ಜಾನಮಟ್ಟಿ ದುರ್ಗಾದೇವಿ ಜಾತ್ತಾ ಮಹೋತ್ಸವ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ!

First Published | May 13, 2024, 11:44 PM IST

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ದೇವಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ದೇವಿಯ ಭಂಡಾರದಲ್ಲಿ ಮಿಂದೆದ್ಸ ಕುಣಿದರು.

ವಿಶೇಷ ಅಂದ್ರೆ ಜಾತ್ರೆಯಲ್ಲಿ ಭಕ್ತರು ಪರಸ್ಪರ ಭಂಡಾರ ಎರಚುವ ಮೂಲಕ ಶ್ರದ್ದಾ ಭಕ್ತಿಗಳಿಂದ ಜಾತ್ರಾ ಮಹೋತ್ಸವದ‌ ಮೆರವಣಿಗೆಯಲ್ಲಿ ಭಾಗಿಯಾದ್ರು.ಕನ್ನಡ ಡಿಜೆ ಸಾಂಗ್ಸ್'ಗಳಿಗೆ ಭಕ್ತರು ಕುಣಿದು ಕುಪ್ಪಳಿಸಿದರು.

ಬಾಗಲಕೋಟೆ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಅಮ್ಮನವರ ಜಾತ್ರಾ ಮಹೊತ್ಸವಕ್ಕೆ ಸಾಕ್ಷಿಯಾದ್ರು.

Tap to resize

ದೇವಸ್ಥಾನ ಬಳಿ ಸಾವಿರಾರು ಭಕ್ತರು ಭಕ್ತಿ ಪರವಶರಾಗಿ ಹಾಡಿ ಕುಣಿದರು. ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿದರು. ದೇವಿಗೆ ಜೈಕಾರ ಹಾಕಿದರು.

Latest Videos

click me!