ವರ್ಷದ ಮೊದಲ ದಿನವನ್ನ ಅತ್ಯಂತ ವಿಶೇಷವಾಗಿ ಆಚರಿಲು ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದೇ ರೀತಿ ಇಡೀ ವರ್ಷ ಎಲ್ಲಾ ವಿಧಗಳಿಂದಲೂ ಚೆನ್ನಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. 2025 ವರ್ಷ ನಿಮ್ಮ ಜೀವನದಲ್ಲಿ ಉತ್ತಮವಾಗಿರಬೇಕಾದ್ರೆ ಜನವರಿ 1ರಂದು ಆ ಶುಭ ಮುಹೂರ್ತದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ.
ಇಡೀ ವರ್ಷ ಯಾವುದೇ ಸಮಸ್ಯೆಗಳಿಲ್ಲದೇ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಂತೋಷವಾಗಿರಬೇಕಾದ್ರೆ ವರ್ಷದ ಮೊದಲ ದಿನ ಕೆಲ ಕೆಲಸ ಮಾಡಬೇಕು ಎಂದು ಪಂಚಾಂಗ ಶಾಸ್ತ್ರ ಹೇಳುತ್ತದೆ. ಹೀಗೆ ಮಾಡೋದರಿಂದ ಹೊಸ ವರ್ಷವು ಉತ್ತಮವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.
ಹೌದು, ವರ್ಷದ ಮೊದಲ ದಿನ ಅಂದ್ರೆ ಜನವರು 1ರಂದು ಬ್ರಾಹ್ಮೀ ಅಥವಾ ಬ್ರಹ್ಮ ಮೂಹೂರ್ತದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಹೊಸ ವರ್ಷ ನಿಮಗೆ ಸಂತೋಷ, ಆರೋಗ್ಯ, ಸಂಪತ್ತು ಮತ್ತು ನೆಮ್ಮದಿಯನ್ನು ನೀಡಬೇಕಾದ್ರೆ ಈ ಕೆಲಸ ಮಾಡಬೇಕು. ಹೀಗೆ ಮಾಡೋದರಿಂದ ನಿಮಗೆ ವರ್ಷವಿಡೀ ಶುಭ ಫಲಿತಾಂಶಗಳು ಸಿಗುತ್ತವೆ.
ಬ್ರಾಹ್ಮೀ ಮುಹೂರ್ತ
ಪಂಚಾಂಗದ ಪ್ರಕಾರ, ವರ್ಷದ ಮೊದಲ ದಿನ ಅಂದರೆ 1 ಜನವರಿ 2025, ಬುಧವಾರ, ಬ್ರಹ್ಮ ಮುಹೂರ್ತದ ಸಮಯವು 05:25 ರಿಂದ 06:19 ರವರೆಗೆ ಇರುತ್ತದೆ.
ಬ್ರಾಹ್ಮೀ ಮುಹೂರ್ತದಲ್ಲಿ ಏನು ಮಾಡಬೇಕು?
ವರ್ಷದ ಮೊದಲ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಗ್ಗೆ ಬೇಗ ಏಳಬೇಕು. ಸ್ನಾನ ಮಾಡಿ ಶುಭ್ರವಾಗಿ ನಿಮಿಷ್ಟದ ದೇವರು ಅಥವಾ ಮನೆದೇವರಿಗೆ ತೆರಳಿ ದರ್ಶನ ಪಡೆಯಬೇಕು. ಇದು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಪೂಜೆ ಸಲ್ಲಿಸಬೇಕು.
ಮನೆದೇವರ ಹೆಸರಿನಲ್ಲಿ ತುಪ್ಪದ ದೀಪ ಬೆಳಗಬೇಕು. ನಂತರ ದೇವಾಲಯದಲ್ಲಿಯೇ ಕುಳಿತು ಕೆಲವು ಮಂತ್ರಗಳನ್ನು ಪಠಿಸಬೇಕು. ನಂತರ ನಿಮ್ಮ ಕೈಯಲ್ಲಿ ಸ್ವಲ್ಪ ನೀರು ಹಿಡಿದುಕೊಂಡು ನಿಮ್ಮ ಆಸೆಯನ್ನು ಹೇಳಿ ನಂತರ ನೀರನ್ನು ಬಿಡಬೇಕು.
ಬ್ರಹ್ಮ ಮುಹೂರ್ತದಲ್ಲಿ, ಬ್ರಹ್ಮ ಮುರಾರಿ ತ್ರಿಪುರಾಂತಕರಿ ಭಾನು: ಶಶಿ ಭೂಮಿ ಸುತೋ ಬುಧಶ್ಚ. ಗುರು ಶುಕ್ರ ಶನಿ ರಾಹು ಕೇತವ ಸರ್ವೇ ಗ್ರಹ ಶಾಂತಿ ಕರ ಭವಂತು ಮಂತ್ರವನ್ನು ಪಠಿಸಬೇಕು. ಈ ದಿನ ಗಾಯತ್ರಿ ಮಂತ್ರ ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದನ್ನು ಸಹ ಮರೆಯಬೇಡಿ. ಹೀಗೆ ಮಾಡುವುದರಿಂದ ವರ್ಷವಿಡೀ ದೇವರ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರುತ್ತದೆ.
ಇದರ ನಂತರ, ಧ್ಯಾನ ಮಾಡಿ, ಮತ್ತು ನಿಮ್ಮ ಅಂಗೈಗಳನ್ನು ನೋಡಿ ಮತ್ತು 'ಓಂ ಕರಾಗ್ರೇ ವಸತೇ ಲಕ್ಷ್ಮೀ ಕರ್ಮಧೇ ಸರಸ್ವತಿ ಕರ್ಮುಲೇ: ತು ಗೋವಿಂದಾ: ಪ್ರಭಾತೇ ಕರ ದರ್ಶನಂ' ಎಂಬ ಮಂತ್ರವನ್ನು ಪಠಿಸಿ. ನಿಮ್ಮ ಆರ್ಥಿಕ ಶಕ್ತಿಗನುಸಾರವಾಗಿ ದಾನ ಮಾಡಿ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.