸ್ಥಗಿತಗೊಂಡ ಹಣ ಹಿಂತಿರುಗುವ ಸಾಧ್ಯತೆಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ಈ ಲೇಖನದಲ್ಲಿ ಯಾವ ರೀತಿ ಹಣವನ್ನ ಮರಳಿ ಪಡಿಬೋದು ಅನ್ನೋದನ್ನು ನೋಡೋಣ. 
 

ಜೀವನದಲ್ಲಿ ಅನೇಕ ಬಾರಿ ಇಂತಹ ಸಂದರ್ಭಗಳು ಉದ್ಭವಿಸುತ್ತವೆ, ಕೆಲವೊಮ್ಮೆ ಸ್ನೇಹಿತರು ಅಥವಾ ಪ್ರೀತಿಪಾತ್ರರಿಗೆ ಸಹಾಯ ಮಾಡಲು ಹಣವನ್ನು ಸಾಲ ನೀಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸಾಲ (debt) ನೀಡಿದ ಹಣ ಬರೋದೆ ಇಲ್ಲ. ಇದರಿಂದ ನಾವು ತುಂಬಾನೆ ಕಷ್ಟ ಎದುರಿಸಬೇಕಾಗಿ ಬರುತ್ತೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗದ ಕಾರಣ ನಿದ್ರೆಯಿಲ್ಲದ ರಾತ್ರಿಗಳು, ಒತ್ತಡ ಹೆಚ್ಚುತ್ತದೆ. ಹಾಗಿದ್ರೆ ಸಾಲಕೊಟ್ಟ ಹಣವನ್ನು ಹೇಗೆ ಮರಳಿ ಪಡೆಯೋದು ಎನ್ನುವ ಯೋಚನೆ ನಿಮ್ಮ ಮನಸಿನಲ್ಲಿದ್ರೆ, ಇಲ್ಲಿದೆ ಅದಕ್ಕೆ ಪರಿಹಾರ. ಇವುಗಳನ್ನು ನೀವು ಚಾಚು ತಪ್ಪದೇ ಫಾಲೋ ಮಾಡಿದ್ರೆ, ಸಮಸ್ಯೆಗಳೇ ಇರೋದಿಲ್ಲ. 
 

ರಾತ್ರಿ 10 ಗಂಟೆಗೆ ಈ ಕೆಲಸವನ್ನ ಸದ್ದಿಲ್ಲದೆ ಮಾಡಿ: ತಂತ್ರ ಶಾಸ್ತ್ರದ ಪ್ರಕಾರ, ಹಣವನ್ನು ಪಡೆಯಲು, 11 ಲವಂಗಗಳು (clove), 11 ಉಪ್ಪಿನ ತುಂಡುಗಳನ್ನು ನೀಲಿ ಬಟ್ಟೆಯಲ್ಲಿ ಕಟ್ಟಿ. ನಂತ್ರ ಆ ವ್ಯಕ್ತಿಯನ್ನು ನೆನಪಿಸುತ್ತಾ (ನಿಮ್ಮಿಂದ ಸಾಲ ಪಡೆದ ವ್ಯಕ್ತಿ), ರಾತ್ರಿ 10 ಗಂಟೆ ಸುಮಾರಿಗೆ ಜಂಕ್ಷನ್ ಗೆ ಹೋಗಿ ಮತ್ತು ಅದನ್ನು ಸದ್ದಿಲ್ಲದೆ ಇರಿಸಿ. ಹೀಗೆ ಮಾಡೋದ್ರಿಂದ, ನೀಡಿದ ಹಣ ಹಿಂದಿರುಗಿ ಬರುತ್ತೆ. 

Latest Videos


ಈ ದಿನ ಅಪ್ಪಿ ತಪ್ಪಿಯೂ ಯಾರಿಗೂ ಸಾಲ ನೀಡಬೇಡಿ: ಯಾವತ್ತೂ ಮಂಗಳವಾರ ಮತ್ತು ಬುಧವಾರ ಯಾರಿಂದಲೂ ಸಾಲ (loan) ತೆಗೆದುಕೊಳ್ಳಬಾರದು, ತಿರುಗಿ ಸಾಲ ನೀಡಲೂ ಬಾರದು. ಈ ದಿನ ಹಣ ನೀಡಿದ್ರೆ, ಅಥವಾ ಪಡೆದ್ರೆ, ಆ ಹಣ ಮತ್ತೆ ನಿಮಗೆ ಸಿಗೋದು ತುಂಬಾನೆ ಕಷ್ಟವಾಗುತ್ತದೆ. ಇದಕ್ಕಾಗಿ, ನೀವು ಸಂಪೂರ್ಣ ವಿಧಿ ವಿಧಾನಗಳೊಂದಿಗೆ ಶ್ರೀಯಂತ್ರವನ್ನು ಸ್ಥಾಪಿಸಿ, ಲಕ್ಷ್ಮೀ ದೇವಿಯನ್ನು ಪೂಜಿಸಬೇಕು.

ಕರ್ಪೂರದಿಂದ ಈ ರೀತಿ ಮಾಡಿ: ಹಿಂತಿರುಗಿ ಬಾರದೇ ಇರುವ ಹಣವನ್ನು ಪಡೆಯಲು, ಶುಕ್ರವಾರ ಕರ್ಪೂರವನ್ನು ಸುಡಿ ಮತ್ತು ಅದರಿಂದ ಕಾಡಿಗೆ ತಯಾರಿಸಿ. ನಂತರ ನೀವು ಕಾಡಿಗೆಯಿಂದ ಕಾಗದದ ಮೇಲೆ ಯಾರಿಗೆ ಹಣ ಸಾಲ ನೀಡಿದ್ದೀರೋ ಅವರ ಹೆಸರು ಬರೆಯಿರಿ. ಈಗ ಏಳು ಬಾರಿ ಆ ಕಾಗದವನ್ನು ಮಡಚಿ, ನೀವು ಹಣ ಇಡುವ ಜಾಗದಲ್ಲಿ, ಅಂದರೆ ಅಲ್ಮಾರಿ, ಪೆಟ್ಟಿಗೆಯಲ್ಲಿ ಅದನ್ನ ಭದ್ರವಾಗಿಡಿ. ಇದರಿಂದ ನಿಮ್ಮಿಂದ ಪಡೆದುಕೊಂಡ ಹಣ ವಾಪಾಸ್ ಬರುತ್ತೆ. 

ಈ ವಸ್ತುವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ: ಸಾಲ ವಾಪಾಸ್ ಪಡೆಯಲು, ಲಕ್ಷ್ಮಿ ದೇವಿಯನ್ನು (Goddess Lakshmi) ಪೂಜಿಸಿ ಮತ್ತು ಪ್ರತಿದಿನ ಶ್ರೀಸೂಕ್ತವನ್ನು ಪಠಿಸಿ. ಅಲ್ಲದೆ, ಶುಕ್ರವಾರ, ಲಕ್ಷ್ಮಿ ದೇವಿಯ ಮುಂದೆ 5 ಹಳದಿ ಕವಡೆಗಳನ್ನಿಟ್ಟು ಪೂಜಿಸಿ. ಹಳದಿ ಕವಡೆಗಳು ಲಕ್ಷ್ಮಿ ದೇವಿಯನ್ನು ಪ್ರತಿನಿಧಿಸುತ್ತದೆ ಎನ್ನುವ ನಂಬಿಕೆ ಇದೆ. ಇದನ್ನು ಮಾಡೋದ್ರಿಂದ, ನಿಮ್ಮ ಸಿಕ್ಕಿಬಿದ್ದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚ್ಚಾಗುತ್ತೆ, ಅಲ್ಲದೇ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತೆ. 

ಶುಕ್ರವಾರ ರಾತ್ರಿ ಇದನ್ನ ಮಾಡಿ: ಶುಕ್ರವಾರ(Friday) ಸ್ಟೀಲ್ ಅಥವಾ ಐರನ್ ಲಾಕ್ ಖರೀದಿಸಿ. ಆದರೆ ಬೀಗ ಕ್ಲೋಸ್ ಆಗಿರಬೇಕು ಅನ್ನೋದು ನೆನಪಿರಲಿ ಮತ್ತು ಅಂಗಡಿಯವರು ಆ ಬೀಗವನ್ನು ತೆರೆಯಲು ಅಥವಾ ನೀವು ಅದನ್ನು ತೆರೆಯಲು ಪ್ರಯತ್ನಿಸಬೇಡಿ. ಇದರ ನಂತರ, ಪೆಟ್ಟಿಗೆಯಲ್ಲಿ ಬೀಗವನ್ನು ಇರಿಸಿ, ಅದನ್ನ ರಾತ್ರಿ ನಿಮ್ಮ ಹಾಸಿಗೆಯ ಬಳಿ ಇರಿಸಿ, ನಂತರ ಶನಿವಾರದಂದು ಬೆಳಿಗ್ಗೆ ಬೀಗ ತೆರೆಯದೆ ದೇವಾಲಯದ ಬಳಿ ಬೀಗವನ್ನು ಇರಿಸಿ. ಬೀಗವನ್ನು ಆನ್ ಮಾಡಿ ಮತ್ತು ಏನನ್ನೂ ಹೇಳದೆ, ಮನೆಗೆ ಹಿಂತಿರುಗಿ. ಈ ಕ್ರಮವನ್ನು ಅನುಸರಿಸೋದ್ರಿಂದ ನಿಂತ ಹಣ ನಿಮಗೆ ಮತ್ತೆ ಸಿಗುತ್ತಂತೆ.

ಸೂಚನೆ: ಈ ಎಲ್ಲಾ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುತ್ತಿದೆ, ನಿಮ್ಮ ನಂಬಿಕೆಯ ಮೇಲೆ ಜ್ಯೋತಿಷ್ಯ ಮತ್ತು ಧರ್ಮದ ಪರಿಹಾರಗಳು ಮತ್ತು ಸಲಹೆಗಳನ್ನು ಪ್ರಯತ್ನಿಸಿ. ವಿಷಯದ ಉದ್ದೇಶವು ನಿಮಗೆ ಉತ್ತಮ ಸಲಹೆಯನ್ನು ನೀಡುವುದು ಅಷ್ಟೇ.  

click me!