Chanakya Niti: ಬುದ್ದಿವಂತ ಜನರು ಯಾವತ್ತೂ ಈ ಕೆಲಸಗಳನ್ನು ಮಾಡಬಾರದಂತೆ !

First Published | Feb 15, 2024, 12:13 PM IST

ಆಚಾರ್ಯ ಚಾಣಕ್ಯ ನೀತಿಯನ್ನು ಜೀವನದಲ್ಲಿ ಪಾಲಿಸಿದರೆ ಎಂದಿಗೂ ಸೋಲು ಎಂಬುದೇ ಬರೋದಿಲ್ಲ. ಅಂತಹ ಚಾಣಕ್ಯ ನೀತಿ ಯಾವ ಕೆಲಸಗಳನ್ನು ಮಾಡಬಾರದು ಅಂತ ತಿಳಿಸಿದೆ. ಅವುಗಳ ಬಗ್ಗೆ ತಿಳಿಯೋಣ.

ಆಚಾರ್ಯ ಚಾಣಕ್ಯ (Acharya Chanakya) ತಮ್ಮ ನೀತಿಯಿಂದಾಗಿ ಹಿಂದೆ ಬಹಳ ಪ್ರಸಿದ್ಧರಾಗಿದ್ದರು. ಇಂದಿಗೂ ಸಹ ಚಾಣಕ್ಯ ನೀತಿಗಳು ಪ್ರಸ್ತುತವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಎಂತಹ ಯುದ್ಧವನ್ನು ಸಹ ಗೆದ್ದು ಬರಬಹುದು. 
 

ಯಾವ ಜನರು ತಮ್ಮ ಜೀವನದಲ್ಲಿ ಚಾಣಕ್ಯ ನೀತಿಯನ್ನು ಪಾಲಿಸಿಕೊಂಡು ಹೋಗುತ್ತಾರೋ ಅವರು ಜೀವನದಲ್ಲಿ ಸಫಲತೆಯನ್ನು ಪಡೆಯುತ್ತಾರೆ. ಅವರು ಮುಟ್ಟಿದ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ (success in life) ಅನ್ನೋದು ನಿಜ. 
 

Tap to resize

ಚಾಣಕ್ಯ ಬುದ್ದಿವಂತ ಅಥವಾ ಜ್ಞಾನಿ ಜನರು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ, ಅದರಲ್ಲಿ ಮೊದಲನೆಯದು ಏನೆಂದರೆ ವ್ಯಕ್ತಿಯೂ ಯಾವತ್ತೂ ಶಕ್ತಿ ಶಾಲಿ ಜೊತೆ ಶತ್ರುತ್ವ ಮತ್ತು ದುರ್ಬಲರೊಂದಿಗೆ ಮಿತ್ರತ್ವ ಹೊಂದುವುದು ಸರಿಯಲ್ಲ, ಎರಡೂ ಸಹ ನೋವನ್ನುಂಟು ಮಾಡುತ್ತದೆ ಎಂದು ಹೇಳುತ್ತಾರೆ. 
 

ಬುದ್ಧಿ ಮತ್ತು ಜ್ಞಾನದಿಂದ ಅಜ್ಞಾನ ನಷ್ಟವಾಗುತ್ತದೆ. ಇದರಿಂದ ನಿಮ್ಮನ್ನು ಆವರಿಸಿರುವ ಎಲ್ಲಾ ಸಮಸ್ಯೆಗಳು ಸಹ ನಿವಾರಣೆಯಾಗಲು ಸಾಧ್ಯವಿದೆ. ಹಾಗಾಗಿ ಜ್ಞಾನವನ್ನು ಹೊಂದುವುದು ತುಂಬಾನೆ ಮುಖ್ಯವಾಗಿದೆ. 
 

ಇನ್ನು ಚಾಣಕ್ಯನ ಅನುಸಾರ ಎಲ್ಲಿ ನಿಮಗೆ ಗೌರವ (respect), ಸನ್ಮಾನ ಸಿಗೋದಿಲ್ಲವೋ ಅಂತಹ ಜಾಗಕ್ಕೆ ಹೋಗುವುದು ಸರಿಯಲ್ಲ. ಇದರಿಂದ ಪದೇ ಪದೇ ನಿಮಗೆ ಅವಮಾನವಾಗುತ್ತಲೇ ಇರುತ್ತದೆ. ಹಾಗಾಗಿ ಅಲ್ಲಿಗೆ ಹೋಗದೇ ಇರೋದು ಉತ್ತಮ. 
 

ಇದಲ್ಲದೇ ಯಾವ ಜಾಗದಲ್ಲಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಇರೋದಿಲ್ಲವೋ ಅಂತಹ ಜಾಗದಲ್ಲಿ ನೀವು ನೆಲೆಸುವುದು ಸರಿಯಲ್ಲ. ಇದರಿಂದ ನೀವು ಹಲವು ಸಮಸ್ಯೆಗಳನ್ನು (problems) ಎದುರಿಸಬೇಕಾಗಿ ಬರುತ್ತದೆ. 
 

ಯಾವ ವ್ಯಕ್ತಿ ತನ್ನ ಗುರಿಯ ಕಡೆಗೆ ಬದ್ಧತೆಯನ್ನು ಹೊಂದಿದ್ದಾನೋ, ಅಂತಹ ವ್ಯಕ್ತಿ ಯಾವಾಗಲೂ ಜೀವನದಲ್ಲಿ ಸಫಲತೆ, ಸಂಪತ್ತು ಪಡೆಯುತ್ತಾನೆ. ಹಾಗಾಗಿ ನೀವು ಸಹ ಜೀವನದಲ್ಲಿ ಬದ್ಧತೆಯನ್ನು ಹೊಂದಬೇಕು ಎಂದು ಚಾಣಕ್ಯ ಹೇಳುತ್ತಾರೆ. 
 

ಚಾಣಕ್ಯ ಹೇಳ್ತಾರೆ ಜೀವನದಲ್ಲಿ ಸುಖವಾಗಿ ಇರಬೇಕು ಅಂದ್ರೆ ಯೋಚನೆ ಮಾಡಿ (think and speak) ಮಾತನಾಡೊದನ್ನು ಕಲಿಯಬೇಕು. ಎಲುಬಿಲ್ಲದ ನಾಲಿಗೆ ಎಂದು ಹರಿಯಬಿಟ್ಟರೆ ಅದರಿಂದ ನಿಮಗೇ ಮುಳುವಾಗೋದು ಹೆಚ್ಚು. 

Latest Videos

click me!