ಗರಿಷ್ಠ ಸಾಕ್ಷರತೆಯಲ್ಲಿ ಕೇರಳಕ್ಕೆ 5ನೇ ಸ್ಥಾನ, ಮೊದಲ ಸ್ಥಾನ ಯಾರಿಗೆ? ಇಲ್ಲಿ ಶೇ.100ರಷ್ಟು ಲಿಟ್ರಸಿ

Published : Jun 28, 2026, 03:41 PM IST

100 ಪರ್ಸೆಂಟ್ ಲಿಟ್ರಸಿ ಸಾರ್ ಎಂದರೆ ತಕ್ಷಣ ಕೇರಳ ನೆನಪಾಗುತ್ತದೆ. ಆದರೆ ಕೇರಳ ಭಾರತದ ಗರಿಷ್ಠ ಸಾಕ್ಷರತೆ ರಾಜ್ಯಗಳ ಪೈಕಿ 5ನೇ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಕೇರಳದಲ್ಲಿ ಶೇ.100ರಷ್ಟು ಸಾಕ್ಷರತೆ ಇಲ್ಲ. ಹಾಗಾದರೆ ಮೊದಲ ನಾಲ್ಕು ಸ್ಥಾನದಲ್ಲಿ ಯಾರಿದ್ದಾರೆ?

PREV
16
ಗರಿಷ್ಠ ಸಾಕ್ಷರತೆಯ ರಾಜ್ಯ

ಭಾರತದಲ್ಲಿ ಸಾಕ್ಷರತೆ ಹಲವು ಬಾರಿ ಚರ್ಚೆಯಾಗಿದೆ. ಶೇಕಡಾ 100ರಷ್ಟು ಸಾಕ್ಷರತೆ ಹೊಂದಿದ ರಾಜ್ಯ ಯಾವುದು ಎಂದು ಪ್ರಶ್ನಿಸಿದರೆ ಎಲ್ಲರೂ ಕೇರಳ ಎಂಬ ಉತ್ತರ ನೀಡುತ್ತಾರೆ. ಆದರೆ ಅಸಲಿಗೆ ಕೇರಳದಲ್ಲಿ ಶೇಕಡಾ 100ರಷ್ಟು ಲಿಟ್ರಸಿ ಇಲ್ಲ. ಕೇರಳ ಗರಿಷ್ಠ ಸಾಕ್ಷರತೆಯಲ್ಲಿ 5ನೇ ಸ್ಥಾನದಲ್ಲಿದೆ. ಆದರೆ ಕೇರಳ ಮಾಡಿದ ಪ್ರಚಾರ ದೇಶಾದ್ಯಂತ ಪಸರಿಸಿದೆ. ಆದರೆ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು ಗೊತ್ತಾ?

26
ಸಂಪೂರ್ಣ ಸಾಕ್ಷರತೆ ಹೊಂದಿದ ರಾಜ್ಯ ಯಾವುದು?

ಭಾರತದಲ್ಲಿ ಗರಿಷ್ಠ ಸಾಕ್ಷರತೆ ಹೊಂದಿದ ರಾಜ್ಯಗಳ ಪೈಕಿ ಮೊದಲ ಸ್ಥಾನ ಮಿಜೋರಾಂಗೆ ಸಂದಿದೆ. ಮಿಜೋರಾಂನಲ್ಲಿ ಎಲ್ಲರೂ ಸಾಕ್ಷರರಾಗಿದ್ದಾರೆ. ಇಲ್ಲಿನ ಸಾಕ್ಷರತೆ ಪ್ರಮಾಣ ಶೇಕಡಾ 98.2. ಮಿಜೋರಾಂ ರಾಜ್ಯ ಶಿಕ್ಷಣದಲ್ಲಿ ಕ್ರಾಂತಿ ಮಾಡಿದೆ. ಇಷ್ಟೇ ಅಲ್ಲ ಮಿಜೋರಾಂ ಜನರು ಶಿಸ್ತು ಪಾಲಿಸುವಲ್ಲೂ ಮುಂದಿದ್ದಾರೆ.

36
ಕೇರಳಕ್ಕಿಂತ ಮುಂದಿದೆ ನಾಲ್ಕು ರಾಜ್ಯ

ಸಂಪೂರ್ಣ ಲಿಟ್ರಸಿಯಲ್ಲಿ ಮಿಜೋರಾಂ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಲಕ್ಷದ್ವೀಪವಿದೆ. ಲಕ್ಷದ್ವೀಪದಲ್ಲಿ ಶೇಕಡಾ 97.3 ರಷ್ಟು ಸಾಕ್ಷರತೆ ಇದೆ. ಇನ್ನು ನ್ಯಾಗಾಲಾಂಡ್ ಶೇಕಡ 95.7, ತ್ರಿಪುರಾ ಶೇಕಡಾ 95.6 ಸಾಕ್ಷರತೆ ಹೊಂದಿದ್ದರೆ, ನಂಬರ್ 1 ಎಂದೆ ಕರೆಯಿಸಿಕೊಳ್ಳುವ ಕೇರಳ 5ನೇ ಸ್ಥಾನದಲ್ಲಿದೆ. ಕೇರಳದ ಸಾಕ್ಷರತೆ ಪ್ರಮಾಣ ಶೇಕಡಾ 95.3.

46
ಗರಿಷ್ಠ ಸಾಕ್ಷರತೆ ಹೊಂದಿದ ಭಾರತದ ರಾಜ್ಯ
  1. ಮಿಜೋರಾಂ: ಶೇ.98.2
  2. ಲಕ್ಷದ್ವೀಪ: ಶೇ.97.3
  3. ನಾಗಾಲಾಂಡ್ : ಶೇ.96.7
  4. ತ್ರಿಪುರಾ: ಶೇ.95.6
  5. ಕೇರಳ: ಶೇ.96.3
  6. ಮೆಘಾಲಯ: ಶೇ.95.4
  7. ಚಂಡಿಘಡ: ಶೇ.93.7
  8. ಗೋವಾ: ಶೇ.93.6
  9. ಪುದುಚೇರಿ: ಶೇ.92.7
  10. ಮಣಿಪುರ: ಶೇ.92
56
ಕರ್ನಾಟಕದ ಸಾಕ್ಷರತೆ ಪ್ರಮಾಣ

ಕರ್ನಾಟಕ ಸಾಕ್ಷರತೆ ವಿಚಾರದಲ್ಲಿ ಹಲವು ರಾಜ್ಯಗಳಿಗಿಂತ ಮುಂದಿದೆ. ಆದರೆ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಕರ್ನಾಟಕ ಜದ ಸಾಕ್ಷರತೆ ಪ್ರಮಾಣ ಶೇಕಡಾ 75.36. ಕರ್ನಾಟಕದ ಪೈಕಿ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಬೆಂಗಳೂರು, ಮೂರನೇ ಸ್ಥಾನದಲ್ಲಿ ಉಡುಪಿ, ನಾಲ್ಕನೇ ಸ್ಥಾನದಲ್ಲಿ ಉತ್ತರ ಕನ್ನಡ ಹಾಗೂ ಐದನೇ ಸ್ಥಾನ ಕೊಡಗು ಪಡೆದುಕೊಂಡಿದೆ.

66
ಅತೀ ಕಡಿಮೆ ಸಾಕ್ಷರತೆ ರಾಜ್ಯಗಳು

ಭಾರತದಲ್ಲಿ ಅತೀ ಕಡಿಮೆ ಸಾಕ್ಷರತೆ ಹೊಂದಿದೆ ರಾಜ್ಯಗಳ ಪಟ್ಟಿಯೂ ಬಿಡುಗಡೆಯಾಗಿದೆ. ಈ ಪೈಕಿ ಬಿಹಾರ ಮೊದಲ ಸ್ಥಾನದಲ್ಲಿದೆ.

  • ಬಿಹಾರ
  • ಮಧ್ಯಪ್ರದೇಶ
  • ರಾಜಸ್ಥಾನ
  • ಜಾರ್ಖಂಡ್
Read more Photos on
click me!

Recommended Stories