IAS ಸಂದರ್ಶನದಲ್ಲಿ ಕೇಳೋ ಪ್ರಶ್ನೆಗಳಿವು: ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತೆ?
First Published | Sep 28, 2020, 1:41 PM ISTIAS Interview Questions in Kannada: ಮನುಷ್ಯನಿಗೆ ಕೇವಲ ಶಿಕ್ಷಣವೊಂದಿದ್ದರೆ ಸಾಲದು. ಜೊತೆಗೆ ಕೇಳುವ ಪ್ರಶ್ನೆಗೆ ತರ್ಕಬದ್ಧವಾಗಿ ಉತ್ತರಿಸುವ ಹಾಗೂ ಸಾಮಾಧಾನದಿಂದ ಇರುವ ಗುಣವೂ ಅಗತ್ಯ. ಅಂಥ ಗುಣವಿದ್ದವರು ಮಾತ್ರ ಐಎಎಸ್‌ನಂಥ ಕಠಿಣ ಪರೀಕ್ಷೆಗಳಲ್ಲಿಯೂ ಉತ್ತೀರ್ಣವಾಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ದೇಶದಲ್ಲಿ ಹಲವುರು UPSC ಪರೀಕ್ಷೆಗೆ ಕಷ್ಟಪಟ್ಟು ತಯಾರಿ ನಡೆಯಿಸಿ, ಪರೀಕ್ಷೆ ಬರೆದರೂ ಪಾಸಾಗುವುದಿಲ್ಲ. ಪಾಸಾದರೂ ಸಂದರ್ಶನದಲ್ಲಿ ಮತ್ತೆ ತಮ್ಮ ಕಾಮನ್ ಸೆನ್ಸ್ ಬಳಸಿ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ಕೇವಲ ಬುದ್ಧಿಮತ್ತೆ ಮಾತ್ರವಿದ್ದರೆ ಸಾಲದು, ಬದಲಾಗಿ ಸಂದರ್ಭಕ್ಕೆ ತಕ್ಕಂತೆ ಸಹನೆಯಿಂದ ಉತ್ತರಿಸುವುದು ಮುಖ್ಯವಾಗುತ್ತದೆ. ಆ ಮೂಲಕ ವ್ಯಕ್ತಿತ್ವವನ್ನೂ ಇಲ್ಲಿ ಪ್ರದರ್ಶಿಸಬೇಕಾಗಿದೆ. ಅಭ್ಯರ್ಥಿಯನ್ನು ಸಮಗ್ರವಾಗಿ ಪರೀಕ್ಷಿಸುವಂಥ ಪ್ರಶ್ನೆಗಳು ಹೀಗಿರುತ್ತವೆ.