ಸಿಂಹ ರಾಶಿಯಲ್ಲಿ ಮಂಗಳ ಮತ್ತು ಗುರು ಗ್ರಹಗಳ ಸಂಯೋಗದಿಂದಾಗಿ 4 ರಾಶಿಯವರಿಗೆ ವಿಶೇಷ ಲಾಭಗಳು ಸಿಗಲಿವೆ. ನವೆಂಬರ್ 30ರೊಳಗೆ ಈ ರಾಶಿಯವರು ವೃತ್ತಿ, ಆರ್ಥಿಕತೆ ಮತ್ತು ವ್ಯಾಪಾರದಲ್ಲಿ ಮಹತ್ತರ ಪ್ರಗತಿ ಕಾಣಲಿದ್ದಾರೆ.
ನವೆಂಬರ್ 16, 2026ರಂದು ಸಿಂಹ ರಾಶಿಯಲ್ಲಿ ಮಂಗಳ ಮತ್ತು ಗುರು ಗ್ರಹಗಳು ಸಂಯೋಗವಾಗಿವೆ. ಈ ಗ್ರಹಗಳ ಸಂಯೋಜನೆಯು ಧೈರ್ಯ, ಕಾರ್ಯಕ್ಷಮತೆ, ಬುದ್ಧಿವಂತಿಕೆ ಮತ್ತು ಬೆಳವಣಿಗೆಯ ಸಂಕೇತವಾಗಿ ಕಂಡುಬರುತ್ತದೆ. ನವೆಂಬರ್ 30ರೊಳಗೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿರುವ ಮುಂದಿನ 4 ರಾಶಿಗಳು ಇಲ್ಲಿವೆ.
ಮಂಗಳ ಗ್ರಹವು ಭೂಮಿ, ಮನೆ, ಆಸ್ತಿ ಮತ್ತು ವ್ಯವಹಾರದ ಪ್ರಯತ್ನಗಳನ್ನು ಪ್ರತಿನಿಧಿಸುತ್ತೆ. ಗುರು ಗ್ರಹವು ಸಂಪತ್ತು, ಅದೃಷ್ಟ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತೆ. ಇದರಿಂದ ಕೆಲವು ರಾಶಿಯವರಿಗೆ ಹೊಸ ಆದಾಯದ ಮೂಲಗಳು, ವೃತ್ತಿಯಲ್ಲಿ ಪ್ರಗತಿ ಮತ್ತು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸುವ ಅವಕಾಶಗಳು ಸೃಷ್ಟಿಯಾಗಬಹುದು.
25
ವೃಶ್ಚಿಕ ರಾಶಿ: 10ನೇ ಮನೆಯಲ್ಲಿ ಮಂಗಳ-ಗುರು ಸಂಯೋಗ
ವೃತ್ತಿ ಮತ್ತು ಬಡ್ತಿ: ಕೆಲಸ, ವ್ಯಾಪಾರ ಮತ್ತು ಸಾಮಾಜಿಕ ಸ್ಥಾನಮಾನದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಬಡ್ತಿಗಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಸಿಗಲಿವೆ.
ಸರ್ಕಾರಿ ಉದ್ಯೋಗ: ಸರ್ಕಾರಿ ಕೆಲಸದ ಆಕಾಂಕ್ಷಿಗಳು ಪರೀಕ್ಷೆ ಮತ್ತು ಸಂದರ್ಶನಗಳತ್ತ ಹೆಚ್ಚಿನ ಗಮನಹರಿಸಬೇಕು.
ವ್ಯಾಪಾರ ಮತ್ತು ಆದಾಯ: ವ್ಯಾಪಾರಸ್ಥರಿಗೆ ಹೊಸ ಒಪ್ಪಂದಗಳು ಹಾಗೂ ವಿಸ್ತರಣೆಯ ಅವಕಾಶಗಳು ದೊರೆಯಲಿದ್ದು, ಶ್ರಮಕ್ಕೆ ತಕ್ಕ ಆದಾಯ ಸಿಗಲಿದೆ.
35
ಸಿಂಹ ರಾಶಿ: ಸಿಂಹ ಲಗ್ನದಲ್ಲಿ ಸಂಯೋಗ
ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆ: ಆತ್ಮವಿಶ್ವಾಸ ಹೆಚ್ಚಾಗಿ, ಬಾಕಿ ಉಳಿದಿದ್ದ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಉತ್ಸಾಹ ಮೂಡಲಿದೆ.
ವ್ಯಾಪಾರ ಮತ್ತು ಉದ್ಯೋಗ: ವ್ಯಾಪಾರದಲ್ಲಿ ಹೊಸ ಯೋಜನೆಗಳು ಹಾಗೂ ಹೊಸ ಗ್ರಾಹಕರು ಸಿಗುವ ಅವಕಾಶವಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನ ಮತ್ತು ಹೊಸ ಕೆಲಸದ ಪ್ರಯತ್ನಗಳಲ್ಲಿ ಪ್ರಗತಿ ಕಂಡುಬರಲಿದೆ.
ಹೂಡಿಕೆ ಎಚ್ಚರಿಕೆ: ಸ್ವಂತ ಉದ್ಯಮ ಆರಂಭಿಸಲು ಯೋಜನೆ ರೂಪಿಸಬಹುದಾದರೂ, ಆತುರದಿಂದ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಸಾಲ ಮತ್ತು ಹಣಕಾಸು: ದೀರ್ಘಕಾಲದ ಸಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು, ಹಳೆಯ ಬಾಕಿ ಹಣ ವಸೂಲಿ ಮಾಡುವ ಪ್ರಯತ್ನಗಳಲ್ಲಿ ಪ್ರಗತಿ ಕಂಡುಬರಲಿದೆ.
ಉದ್ಯೋಗ ಮತ್ತು ಸ್ಪರ್ಧೆ: ಉದ್ಯೋಗ ಆಕಾಂಕ್ಷಿಗಳಿಗೆ ತೀವ್ರ ಪೈಪೋಟಿಯ ನಡುವೆಯೂ ಪ್ರತಿಭೆ ತೋರಿಸಲು ಅವಕಾಶ ಸಿಗಲಿದೆ. ಕಚೇರಿ ಸಮಸ್ಯೆಗಳನ್ನು ನಿಭಾಯಿಸುವ ಆತ್ಮವಿಶ್ವಾಸ ಹೆಚ್ಚಾಗಿ, ವ್ಯಾಪಾರದಲ್ಲಿ ಸ್ಪರ್ಧಿಗಳನ್ನು ಎದುರಿಸಲು ಹೊಸ ತಂತ್ರಗಳನ್ನು ಬಳಸುವಿರಿ.
ಎಚ್ಚರಿಕೆ: ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹಾಗೂ ಅನಗತ್ಯವಾಗಿ ಹೊಸ ಸಾಲ ಮಾಡುವುದನ್ನು ತಪ್ಪಿಸುವುದು ಉತ್ತಮ.
55
ಕರ್ಕಾಟಕ ರಾಶಿ: 2ನೇ ಮನೆಯಲ್ಲಿ (ಸಂಪತ್ತು ಮತ್ತು ಕುಟುಂಬ ಸ್ಥಾನ) ಮಂಗಳ-ಗುರು ಸಂಯೋಗ
ಆರ್ಥಿಕ ಸುಧಾರಣೆ: ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸಲು ಉತ್ತಮ ಅವಕಾಶ ಸಿಗಲಿದೆ.
ಕುಟುಂಬ: ಕುಟುಂಬದಲ್ಲಿದ್ದ ಹಣಕಾಸಿನ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು.
ವ್ಯಾಪಾರ ಮತ್ತು ಉದ್ಯೋಗ: ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು ದೊರೆಯಲಿದ್ದು, ಉದ್ಯೋಗಿಗಳಿಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳು ಸೃಷ್ಟಿಯಾಗಲಿವೆ.