ಅಬ್ಬಬ್ಬಾ..ಅಂಬಾನಿ ಸೊಸೆಯಂದಿರಾದ ಶ್ಲೋಕಾ-ರಾಧಿಕಾ ಇಷ್ಟೊಂದು ಓದ್ಕೊಂಡಿದ್ದಾರಾ?

Published : Mar 01, 2024, 09:44 AM ISTUpdated : Mar 01, 2024, 09:51 AM IST

ಬಿಲಿಯನೇರ್‌ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಮದ್ವೆಗೆ ಕೆಲವೇ ದಿನ ಇರುವಾಗಲೇ ಅಂಬಾನಿ ಸೊಸೆಯ ಶೈಕ್ಷಣಿಕ ಹಿನ್ನಲೆ ಎಲ್ಲರ ಗಮನ ಸೆಳೆಯುತ್ತಿದೆ. ಇಷ್ಟಕ್ಕೂ ಅವರ ಎಜುಕೇಶನ್ ಕ್ವಾಲಿಫಿಕೇಶನ್ ಏನು?  

PREV
110
ಅಬ್ಬಬ್ಬಾ..ಅಂಬಾನಿ ಸೊಸೆಯಂದಿರಾದ ಶ್ಲೋಕಾ-ರಾಧಿಕಾ ಇಷ್ಟೊಂದು ಓದ್ಕೊಂಡಿದ್ದಾರಾ?

ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರನ ಮದುವೆ ಪೂರ್ವ ಸಮಾರಂಭಗಳು ಅದ್ದೂರಿಯಾಗಿ ನಡೆಯುತ್ತಿವೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವ್ರನ್ನು ವಿವಾಹವಾಗಲಿದ್ದಾರೆ.

210

ಮುಕೇಶ್‌ ಅಂಬಾನಿ ಮನೆ ಮದುವೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಂಬಾನಿ ಸೊಸೆಯಂದಿರ ಶೈಕ್ಷಣಿಕ ಹಿನ್ನಲೆ ಎಲ್ಲರ ಗಮನ ಸೆಳೆಯುತ್ತಿದೆ. 

310

ಮುಕೇಶ್ ಮತ್ತು ನೀತಾ ಅಂಬಾನಿ ಅಳಿಯ ಮತ್ತು ಸೊಸೆಯರು ತಮ್ಮ ಕುಟುಂಬದ ವ್ಯವಹಾರಗಳಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ವಹಿಸುತ್ತಿದ್ದಾರೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಪೂರೈಸಿದ್ದಾರೆ. ಕೋಟಿಗಟ್ಟಲೆ ವ್ಯವಹಾರ ನಡೆಸೋ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. 

410

ಆಕಾಶ್ ಅಂಬಾನಿಯನ್ನು ವಿವಾಹವಾದ ಶ್ಲೋಕಾ ಮೆಹ್ತಾ ಮತ್ತು ಇಶಾ ಅಂಬಾನಿ ಅವರನ್ನು ವಿವಾಹವಾದ ಆನಂದ್ ಪಿರಾಮಲ್ ಅವರಂತೆಯೇ ರಾಧಿಕಾ ಶ್ರೀಮಂತ ಕುಟುಂಬದಿಂದ ಬಂದವರು. ಇಬ್ಬರೂ ಉನ್ನತ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ.
 

510

ಶ್ಲೋಕಾ ಮೆಹ್ತಾ
ಶ್ಲೋಕಾ ಮೆಹ್ತಾ ಪೋಷಕರಾದ ರಸೆಲ್ ಮೆಹ್ತಾ ಮತ್ತು ಮೋನಾ ಮೆಹ್ತಾ, ರೋಸಿ ಬ್ಲೂ ಇಂಡಿಯಾದ ಪ್ರಮುಖ ಕಾರ್ಯನಿರ್ವಾಹಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ರೋಸಿ ಬ್ಲೂ ಇಂಡಿಯಾ ಕಂಪನಿಯ ಮಂಡಳಿಯಲ್ಲಿ ನಿರ್ದೇಶಕಿಯಾಗಿರುವ ಜೊತೆಗೆ, ಶ್ಲೋಕಾ ಆಕಾಶ್ ಅಂಬಾನಿ ಅವರ ಪತ್ನಿ. 
 

610

ನ್ಯೂಜೆರ್ಸಿಯ ಐವಿ ಲೀಗ್ ವಿಶ್ವವಿದ್ಯಾನಿಲಯವಾದ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರದಲ್ಲಿ ತನ್ನ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ (LSE) ನಿಂದ ಕಾನೂನು, ಮಾನವಶಾಸ್ತ್ರ ಮತ್ತು ಸಮಾಜದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.

710

ಆಕಾಶ್ ಅಂಬಾನಿ ಮತ್ತು ಶ್ಲೋಕಾ 2019 ರಲ್ಲಿ ವಿವಾಹವಾದರು ಮತ್ತು ಡಿಸೆಂಬರ್ 2020ರಲ್ಲಿ ಮಗುವಿಗೆ ಜನ್ಮ ನೀಡಿದರು. ಇಬ್ಬರು ಮಕ್ಕಳು ಪೃಥ್ವಿ ಆಕಾಶ್ ಅಂಬಾನಿ ಮತ್ತು ಮಗಳು ವೇದಾ ಅಂಬಾನಿ.

810

ರಾಧಿಕಾ ಮರ್ಚೆಂಟ್‌
ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ, ಎನ್‌ಕೋರ್ ಹೆಲ್ತ್‌ಕೇರ್ (ಇಎಚ್‌ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ. ಆಕೆಯ ಪೋಷಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು CEO ಆಗಿದ್ದಾರೆ.

910

ಶೀಘ್ರದಲ್ಲೇ ಅನಂತ್ ಅಂಬಾನಿ ಅವರನ್ನು ವಿವಾಹವಾಗಲಿರುವ ರಾಧಿಕಾ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

1010

ಅನಂತ್ ಅಂಬಾನಿ ಹಾಗೂ ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಈಗಾಗ್ಲೇ ಗುಜರಾತ್‌ನ ಜಾಮ್‌ನಗರದಲ್ಲಿ ಆರಂಭವಾಗಿದೆ. ಮಾರ್ಚ್ 3ರ ವರೆಗೆ ಇದು ನಡೆಯಲಿದೆ. 

Read more Photos on
click me!

Recommended Stories