ಕನಸಲ್ಲಿ ಇವು ಕಂಡ್ರೆ ಕೈಗೆ ದುಡ್ಡು ಸೇರೋದು ಗ್ಯಾರಂಟಿ!

First Published Jan 7, 2023, 5:21 PM IST

ಕನಸಿನಲ್ಲಿ ಕೆಲವು ವಸ್ತುಗಳನ್ನು ನೋಡೋದರಿಂದ ಲಕ್ಷ್ಮಿ ದೇವಿಯು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತರುತ್ತಾಳೆ ಎಂದು ಅರ್ಥೈಸುವ ಅನೇಕ ನಂಬಿಕೆಗಳಿವೆ. ಅವುಗಳು ಯಾವವು ಎಂದು ತಿಳಿಯಲು ಮುಂದೆ ಓದಿ. ಯಾವ ಕನಸು ಬಿದ್ದರೆ ಅದರ ಅರ್ಥ ಏನಿರುತ್ತೆ ಅನ್ನೋದನ್ನು ತಿಳಿಯಿರಿ. 

ನಿದ್ರೆಯ(Sleep) ನಂತರ ನಾವು ಕಾಣುವ ಕನಸುಗಳ ಅರ್ಥವೇನು, ಅವು ವಾಸ್ತವದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿವೆಯೇ, ಅವು ನನಸಾಗಲಿವೆಯೇ ಅಥವಾ ಅವುಗಳೊಳಗೆ ಒಂದು ರಹಸ್ಯ ಅಡಗಿದೆಯೇ, ಅಂತಹ ಅನೇಕ ಪ್ರಶ್ನೆಗಳು ಆಗಾಗ್ಗೆ ನಮ್ಮೆಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತವೆ. ವಿಜ್ಞಾನವು ಈ ಪ್ರಶ್ನೆಗಳಿಗೆ ವಿಭಿನ್ನ ಉತ್ತರಗಳನ್ನು ಹೊಂದಿದೆ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ನೋಡಿದರೆ, ಈ ಕನಸುಗಳು ಅನೇಕ ಅರ್ಥಗಳನ್ನು ಹೊಂದಿರಬಹುದು.

ನಂಬಿಕೆಯ ಪ್ರಕಾರ, ತಾಯಿ ಲಕ್ಷ್ಮಿ(Goddess Lakshmi) ಕನಸಿನಲ್ಲಿ ಬರುವ ಸಂಕೇತವೆಂದು ಪರಿಗಣಿಸಲಾದ ಕೆಲವು ವಿಷಯಗಳಿವೆ. ಮಾತೆ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತೆ ಮತ್ತು ಅವಳು ನಮ್ಮ ಜೀವನಕ್ಕೆ ಬರುವುದು ಎಂದರೆ ಅವಳು ತನ್ನೊಂದಿಗೆ ಸಂತೋಷ ಮತ್ತು ಸಮೃದ್ಧಿ ತರುತ್ತಿದ್ದಾಳೆ ಎಂದರ್ಥ. ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಕನಸಿನ ಅರ್ಥವನ್ನು ಕಂಡುಹಿಡಿಯಿರಿ. 

ಲಕ್ಷ್ಮಿ ದೇವಿಯ ಆಗಮನವನ್ನು ಸೂಚಿಸುವ ಕನಸುಗಳಿವು

ಹೂವು(Flowers) ಮತ್ತು ಆಭರಣಗಳು 
ನಿಮ್ಮ ಕನಸಿನಲ್ಲಿ ಸಾಕಷ್ಟು ಹೂವುಗಳು, ಕೆಂಪು ಹೂವು, ಹಳದಿ ಹೂವು ಮತ್ತು ಹೂವಿನ ಹಾಸಿಗೆಗಳು ಬರುತ್ತಿದ್ದರೆ, ನಿಮ್ಮ ಜೀವನದಲ್ಲಿ ಆರ್ಥಿಕ ಲಾಭವಾಗಲಿದೆ ಎಂದು ಅರ್ಥೈಸಬಹುದು. ತೆರೆದ ಆಕಾಶದ ಕೆಳಗೆ ಅರಳುವ ಹೂವುಗಳನ್ನು ಲಕ್ಷ್ಮಿ ದೇವಿಯ ಆಗಮನದ ಚಿಹ್ನೆಗಳೆಂದು ಪರಿಗಣಿಸಲಾಗುತ್ತೆ. 
 

ಹಾಗೆಯೇ ಕನಸಿನಲ್ಲಿ  ಆಭರಣ(Jewel) ನೋಡುವುದು ಸಹ, ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂಬಂಧ ಹೊಂದಿವೆ. ಈ ಕಾರಣದಿಂದಾಗಿ, ಆಭರಣಗಳ ಅರ್ಥವನ್ನು ಲಕ್ಷ್ಮಿ ದೇವಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತೆ. ಈ ರೀತಿಯ ಕನಸು ಬಿದ್ದರೆ, ಖುಷಿ ಪಡಿ.

ಭಾರೀ ಮಳೆ (Heavy rain)

ಸ್ವಪ್ನಗ್ರಂಥಗಳ ಪ್ರಕಾರ, ಕನಸಿನಲ್ಲಿ ಭಾರಿ ಮಳೆಯನ್ನು ನೀವು ನೋಡುತ್ತಿದ್ದರೆ, ಜೀವನದಲ್ಲಿ ಸಂಪತ್ತಿನ ಕುಸಿತವಾಗಲಿದೆ ಎಂದು ಅರ್ಥೈಸಬಹುದು. ಆದ್ರೆ, ಲಘು ತುಂತುರು ಮಳೆ ಕನಸಿನಲ್ಲಿ ಬಂದರೆ ಇದರಿಂದ ಲಕ್ಷ್ಮಿಯ ಆಗಮನವಾಗಲಿದೆ ಅನ್ನೋದನ್ನು ತಿಳಿಯಿರಿ.

ಕೆಂಪು ಸೀರೆ (Red saree)

ಮಹಾಲಕ್ಷ್ಮಿ ಹೆಚ್ಚಾಗಿ ಕೆಂಪು ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಎಲ್ಲಾ ಪ್ರತಿಮೆ ಮತ್ತು ಚಿತ್ರಗಳಲ್ಲಿ, ತಾಯಿ ಕೆಂಪು ಸೀರೆಯನ್ನು ಧರಿಸಿರುತ್ತಾಳೆ. ಪೂಜೆಯ ಸಮಯದಲ್ಲಿಯೂ ಸಹ, ಕೆಂಪು ಸೀರೆ ಅಥವಾ ಕೆಂಪು ಶಾಲನ್ನು ಲಕ್ಷ್ಮಿ ದೇವಿಗೆ ಅರ್ಪಿಸಲಾಗುತ್ತೆ. ಅದಕ್ಕಾಗಿಯೇ ಕನಸಿನಲ್ಲಿ ಕೆಂಪು ಸೀರೆಯಲ್ಲಿ ನಿಮ್ಮನ್ನು ನೋಡೋದು, ಕೆಂಪು ಸೀರೆಯಲ್ಲಿ ಇನ್ನೊಬ್ಬರನ್ನು ನೋಡೋದು ಅಥವಾ ಕೆಂಪು ಸೀರೆಯನ್ನು ಮಾತ್ರ ನೋಡೋದು ತಾಯಿ ಲಕ್ಷ್ಮಿ ನಿಮ್ಮ  ಜೀವನಕ್ಕೆ ಬರುವ ಸಂಕೇತ ಎಂಬ ನಂಬಿಕೆಯಿದೆ. 

ದೇವಸ್ಥಾನ (Temple)

ದೇವಾಲಯವು ದೇವರ ಆರಾಧನಾ ಸ್ಥಳ. ದೇವಾಲಯವನ್ನು ನೋಡುವಾಗ ಮೊದಲ ಆಲೋಚನೆ ದೇವರದ್ದೇ ಬರುತ್ತೆ. ಅಂತಹ ಪರಿಸ್ಥಿತಿಯಲ್ಲಿ, ದೇವಾಲಯದ ಬಗ್ಗೆ ಕನಸು ಕಾಣೋದು ಅಥವಾ ಕನಸಿನಲ್ಲಿ ದೇವಾಲಯವನ್ನು ನೋಡೋದು ಶುಭ ಎಂದು ಸ್ಪಷ್ಟವಾಗಿ ಹೇಳಲಾಗುತ್ತೆ. ಸಂಪತ್ತು ಮತ್ತು ತಾಯಿ ಲಕ್ಷ್ಮಿಯ ಆಗಮನದ ಸಂಕೇತ ಇದಾಗಿದೆ.

ಸೇವಿಂಗ್(Saving) ಮಾಡುವ ಕನಸು

ನೀವು ನಿಮ್ಮ ಕನಸಿನಲ್ಲಿ ಉಳಿತಾಯ ಮಾಡುತ್ತಿದ್ದರೆ, ಹಣ ಸೇರಿಸುತ್ತಿದ್ದರೆ ಅಥವಾ ನಿಮ್ಮೊಂದಿಗೆ ಹಣ ಇಟ್ಟುಕೊಂಡಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ ಹಣ ಉಳಿಸಲು ಸಂಬಂಧಿಸಿದ ಕನಸುಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತೆ . 
 

click me!