ಮನೆಯಂಗಳವೇ ಶಾಲೆ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಟೀಚರ್‌ಗಳ ಐಡಿಯಾ ಇದು!
First Published | Oct 4, 2020, 6:07 PM ISTದೇಶಾದ್ಯಂತ ಕೊರೋನಾ ಹಾವಳಿ ಮುಂದುವರೆದಿದೆ. ಇದು ಜನರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಅತ್ತ ಮಕ್ಕಳೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಮಕ್ಕಳಿಗೆ ಆನ್‌ಲೈನ್ ತರಗತಿ ಮೂಲಕ ಕಲಿಯುವ ಅವಕಾಶ ಸಿಕ್ಕರೆ, ಇನ್ನು ಕೆಲ ಮಕ್ಕಳಿಗೆ ಈ ಸೌಲಭ್ಯವಿಲ್ಲದೇ ಶಾಲೆ, ಪಾಠ, ಶಿಕ್ಷಕರಿಂದ ದೂರವಾಗಿದ್ದಾರೆ. ಹೀಗಿರುವಾಗ ಜಾರ್ಖಂಡ್‌ನ ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆ ಪಾಠ ಹೇಳಿ ಕೊಡಲು ವಿಭಿನ್ನ ಶೈಲಿಯನ್ನು ಅನುಸರಿಸಿದ್ದಾರೆ. ಆನ್‌ಲೈನ್ ಪಾಠ ಮಾಡೋದು ಸಾಧ್ಯವಿಲ್ಲ ಎಂದಾಗ ತಮ್ಮ ವಿನೂತನ ಪ್ರಯೋಗದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.