Chanakya Niti: ನಿಮ್ಮ ಮನೆಗೆ ಈ ರೀತಿಯ ಐದು ಜನರು ಬರ್ತಿದ್ದಾರಾ? ಹಾಗಿದ್ರೆ ಎಚ್ಚರ!

Published : Aug 13, 2026, 02:50 PM IST

ಆಚಾರ್ಯ ಚಾಣಕ್ಯರ ಪ್ರಕಾರ, ಮನೆಗೆ ಬರುವ ಎಲ್ಲಾ ಅತಿಥಿಗಳು ಒಳ್ಳೆಯವರಲ್ಲ. ಕೆಲವು ಅತಿಥಿಗಳು ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಮಾಡಬಹುದು. ಆದ್ದರಿಂದ, ಇಂತಹ ಅತಿಥಿಗಳಿಂದ ಎಚ್ಚರಿಕೆಯಿಂದ ಇರುವುದು ಉತ್ತಮ.

PREV
17
ಅತಿಥಿ ದೇವೋ ಭವ

ಆಚಾರ್ಯ ಚಾಣಕ್ಯ ಅವರನ್ನು ಅತ್ಯಂತ ಜ್ಞಾನಿ ಮತ್ತು ಬುದ್ದಿವಂತ ವ್ಯಕ್ತಿ ಎಂದು ಕರೆಯಲಾಗುತ್ತದೆ. ಯಶಸ್ವಿ, ಸಮೃದ್ಧ ಮತ್ತು ಸಂತೋಷಕರ ಜೀವನ ನಡೆಸಬೇಕಾದ್ರೆ ಚಾಣಕ್ಯ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅನುಭವಿಗಳು ಹೇಳುತ್ತಾರೆ. ಚಾಣಕ್ಯ ಅವರು ಹೇಳಿದ ಮಾತುಗಳು ಇಂದಿಗೂ ಜೀವಂತವಾಗಿದ್ದು, ಇವುಗಳನ್ನು ನೀತಿ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಶದಲ್ಲಿ "ಅತಿಥಿ ದೇವೋ ಭವ" ಎಂಬ ಮಾತಿನ ಅರ್ಥ ಅತಿಥಿ ದೇವರಿಗೆ ಸಮಾನ. ಅತಿಥಿಗಳು ಮನೆಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ಕೌಟಿಲ್ಯ ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ.

27
ಎಲ್ಲಾ ಅತಿಥಿಗಳು ಒಳ್ಳೆಯವರಾಗಿರಲ್ಲ

ಚಾಣಕ್ಯ ಅವರ ಪ್ರಕಾರ, ಮನೆಗೆ ಬರುವ ಎಲ್ಲಾ ಅತಿಥಿಗಳು ಒಳ್ಳೆಯವರಾಗಿರಲ್ಲ. ಹಾಗಾಗಿ ಮನೆಗೆ ಎಂಥಹವರು ಬರುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದ್ರೆ ಇಂಥವರ ಆಗಮನದಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಇಂತಹ ಅತಿಥಿಗಳಿಂದ ನೀವು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಈ ಲೇಖನದಲ್ಲಿ ಆ ಅತಿಥಿಗಳು ಯಾರು ಎಂಬುದನ್ನು ನೋಡೋಣ ಬನ್ನಿ.

37
ಕಾರಣವಿಲ್ಲದೇ ಪದೇ ಪದೇ ಬರುವ ಜನರು

ಯಾವುದೇ ಕಾರಣವಿಲ್ಲದೇ ಅಥವಾ ಸೂಚನೆ ನೀಡದೇ ಪದೇ ಪದೇ ಮನೆಗೆ ಆಗಮಿಸುವ ಅತಿಥಿಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದಿರಬೇಕು. ನೀವು ಮನೆಯಲ್ಲಿ ಪ್ರಮುಖ ಕೆಲಸ ಮಾಡುತ್ತಿರುವಾಗ ಅಥವಾ ವಿಶ್ರಾಂತಿ ಪಡೆದುಕೊಳ್ಳುತ್ತಿರುವಾಗ ಅಥವಾ ಖಾಸಗಿ ಸಮಯ ಆನಂದಿಸುತ್ತಿರುವಾಗ ಇಂತಹ ಜನರ ಆಗಮನ ಕಿರಿಕಿರಿಯನ್ನುಂಟು ಮಾಡುತ್ತದೆ. ಇಂತಹ ಅತಿಥಿಗಳು ನಿಮ್ಮ ಖಾಸಗಿ ವಿಷಯಗಳನ್ನು ತಿಳಿದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದು ನಿಮ್ಮ ಮಾನಸಿಕ ಅಶಾಂತಿಗೆ ಕಾರಣವಾಗಬಹುದು.

47
ಚಾಡಿ ಹೇಳೋರು ಅಥವಾ ಕೆಟ್ಟದಾಗಿ ಮಾತನಾಡೋರು

ಕೆಲ ಅತಿಥಿಗಳು ಮನೆಗೆ ಬಂದಗೆಲ್ಲಾ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುತ್ತಾರೆ. ಬೇರೆಯವರ ಮನೆ ಅನ್ನೋದನ್ನು ಮರೆತು ಗಂಟೆಗಟ್ಟಲೇ ಕುಳಿತು ಹರಟೆ ಹೊಡೆಯುತ್ತಾರೆ. ಈ ರೀತಿಯ ಜನರು ಬೇರೆಯವರ ಮನೆಗೆ ಹೋಗಿ ನಿಮ್ಮ ವಿಷಯಗಳನ್ನು ಸಹ ಮಾತನಾಡುವ ಅಥವಾ ಚಾಡಿ ಹೇಳುವ ಗುಣವನ್ನು ಹೊಂದಿರುತ್ತಾರೆ. ಹಾಗಾಗಿ ಗಾಸಿಪ್ ಮಾಡೋ ಜನರಿಂದ ದೂರವಿರೋದು ಯಾವಾಗಲೂ ಉತ್ತಮ ಎಂದು ಚಾಣಕ್ಯರು ಹೇಳುತ್ತಾರೆ.

57
ಅಸೂಯೆಪಡೋ ಜನರು

ಮನೆಯಲ್ಲಿನ ಸಂತೋಷ ನೆಲೆಸಬೇಕಾದ್ರೆ ಅಸೂಯೆ ಅಥವಾ ಹೊಟ್ಟೆಕಿಚ್ಚು ಪಡೋ ಜನರಿಂದ ದೂರವಿರಿ. ಹಾಗೆಯೇ ಮನೆಯಿಂದ ದೂರವಿಟ್ಟುಕೊಳ್ಳಿ. ಇಂತಹ ಜನರು ನಿಮ್ಮೊಂದಿಗೆ ಚೆನ್ನಾಗಿ ಮಾತನಾಡಬಹುದು. ಆದ್ರೆ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಿರುತ್ತಾರೆ. ಇವರ ದುಷ್ಟದೃಷ್ಟಿ ಅಥವಾ ಅಸೂಯೆ ಸ್ವಭಾವ ಮನೆಯ ನೆಮ್ಮದಿಯನ್ನು ನಾಶ ಮಾಡಬಹುದು. ಇಂತಹ ಅತಿಥಿಗಳನ್ನು ಆದಷ್ಟು ಮನೆಯಿಂದ ದೂರವಿಡಲು ಪ್ರಯತ್ನಿಸಬೇಕು.

67
ಲಾಭಕ್ಕಾಗಿ ಮಾತ್ರ ಆಗಮಿಸುವ ಸ್ವಾರ್ಥಿ ಅತಿಥಿಗಳು

ಕೆಲವರು ತಮ್ಮ ಕೆಲಸಗಳಿದ್ದಾಗ ಮಾತ್ರ ನಿಮ್ಮ ಮನೆಗೆ ಬರುತ್ತಿರುತ್ತಾರೆ. ನಿಮ್ಮಿಂದ ಲಾಭ ಅಥವಾ ಕೆಲಸ ಆಗಬೇಕಾದ್ರೆ ಮಾತ್ರ ಅಗಮಿಸಿ ನಿಮ್ಮನ್ನು ನಷ್ಟಕ್ಕೆ ದೂಡುವ ಸಾಧ್ಯತೆಗಳಿರುತ್ತವೆ. ಸ್ವಾರ್ಥಿಗಳ ಜೊತೆಗಿನ ಸ್ನೇಹ ನಿಮ್ಮನ್ನು ಕಷ್ಟಕ್ಕೆ ತಳ್ಳುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಕೆಲಸದ ಬಳಿಕ ಇವರು ನಿಮ್ಮಿಂದ ಅಂತರ ಕಾಯ್ದುಕೊಂಡು ನಿಮ್ಮ ವಿರುದ್ಧವೇ ದ್ವೇಷ ಸಾಧಿಸುತ್ತಾರೆ. ಆದ್ದರಿಂದ ಸ್ವಾರ್ಥಿ ಅತಿಥಿಗಳನ್ನು ಎಂದಿಗೂ ಕುರುಡರಾಗಿ ನಂಬಬಾರದು ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡುತ್ತಾರೆ.

77
ಕೋಪಿಷ್ಠ ಮತ್ತು ನಕಾರಾತ್ಮಕ ಜನರು

ಕೋಪ ಸ್ವಭಾವದ ಜನರು ಕಠೋರರಾಗಿದ್ದುಮ ನಿರಂತರವಾಗಿ ಕೊರಗುತ್ತಿರುತ್ತಾರೆ. ಇಂತಹ ಜನರ ಉಪಸ್ಥಿತಿ ಇಡೀ ವಾತಾವರಣವನ್ನು ಹಾಳು ಮಾಡುತ್ತದೆ. ಕೋಪ ಸ್ವಭಾವದ ಜನರ ಮಾತುಗಳು ಕಿರಿಕಿರಿಯನ್ನುಂಟು ಮಾಡುತ್ತದೆ. ಅತಿಥಿಗಳು ಬಂದಾಗ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಬೇಕೇ ಹೊರತು ನಕಾರಾತ್ಮಕ ಪಸರಿಸುವಂತಿರಬಾರದು. ಒತ್ತಡ ಮತ್ತು ನಕಾರಾತ್ಮಕತೆಯನ್ನು ಹರಡುವವರಿಂದ ಸಾಧ್ಯವಾದಷ್ಟು ದೂರವನ್ನು ಕಾಯ್ದುಕೊಳ್ಳಲು ನೀವು ಪ್ರಯತ್ನಿಸಬೇಕು.

Read more Photos on
click me!

Recommended Stories