Krishna Janmashtami Wishes 2023: ಜನ್ಮಾಷ್ಟಮಿಯ ಶುಭಾಶಯಗಳು, ಭಗವದ್ಗೀತೆಯ ಕೋಟ್ಸ್‌ಗಳು..!

Published : Sep 06, 2023, 06:00 AM IST

ಕೃಷ್ಣ ಜನ್ಮಾಷ್ಟಮಿಯು ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಅತಿ ದೊಡ್ಡ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯುತ್ತಾರೆ ಕೃಷ್ಣ ಭಕ್ತರಿಗೆ ದೊಡ್ಡ ದಿನ. ಈ ದಿನ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು, ವಾಟ್ಸಾಪ್, ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಹಾಕಲು ಅತ್ಯುತ್ತಮ ಸಂದೇಶಗಳು, ಉಲ್ಲೇಖಗಳು, ಶುಭಾಶಯಗಳು, ಚಿತ್ರಗಳು ಮತ್ತು ಭಗವದ್ಗೀತೆಯಲ್ಲಿ ಸ್ವತಃ ಶ್ರೀಕೃಷ್ಣನ ಉಲ್ಲೇಖಗಳು ಇಲ್ಲಿವೆ..

PREV
16
Krishna Janmashtami Wishes 2023: ಜನ್ಮಾಷ್ಟಮಿಯ ಶುಭಾಶಯಗಳು, ಭಗವದ್ಗೀತೆಯ ಕೋಟ್ಸ್‌ಗಳು..!

'ಚಳಿಗಾಲ ಮತ್ತು ಬೇಸಿಗೆಯ ಋತುಗಳ ಗೋಚರಿಸುವಿಕೆ ಮತ್ತು ಕಣ್ಮರೆಯಂತೆ ಸಂತೋಷ ಮತ್ತು ಸಂಕಟ ಶಾಶ್ವತವಲ್ಲ. ಕಾಲಾನಂತರದಲ್ಲಿ ಅವು ಕಣ್ಮರೆಯಾಗುವುವು. ಈ ಭಾವಗಳು ನಮ್ಮ ಇಂದ್ರಿಯ ಗ್ರಹಿಕೆಯಿಂದ ಉದ್ಭವಿಸುತ್ತವೆ. ಹಾಗಾಗಿ, ಪ್ರತಿ ಸನ್ನಿವೇಶವನ್ನೂ ಸಕಾರಾತ್ಮಕವಾಗಿ ಗ್ರಹಿಸಲು ಅಭ್ಯಸಿಸಬೇಕು.'

26

 'ಶ್ರೀಕೃಷ್ಣನನ್ನು ಯಾವಾಗಲೂ ನಿಮಗೆ ಆಶೀರ್ವಾದವನ್ನು ಧಾರೆಯೆರೆಯಲೆಂದು ಪ್ರಾರ್ಥಿಸುತ್ತೇನೆ ಮತ್ತು ಜೀವನದಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸಲು ನಿಮಗೆ ಶಕ್ತಿಯನ್ನು ನೀಡಲಿ ಎಂದು ಬೇಡಿಕೊಳ್ಳುತ್ತೇನೆ. ಕೃಷ್ಣ ಜನ್ಮಾಷ್ಟಮಿ 2023 ರ ಶುಭಾಶಯಗಳು.'
 

36

'ಕೃಷ್ಣ ಜನ್ಮಾಷ್ಟಮಿಯ ಆಚರಣೆಗಳು ನಿಮ್ಮ ಹೃದಯದಲ್ಲಿ ಭರವಸೆ, ಶಾಂತಿ ಮತ್ತು ಸಂತೋಷವನ್ನು ತುಂಬಲಿ. ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು'

46

'ಬೇರೊಬ್ಬರ ಜೀವನವನ್ನು ಪರಿಪೂರ್ಣತೆಯಿಂದ ಅನುಕರಿಸಿ ಬದುಕುವುದಕ್ಕಿಂತ ನಿಮ್ಮ ಸ್ವಂತ ಹಣೆಬರಹವನ್ನು ಅಪೂರ್ಣವಾಗಿ ಬದುಕುವುದು ಉತ್ತಮ.'

56

ಹರೇ ಕೃಷ್ಣ, ಹರೇ ಕೃಷ್ಣ... ಕೃಷ್ಣ ಕೃಷ್ಣ, ಹರೇ ಹರೇ... ನಿಮಗೂ ನಿಮ್ಮ ಕುಟುಂಬಕ್ಕೂ ಸಂತೋಷ ಮತ್ತು ಸಂಭ್ರಮದ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು..
 

66

ಶ್ರೀಕೃಷ್ಣನ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಇರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಜನ್ಮಾಷ್ಟಮಿಯ ಶುಭಾಶಯಗಳು..
 

Read more Photos on
click me!

Recommended Stories