ನಗುತ್ತಿರುವ ಬುದ್ಧನ ವಿಗ್ರಹವನ್ನು ನಾವು ಅನೇಕ ಅಂಗಡಿಗಳಲ್ಲಿ ನೋಡಿರುತ್ತೇವೆ. ಕಿರಾಣಿ ಅಂಗಡಿಯಿಂದ ಹಿಡಿದು ಬಟ್ಟೆ ಅಂಗಡಿವರೆಗೆ ಪ್ರತಿ ಅಂಗಡಿಯಲ್ಲೂ ಈ ವಿಗ್ರಹ ಖಂಡಿತ ಇರುತ್ತದೆ. ನಿಮಗೆ ತಿಳಿದಿದೆಯೇ? ಈ ವಿಗ್ರಹವನ್ನು ನಾವು ಮನೆಯಲ್ಲೂ ಇಡಬಹುದು. ಈ ವಿಗ್ರಹವು ನಿಮ್ಮ ಮನೆಗೆ ಹಣವನ್ನು ಆಕರ್ಷಿಸುತ್ತದೆ. ಇದು ಆನಂದ, ಸಮೃದ್ಧಿಯನ್ನು ಸಹ ಸೂಚಿಸುತ್ತದೆ. ಅಲ್ಲದೆ ಮನೆಯಿಂದ ಪ್ರತಿಕೂಲ ಶಕ್ತಿ, ಒತ್ತಡವನ್ನು ಇದು ತೊಲಗಿಸುತ್ತದೆ ಎಂದು ನಂಬಲಾಗಿದೆ.