Desired Husband And Quick Marriage Mantra: ಕೈಲಾಸನಂದ ಗಿರಿ ಸ್ವಾಮೀಜಿಯವರು ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲು ಶಕ್ತಿಶಾಲಿ ಮಂತ್ರವನ್ನು ಸೂಚಿಸಿದ್ದಾರೆ. ಈ ಮಂತ್ರವನ್ನು ಪಠಿಸಿದರೆ ಸೂಕ್ತ ವರ ಹಾಗೂ ಅಡೆತಡೆಗಳಿಲ್ಲದ ಮದುವೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಪೋಷಕರು ತಮ್ಮ ಮಗಳಿಗೆ ಒಳ್ಳೆಯ ಗಂಡ ಸಿಗಬೇಕೆಂದು ಹಲವು ಪೂಜೆಗಳನ್ನು ಮಾಡಿಸುತ್ತಾರೆ. ಇಂದಿನ ಯುವತಿಯರು ಸಹ ತಮ್ಮ ಸಂಗಾತಿ ಹೇಗಿರಬೇಕೆಂದು ತಮ್ಮದೇ ಅದ ಕಲ್ಪನಾ ಗೋಪುರವನ್ನು ಕಟ್ಟಿಕೊಂಡಿರುತ್ತಾರೆ. ಕೆಲವೊಮ್ಮೆ ಗ್ರಹಗಳು ಮತ್ತು ನಕ್ಷತ್ರಗಳು ಅಥವಾ ಕೆಲವು ದೋಷಗಳಿಂದಾಗಿ ಮಕ್ಕಳ ಮದುವೆ ವಿಳಂಬ ಆಗುತ್ತಿರುತ್ತದೆ.
28
ಅಡೆತಡೆಗಳಿಲ್ಲದೇ ಮದುವೆ
ಕೈಲಾಸನಂದ ಗಿರಿ ಸ್ವಾಮೀಜಿಯವರು ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲು ಶಕ್ತಿಶಾಲಿ ಮಂತ್ರವೊಂದು ಜಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ಮಂತ್ರವನ್ನು ಸರಿಯಾಗಿ ಪಠಿಸಿದ್ರೆ ಹುಡುಗಿಯರು ಸೂಕ್ತ ವರನನ್ನು ಪಡೆಯುತ್ತಾರೆ. ಯಾವುದೇ ಅಡೆತಡೆಗಳಿಲ್ಲದೇ ಮದುವೆ ನಡೆಯುತ್ತದೆ ಎಂದು ಕೈಲಾಸನಂದ ಗಿರಿ ಸ್ವಾಮೀಜಿ ಹೇಳುತ್ತಾರೆ. ಹಾಗಾದ್ರೆ ಕೈಲಾಸನಂದ ಗಿರಿ ಸ್ವಾಮೀಜಿ ಹೇಳಿದ ಶಕ್ತಿಶಾಲಿ ಮಂತ್ರ ಯಾವುದು ಎಂದು ನೋಡೋಣ ಬನ್ನಿ.
38
ಕ್ರಮಬದ್ಧವಾಗಿ ಮಂತ್ರ ಪಠಿಸಿ
ಒಳ್ಳೆ ವರನನ್ನು ಹುಡುಕುತ್ತಿರುವ ಹುಡುಗಿಯರು ಪ್ರತಿನಿತ್ಯ ಕಾತ್ಯಾಯನಿ ಮಹಾಮಾಯೆ, ಮಹಾಯೋಗಿನ್ಯಾಧೀಶ್ವರಿ ಪಠಿಸಬೇಕು. "ನಂದಗೋಪಸುತನ್ ದೇವಿ, ಪತಿ ಮೇ ಕುರೂ ತೇ ನಮಃ" ಎಂಬ ಮಂತ್ರವನ್ನು ಕ್ರಮಬದ್ಧವಾಗಿ ಪಠಿಸಬೇಕು.
ಭಾಗವತ ಪುರಾಣದಲ್ಲಿ ಮಾತಾ ಕಾತ್ಯಾಯನಿಯನ್ನು ಪೂಜೆ ಮಾಡುವ ಅವಿವಾಹಿತ ಕನ್ಯೆಯರು ಒಳ್ಳೆಯ ಗಂಡನನ್ನು ಪಡೆಯುತ್ತಾರೆ ಎಂದು ಬರೆಯಲಾಗಿದೆ. ಬಯಸಿದ ವರನಿಗಾಗಿ ಯುವತಿಯರು ಮಾತಾ ಕಾತ್ಯಾಯನಿಯನ್ನು ಪೂಜಿಸುತ್ತಾರೆ. ಕಾತ್ಯಾಯನಿ ದೇವಿಯನ್ನು ದುರ್ಗೆಯ ಆರನೇ ರೂಪ ಎಂದು ಹೇಳಲಾಗುತ್ತದೆ. ಕೃಷ್ಣನನ್ನು ತಮ್ಮ ಪತಿಯನ್ನಾಗಿ ಪಡೆಯಲು ಗೋಪಿಕೆಯರು ಈ ಮಂತ್ರವನ್ನು ಪಠಿಸುತ್ತಿದ್ದರು ಎಂದು ಹೇಳಲಾಗುತ್ತದೆ.
58
ಈ ಮಂತ್ರ ಯಾರು ಜಪಿಸಬಹುದು?
ಕಾತ್ಯಾಯನಿ ಮಂತ್ರಗಳನ್ನು ಮಾಂಗಲ್ಯ ದೋಷಗಳಿಂದ ಬಳಲುತ್ತಿರುವವರು ಪಠಿಸಬಹುದು. ದಾಂಪತ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸಹ ಈ ಮಂತ್ರಗಳನ್ನು ಪಠಿಸಬೇಕು. ಪತಿಯ ದೀರ್ಘಾಯುಷ್ಯಕ್ಕಾಗಿಯೂ ಮಹಿಳೆಯರು ಕಾತ್ಯಾಯನಿ ಮಂತ್ರ ಪಠಿಸಬಹುದು ಜ್ಯೋತಿಷ್ಯ ಶಾಸ್ತ್ರಜ್ಞರು ಸಲಹೆ ನೀಡತ್ತಾರೆ.
68
FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!
ಪ್ರಶ್ನೆ: ಮಾ ಕಾತ್ಯಾಯನಿ ಪೂಜೆಯ ಪ್ರಯೋಜನ ಏನು?
ಕಾತ್ಯಾಯಣಿ ಮಾತೆಯನ್ನು ಪೂಜಿಸುವುದರಿಂದ ಪ್ರೇಮ ಜೀವನ ಸುಧಾರಿಸುತ್ತದೆ ಮತ್ತು ಸ್ತ್ರೀತ್ವವೂ ಹೆಚ್ಚಾಗುತ್ತದೆ. ಇದು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ.
78
FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!
ಪ್ರಶ್ನೆ: ಈ ಮಂತ್ರವನ್ನು ಒಬ್ಬರು ಎಷ್ಟು ಬಾರಿ ಜಪಿಸಬೇಕು?
ವಿಶೇಷ ಬಯಕೆ ಈಡೇರಲು, ಈ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಬೇಕು. ಶಾಸ್ತ್ರಗಳಲ್ಲಿ, ಇದನ್ನು 1,25,000 ಬಾರಿ ಜಪಿಸಲು ಸೂಚಿಸಲಾಗಿದೆ.
88
FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!
ಪ್ರಶ್ನೆ: ಮಂತ್ರಗಳನ್ನು ಪಠಿಸುವ ವಿಧಾನ?
ಈ ಮಂತ್ರವನ್ನು ಪಠಿಸುವವರು ಸ್ನಾನ ಮಾಡಿದ ನಂತರ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮಾ ಕಾತ್ಯಾಯನಿಯನ್ನು ಸ್ಮರಿಸುವ ಮೂಲಕ ಜಪಿಸಲು ಪ್ರಾರಂಭಿಸಿ. ಮಂತ್ರ ಪಠಣೆ ಸಂದರ್ಭದಲ್ಲಿ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.