Grahan 2023: ಹೊಸ ವರ್ಷದಲ್ಲೆಷ್ಟು ಬಾರಿ ಗ್ರಹಣ? ಯಾವಾಗ?

Published : Dec 08, 2022, 10:35 AM ISTUpdated : Dec 08, 2022, 10:39 AM IST

ಹೊಸ ವರ್ಷದಲ್ಲಿ ಎಷ್ಟು ಬಾರಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ? ಈ ಗ್ರಹಣಗಳ ದಿನಾಂಕಗಳು, ಸೂತಕ ಕಾಲದ ಸಮಯ ಮತ್ತು ಎಲ್ಲವನ್ನೂ ತಿಳಿಯೋಣ.

PREV
17
Grahan 2023: ಹೊಸ ವರ್ಷದಲ್ಲೆಷ್ಟು ಬಾರಿ ಗ್ರಹಣ? ಯಾವಾಗ?

2022 ಮುಗಿಯುತ್ತಾ ಬಂದಿದೆ. ಈ ವರ್ಷ 2 ಸೂರ್ಯ ಗ್ರಹಣ ಹಾಗೂ 2 ಚಂದ್ರಗ್ರಹಣ ಸೇರಿ ಒಟ್ಟು 4 ಗ್ರಹಣಗಳಿಗೆ ಸಾಕ್ಷಿಯಾಗಿದ್ದೇವೆ. ಗ್ರಹಣವು ಬಹಳ ಪ್ರಮುಖ ಖಗೋಳ ವಿದ್ಯಮಾನವಾಗಿದೆ. ಇದು ಭೂಮಿಯ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡಾ ಗ್ರಹಣಕ್ಕೆ ಬಹಳ ಪ್ರಾಶಸ್ತ್ಯವಿದೆ.

27

ಬರಲಿರುವ ವರ್ಷ 2023ರಲ್ಲಿ ಎಷ್ಟು ಗ್ರಹಣಗಳಿವೆ? ಅವುಗಳಲ್ಲಿ ಸೂರ್ಯಗ್ರಹಣವೆಷ್ಟು, ಚಂದ್ರಗ್ರಹಣವೆಷ್ಟು? ಯಾವಾಗ ಸಂಭವಿಸುತ್ತವೆ? ಸೂತಕ ಕಾಲವೇನು ಎಲ್ಲ ವಿವರಗಳನ್ನು ಇಲ್ಲಿ ತಿಳಿಸುತ್ತೇವೆ.

37

Grahan 2023 Dates: ಹೊಸ ವರ್ಷದಲ್ಲಿ ಅಂದರೆ 2023ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಇದರಲ್ಲಿ 2 ಸೂರ್ಯಗ್ರಹಣ ಮತ್ತು 2 ಚಂದ್ರಗ್ರಹಣ ಇರುತ್ತದೆ. 
2023ರಲ್ಲಿ ಮೊದಲ ಗ್ರಹಣವು 20 ಏಪ್ರಿಲ್ 2023ರಂದು ಸಂಭವಿಸುತ್ತದೆ. ಇದು ಸೂರ್ಯಗ್ರಹಣವಾಗಿರಲಿದೆ. ಪಂಚಾಂಗದ ಪ್ರಕಾರ, ಈ ಸೂರ್ಯಗ್ರಹಣವು ಬೆಳಿಗ್ಗೆ 7.04ರಿಂದ ಮಧ್ಯಾಹ್ನ 12.29ರವರೆಗೆ ಸಂಭವಿಸುತ್ತದೆ. 2023ರ ಎರಡನೇ ಸೂರ್ಯಗ್ರಹಣ ಮತ್ತು ವರ್ಷದ ಕೊನೆಯ ಗ್ರಹಣ ಶನಿವಾರ, 14 ಅಕ್ಟೋಬರ್ 2023ರಂದು ಸಂಭವಿಸುತ್ತದೆ.

47

ಪಂಚಾಂಗದ ಪ್ರಕಾರ, 2023ರ ಎರಡೂ ಸೂರ್ಯಗ್ರಹಣಗಳು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ನಮಗೆ ಯಾವುದೇ ಸೂತಕ ಕಾಲ ಇರುವುದಿಲ್ಲ. ಅಕ್ಟೋಬರ್ 14, 2023ರಂದು ಸೂರ್ಯಗ್ರಹಣವು ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಅಟ್ಲಾಂಟಿಕಾ ಮತ್ತು ಆರ್ಕ್ಟಿಕ್ನಲ್ಲಿ ಗೋಚರಿಸುತ್ತದೆ.

57

Chandra Grahan 2023 Date: 2023ರ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5, 2023ರಂದು ನಡೆಯುತ್ತದೆ. ಎರಡನೇ ಚಂದ್ರಗ್ರಹಣವು ಅಕ್ಟೋಬರ್ 29, 2023ರಂದು ಬೆಳಿಗ್ಗೆ 01.06ರಿಂದ 02.22 ರವರೆಗೆ ಇರುತ್ತದೆ. ಸ್ಥಳೀಯ ಗ್ರಹಣದ ಅವಧಿಯು ಒಂದು ಗಂಟೆ ಹದಿನಾರು ನಿಮಿಷಗಳು ಮತ್ತು ಹದಿನಾರು ಸೆಕೆಂಡುಗಳವರೆಗೆ ಇರುತ್ತದೆ.

67

2023ರ ಮೊದಲ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಚಂದ್ರಗ್ರಹಣವು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಆಗ್ನೇಯ ಯುರೋಪ್, ಭಾರತೀಯ ಮತ್ತು ಪೆಸಿಫಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ. ಮತ್ತು ಎರಡನೇ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆ.
 

77

ಗ್ರಹಣದ ಸೂತಕ ಅವಧಿ: ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, 2023ರಲ್ಲಿ ಸಂಭವಿಸುವ ಎರಡೂ ಸೂರ್ಯಗ್ರಹಣಗಳು ಭಾರತದಲ್ಲಿ ಗೋಚರಿಸುವುದಿಲ್ಲ. ಅದಕ್ಕಾಗಿಯೇ ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿಲ್ಲ. ಅಂತೆಯೇ 2023ರ ಮೊದಲ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಎರಡನೇ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಅದಕ್ಕಾಗಿಯೇ ಎರಡನೇ ಚಂದ್ರಗ್ರಹಣದ ಸೂತಕ ಅವಧಿ ಮಾತ್ರ ಮಾನ್ಯವಾಗಿರುತ್ತದೆ.

click me!

Recommended Stories