ದಾರಿಯಲ್ಲಿ ಈ ವಸ್ತುಗಳು ಕಂಡರೆ ತಪ್ಪಿಯೂ ಮುಟ್ಟಬೇಡಿ, ಮೆಟ್ಟಬೇಡಿ..

First Published Jan 9, 2023, 11:10 AM IST

ನಾವು ಸಾಗುವ ದಾರಿಯಲ್ಲಿ ಬಿದ್ದಿರುವ ಕೆಲ ವಸ್ತುಗಳ ನಮ್ಮನ್ನು ಸೆಳೆಯಬಹುದು. ಹಾಗಂಥ ಅವನ್ನೆಲ್ಲ ಮುಟ್ಟಲಾಗಲೀ, ಮೆಟ್ಟಲಾಗಲೀ ಹೋಗಬಾರದು. ಹಾಗೊಂದು ವೇಳೆ ಹೋದರೆ ಸಾಕಷ್ಟು ದುಷ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅಂಥ ವಸ್ತುಗಳು ಯಾವೆಲ್ಲ ನೋಡೋಣ. 

ದಾರಿಯಲ್ಲಿ ಬಿದ್ದಿರುವ ಅನೇಕ ವಸ್ತುಗಳನ್ನು ಮುಟ್ಟುವುದು ಅಥವಾ ಒದೆಯುವುದನ್ನು ತಪ್ಪಿಸಿ. ಈ ವಿಷಯಗಳು ನಕಾರಾತ್ಮಕತೆ ಮತ್ತು ಮಾಂತ್ರಿಕತೆಗೆ ಸಂಬಂಧಿಸಿರಬಹುದು. ನೀವು ಅವುಗಳನ್ನು ಸ್ಪರ್ಶಿಸಿದರೆ ಅನೇಕ ಸಮಸ್ಯೆಗಳು ಉಂಟಾಗಬಹುದು.

ಆಹಾರ ದಾಟಬೇಡಿ(Food): ಅನೇಕರು ಪೂರ್ವಜರಿಗೆ ಆಹಾರವನ್ನು ಅಡ್ಡದಾರಿಯಲ್ಲಿ ಇಡುತ್ತಾರೆ. ಅದಕ್ಕೇ ದಾರಿಯಲ್ಲಿ ಬಿದ್ದಿರುವ ಆಹಾರವನ್ನೂ ದಾಟಬಾರದು. ಈ ಕಾರಣದಿಂದಾಗಿ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ನಿಂಬೆ-ಹಸಿಮೆಣಸು(Lemon and chilly): ದಾರಿಯಲ್ಲಿ ನಿಂಬೆ ಮೆಣಸು ಗೊಂಚಲು ಬಿದ್ದಿರುವುದು ನಿಮಗೆ ಕಾಣಬಹುದು. ದುಷ್ಟ ಕಣ್ಣಿನಿಂದ ದೂರವಿರಲು ಇದನ್ನು ಸಾಮಾನ್ಯವಾಗಿ ಮನೆ ಮತ್ತು ಅಂಗಡಿಗಳ ಹೊರಗೆ ನೇತು ಹಾಕಲಾಗಿರುತ್ತದೆ. ಇದರಲ್ಲಿ ನಕಾರಾತ್ಮಕತೆ ಇರುತ್ತದೆ. ಇದು ದುಷ್ಟ ಶಕ್ತಿಯನ್ನು ಹೀರಿಕೊಂಡಿರುತ್ತದೆ. ದಾರಿಯಲ್ಲಿ ಬಿದ್ದಿರುವ ನಿಂಬೆ ಮತ್ತು ಮೆಣಸಿನಕಾಯಿಯ ಮೇಲೆ ನೀವು ಹೆಜ್ಜೆ ಹಾಕಿದರೆ, ನೀವು ಆ ನಕಾರಾತ್ಮಕತೆಗೆ ಬಲಿಯಾಗಬಹುದು ಮತ್ತು ತೊಂದರೆಗೆ ಸಿಲುಕಬಹುದು.

ಸುಟ್ಟ ಮರ(Burnt wood): ದಾರಿಯಲ್ಲಿ ಸುಟ್ಟ ಮರ ಅಥವಾ ಸುಟ್ಟ ಮರದ ಬೂದಿ ಕಂಡರೆ ಅದರ ಮೇಲೆ ಕಾಲಿಡಬೇಡಿ ಅಥವಾ ಅದನ್ನು ದಾಟಬೇಡಿ. ಏಕೆಂದರೆ ಸುಟ್ಟ ಮರವು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಅದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮೊಳೆ ಅಥವಾ ಹಾರ್ಸ್‌ಶೂ(Nail or Horse shoe): ವಾಮಾಚಾರಕ್ಕೆ ಹಾರ್ಸ್‌ಶೂ ಮತ್ತು ಕಬ್ಬಿಣದ ಮೊಳೆಯನ್ನು ಬಳಸಲಾಗುತ್ತದೆ. ಕೆಲವು ಜನರು ನಕಾರಾತ್ಮಕತೆಯನ್ನು ತೆಗೆದುಹಾಕಲು ಅವುಗಳನ್ನು ಬಳಸುತ್ತಾರೆ ಮತ್ತು ನಂತರ ಅವುಗಳನ್ನು ಅಡ್ಡಹಾದಿಯಲ್ಲಿ ಅಥವಾ ಮೂರು ದಾರಿ ಕೂಡುವ ದಾರಿಯಲ್ಲಿ ಎಸೆಯುತ್ತಾರೆ. ಅದಕ್ಕಾಗಿಯೇ ನೀವು ದಾರಿಯಲ್ಲಿ ಈ ವಸ್ತುಗಳನ್ನು ನೋಡಿದರೆ, ತಾಕಿಸಿಕೊಳ್ಳಬೇಡಿ.

ತಲೆಗೂದಲು(hair): ರಸ್ತೆಯ ಮೇಲೆ ಕೂದಲು ಬಿದ್ದಿದ್ದರೆ ಅದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಕೂದಲಿನ ಬುಡವು ರಾಹುವಿಗೆ ಸಂಬಂಧಿಸಿದೆ. ಅದಕ್ಕಾಗಿಯೇ ನೀವು ರಸ್ತೆಯಲ್ಲಿ ಕೂದಲು ಗೊಂಚಲುಗಳನ್ನು ಕಂಡರೆ, ಅದನ್ನು ಮೆಟ್ಟುವುದಾಗಲೀ, ದಾಟುವುದಾಗಲೀ ಮಾಡಬೇಡಿ. ನಿಮ್ಮ ಕಾರನ್ನು ಗೊತ್ತಿದ್ದೂ ಅದರ ಮೇಲೆ ದಾಟಿಸಬೇಡಿ. ಇದು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
 

ನೀವು ಸತ್ತ ಪ್ರಾಣಿಯನ್ನು ನೋಡಿದರೆ, ದೂರವಿರಿ(dead animals): ದಾರಿಯಲ್ಲಿ ಯಾವುದೇ ಸತ್ತ ಪ್ರಾಣಿಯನ್ನು ನೀವು ನೋಡಿದರೆ, ನಿಮ್ಮ ದಿಕ್ಕನ್ನು ಬದಲಿಸಿ. ಸತ್ತ ಪ್ರಾಣಿಗಳನ್ನು ಕೂಡ ದಾಟಬಾರದು. ಏಕೆಂದರೆ ಸತ್ತ ಪ್ರಾಣಿಗಳ ಮೇಲೆ ಬಹಳಷ್ಟು ನಕಾರಾತ್ಮಕ ಶಕ್ತಿ ಇರುತ್ತದೆ, ಅದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಪೂಜಾ ಸಾಮಗ್ರಿ(Puja Samagri): ದಾರಿಯಲ್ಲಿ ಬಿದ್ದಿರುವ ಪೂಜಾ ಸಾಮಗ್ರಿಯನ್ನು ಕಂಡರೆ ಒದೆಯಬಾರದು. ಇದರಿಂದ ದೇವರನ್ನು ಅವಮಾನಿಸಿದಂತಾಗುತ್ತದೆ ಮತ್ತು ನೀವು ದುರದೃಷ್ಟವನ್ನು ಎದುರಿಸಬೇಕಾಗಬಹುದು.

click me!