ಶನಿ ಈ ರಾಶಿಯ ಅಧಿಪತಿ, ಹಾಗಾಗಿ ಹಲವು ವಿಷಯಗಳಲ್ಲಿ ಮೊಂಡುತನ ಇರುತ್ತೆ. ವೈಯಕ್ತಿಕ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ತಮಗೆ ಇಷ್ಟ ಬಂದ ಹಾಗೆ ಬದುಕ್ಬೇಕು ಅಂತ ಇರ್ತಾರೆ. ಆದ್ರೆ ಮದುವೆ ಆದ್ಮೇಲೆ ಒಮ್ಮೆಲೇ ಬದಲಾಗ್ತಾರೆ. ಜೀವನ ಸಂಗಾತಿ ಜೊತೆ ಎಲ್ಲ ವಿಷಯ ಹಂಚ್ಕೊಳ್ತಾರೆ. ಅವರು ಏನು ಹೇಳಿದ್ರೂ ಎದುರು ಮಾತಾಡದೆ ಕೇಳ್ತಾರೆ. ಸಂಬಂಧಕ್ಕೆ ತುಂಬಾ ಮಹತ್ವ ಕೊಡ್ತಾರೆ.