ಚಿನ್ನದ ಗದೆ ಉಂಗುರ, ಸರ... ಲಾಲ್ಬಗುಚಾ ರಾಜ ಗಣಪನಿಗೆ ದುಬಾರಿ ಗಿಫ್ಟ್ ನೀಡಿದ ಭಕ್ತರು

Published : Sep 21, 2023, 11:41 AM ISTUpdated : Sep 21, 2023, 12:11 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಅತ್ಯಂತ ಅದ್ದೂರಿ ಹಬ್ಬ ಗಣೇಶೋತ್ಸವ . ರಾಜ್ಯಾದ್ಯಂತ 10 ದಿನಗಳ ಕಾಲ ಭರ್ಜರಿಯಾಗಿ ನಡೆಯುವ ಗಣೇಶೋತ್ಸವಕ್ಕೆ ಗಣೇಶ ಚತುರ್ದಶಿಯಂದು ಚಾಲನೆ ಸಿಕ್ಕಿದ್ದು, ಗಣೇಶ ಭಕ್ತರು ಸಮರೋಪಾದಿಯಲ್ಲಿ ದೇವಸ್ಥಾನದ ಪೆಂಡಾಲ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ಜೊತೆಗೆ ವಿಘ್ನ ನಿವಾರಕನಿಗೆ ಹಣ, ಚಿನ್ನ ಆಭರಣ ಮುಂತಾದ ಗಿಫ್ಟ್‌ಗಳೊಂದಿಗೆ ಭಕ್ತರು ಬರುತ್ತಿದ್ದಾರೆ.  ಮುಂಬೈನ ಲಾಲ್‌ಬಗುಚಾದಲ್ಲಿದಲ್ಲಿ ಸ್ಥಾಪಿಸಿರುವ ಲಾಲ್‌ಬಗುಚಾ ಕಾ ರಾಜ ಖ್ಯಾತಿಯ ಗಣೇಶನಿಗೆ ಉಡುಗೊರೆಗಳ ಸುರಿಮಳೆಯೇ ಬಂದಿದ್ದು, ಏನೆಲ್ಲಾ ಸಿಕ್ಕಿದೆ ಎಂಬ ಡಿಟೇಲ್ ಇಲ್ಲಿದೆ.   

PREV
17
ಚಿನ್ನದ ಗದೆ ಉಂಗುರ, ಸರ... ಲಾಲ್ಬಗುಚಾ ರಾಜ ಗಣಪನಿಗೆ ದುಬಾರಿ ಗಿಫ್ಟ್ ನೀಡಿದ ಭಕ್ತರು
Lalbaugcha raja

ಲಾಲ್‌ಬಗುಚಾ ರಾಜಾನ ದರ್ಶನಕ್ಕೆ ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ತಾರೆಯರು, ರಾಜಕಾರಣಿಗಳು, ಖ್ಯಾತ ಉದ್ಯಮಿಗಳು ಭೇಟಿ ನೀಡುತ್ತಾರೆ.  ಅದೇ ರೀತಿ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಆಗಮಿಸಿದ್ದರು.

27
Lalbaugcha raja

ಮುಕೇಶ್ ಅಂಬಾನಿ ದಂಪತಿ 2 ಸಾವಿರ ರೂಪಾಯಿ ನೋಟುಗಳಿದ್ದ ಬೃಹತ್ ಮಾಲೆಯನ್ನು ಲಾಲ್‌ಬಗುಚಾ ರಾಜನಿಗೆ ಅರ್ಪಿಸಿದ್ದಾರೆ. ಹಾಗೆಯೇ ಅಪರಿಚಿತ ಭಕ್ತರು ಕೂಡ ಭಾರಿ ಮೊತ್ತದ ಉಡುಗೊರೆಯನ್ನು ಗಣೇಶನಿಗೆ ನೀಡಿದ್ದಾರೆ. 

37
Lalbaugcha raja

ಗಣೇಶನಿಗೆ ಬಂದ ಕಾಣಿಕೆಯಾಗಿ ಬಂದ ದುಬಾರಿ ಗಿಫ್ಟ್ ಹಾಗೂ ಹಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್, ಲಾಲ್‌ಬಗುಚಾ ರಾಜನಿಗೆ ಬಂದ ಹಣ ಹಾಗೂ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಗಣೇಶ ಸೇವಾ ಸಮಿತಿಯ ಸದಸ್ಯರು ಲೆಕ್ಕ ಹಾಕುತ್ತಿರುವ ದೃಶ್ಯ ವೈರಲ್ ಆಗಿದೆ. 

47
Lalbaugcha raja

ವೈರಲ್ ಆಗಿರುವ ವೀಡಿಯೋದಲ್ಲಿ ಕಾಣಿಸುವಂತೆ ಗಣೇಶನಿಗೆ ಚಿನ್ನದ ಬಿಸ್ಕೆಟ್‌, ಚಿನ್ನದ ಗದೆ, ಬೆಳ್ಳಿಯ ಗಣೇಶನ ಮೂರ್ತಿಗಳು, ಬೆಳ್ಳಿ ಸರ, ಚಿನ್ನದ ಉಂಗುರಗಳು ಸರ, ಚಿನ್ನದ ಹೂಗಳು ಬಂದಿವೆ.

57
Lalbaugcha raja

ಬೆಳ್ಳಿಯ ತಲೆಕವಚ ಹಾಗೂ ಚಿನ್ನದ ಸರ ಬ್ರಿಟಿಷ್ ಹಾಗೂ ಅಮೆರಿಕ್ ಡಾಲರ್ ಕರೆನ್ಸಿಗಳು  ಸೇರಿದಂತೆ ಅನೇಕ ರೀತಿಯ ಗಿಫ್ಟ್‌ಗಳು ಬಂದಿವೆ. ಇದರ ಜೊತೆಗೆ ರೆಡಿಮೇಡ್‌ ಸಿಹಿತಿನಿಸು ಚಾಕೋಲೇಟ್‌ಗಳನ್ನು ಕೂಡ ಗಣೇಶನಿಗೆ ಗಿಫ್ಟ್ ಆಗಿ ನೀಡಿದ್ದಾರೆ ಭಕ್ತರು. 

67
Lalbaugcha raja

ಇನ್ನು ಮುಂಬೈನಲ್ಲಿ ದೇಶದಲ್ಲೇ ಅತ್ಯಂತ ಅದ್ದೂರಿಯಾಗಿ ಗಣೇಶ ಉತ್ಸವವನ್ನು ನಡೆಸಲಾಗುತ್ತದೆ. ಸ್ಥಳಗಳಿಗೆ ತಕ್ಕಂತೆ ಅಲ್ಲಿನ ಗಣೇಶನಿಗೆ ಹೆಸರನ್ನಿಡಲಾಗುತ್ತದೆ. ಅದರಲ್ಲೂ ಈ ಲಾಲ್‌ಬಗುಚಾ ಗಣೇಶ  ಮುಂಬೈನಲ್ಲೇ ಸಖತ್ ಫೇಮಸ್ ಆಗಿದ್ದು ಬಾಲಿವುಡ್‌ ತಾರೆಯರಾದಿಯಾಗಿ ಅನೇಕರು ಇಲ್ಲಿಗೆ ಆಗಮಿಸುತ್ತಾರೆ. 

77
Lalbaugcha raja

ಹಾಗೆಯೇ ಇಲ್ಲಿ ಜಿಎಸ್‌ಬಿ ಸೇವಾ ಮಂಡಲ್ ಸ್ಥಾಪಿಸುವ ಗಣೇಶ ದೇಶದಲ್ಲೇ ಅತ್ಯಂತ ಶ್ರೀಮಂತ ಗಣೇಶ ಎನಿಸಿಕೊಂಡಿದ್ದಾನೆ. ಈ ಗಣೇಶನಿಗೆ ಈ ಬಾರಿ 69 ಕೆಜೆ ಚಿನ್ನ 336 ಕೆಜಿ ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗಿದೆ. ಹಾಗೆಯೇ ಮುಂಬೈನ ಗಣೇಶ ಗಲ್ಲಿಯ ಮುಂಬೈಚಾ ರಾಜ, ಅಂದೇರಿಚಾ ರಾಜ, ಗಿರ್‌ಗಾಂವ್‌ ಚಾ ರಾಜ ಗಣೇಶ ಕೂಡ ಫೇಮಸ್‌ ಗಣೇಶ ಪೆಂಡಾಲ್‌ಗಳಾಗಿದ್ದು, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 

Read more Photos on
click me!

Recommended Stories