ಚಾಣಕ್ಯನ (Chanakya) ಪ್ರತಿಯೊಂದು ಮಾತುಗಳ ಅಂದಿಗೂ ಇಂದಿಗೂ ಪ್ರಸ್ತುತವಾಗಿರುತ್ತವೆ. ಜೀವನದ ಎಲ್ಲಾ ಕಾಲ ಘಟ್ಟದಲ್ಲೂ ಸಹ ಇವು ಸೂಕ್ತವಾಗಿವೆ. ಚಾಣಕ್ಯ ತನ್ನ ನೀತಿಯಲ್ಲಿ ಜೀವನದ ಬಗ್ಗೆ, ಗೌರವ, ಸನ್ಮಾನ, ಮಹಿಳೆ, ಎಲ್ಲದರ ಬಗ್ಗೆಯೂ ಹೇಳಿದ್ದಾರೆ.
ಚಾಣಕ್ಯ ತಮ್ಮ ಹೆಚ್ಚಿನ ನೀತಿಗಳಲ್ಲಿ (Chanakya Niti) ತಂದೆ ತಾಯಿಗಳಿಗೆ ಗೌರವ ನೀಡಬೇಕು ಅನ್ನೋದನ್ನು ಒತ್ತಿ ಹೇಳಿದ್ದಾರೆ. ಅದರ ಜೊತೆಗೆ ತಂದೆಯ ಸಮಾನರಾಗಿರುವ ಮತ್ತೊಬ್ಬರಿಗೆ ಅವಮಾನ ಮಾಡಬಾರದು ಎಂದಿದ್ದಾರೆ. ಅದು ಯಾರಿಗೆ?
ನಮ್ಮ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಬರುವಂತಹ ಮೂವರು ವ್ಯಕ್ತಿಗಳಿಗೆ ಅವಮಾನ ಮಾಡೋದು ಸರಿಯಲ್ಲ ಎಂದು ಚಾಣಕ್ಯ ತಿಳಿಸಿದ್ದಾರೆ. ಈ ಮೂವರಿಗೆ ಅವಮಾನ ಮಾಡಿದರೆ ನಮ್ಮ ಜೀವನ ನಾಶವಾಗಿ ಹೋಗುತ್ತಂತೆ. ಹಾಗಿದ್ರೆ ಬನ್ನಿ ಯಾರಿಗೆ ಅವಮಾನ ಮಾಡಬಾರದು ನೋಡೋಣ.
ಚಾಣಕ್ಯ ನೀತಿಯ ಪ್ರಕಾರ, ಕಲಿಸುವ ಗುರುವನ್ನು ಎಂದಿಗೂ ಅವಮಾನಿಸಬಾರದು (do not insult teacher) ಧರ್ಮಗ್ರಂಥಗಳಲ್ಲಿ, ಗುರುವಿಗೆ ಪೋಷಕರಷ್ಟೇ ಸ್ಥಾನಮಾನವನ್ನು ನೀಡಲಾಗಿದೆ. ಅವರನ್ನು ಅವಮಾನಿಸುವುದು ನಿಮ್ಮ ಜೀವನದಲ್ಲಿ ಕೆಟ್ಟದ್ದನ್ನು ಉಂಟು ಮಾಡುತ್ತೆ. ಗುರುವನ್ನು ಅವಮಾನಿಸುವ ವ್ಯಕ್ತಿಯ ಜೀವನವು ತೊಂದರೆಗಳಿಂದ ತುಂಬಿರುತ್ತದೆ.
ಚಾಣಕ್ಯ ನೀತಿ ಹೇಳುವಂತೆ, ನಿಮ್ಮನ್ನು ಭಯದಿಂದ ಮುಕ್ತಗೊಳಿಸುವ ವ್ಯಕ್ತಿಯನ್ನು ಅವಮಾನಿಸಬಾರದು. ನೀವು ಅಜಾಗರೂಕತೆಯಿಂದ ಈ ಜನರನ್ನು ಅವಮಾನಿಸಿದರೆ, ತಕ್ಷಣ ಕ್ಷಮೆಯಾಚಿಸಿ. ಇಲ್ಲವಾದರೆ ನಿಮಗೆ ಅವಮಾನವಾಗೋದು ಖಚಿತ.
ಅಷ್ಟೇ ಅಲ್ಲದೇ ಚಾಣಕ್ಯನ ಪ್ರಕಾರ, ನಿಮ್ಮ ಹೊಟ್ಟೆಯನ್ನು ತುಂಬಲು ಆಹಾರವನ್ನು ನೀಡುವವರನ್ನು (one who gives food) ಅವಮಾನಿಸಬಾರದು.ಆಹಾರವನ್ನು ನೀಡುವ ವ್ಯಕ್ತಿಯನ್ನು ತಂದೆಯಂತೆ ಪರಿಗಣಿಸಲಾಗುತ್ತದೆ. ಹಾಗಾಗಿ ಅವರನ್ನು ಅವಮಾನಿಸೋದು ನಿಮಗೆ ಕೆಟ್ಟದ್ದನ್ನುಂಟು ಮಾಡುತ್ತೆ.