ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಲಿಸಲೇಬೇಕಾದ ಕೌಟಿಲ್ಯನ ಈ ಜೀವನ ಪಾಠಗಳು

Published : Oct 02, 2024, 06:10 PM IST

ಕೌಟಿಲ್ಯ ಮಕ್ಕಳ ಜೀವನ ಉದ್ದಾರವಾಗೋದಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನ ಪಾಲಿಸಿದ್ರೆ ಮಕ್ಕಳು ಜೀವನದಲ್ಲಿ ಉತ್ತಮ ರೀತಿಯಲ್ಲಿ ಬಾಳೋದಕ್ಕೆ ಸಾಧ್ಯವಾಗುತ್ತೆ.   

PREV
110
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಲಿಸಲೇಬೇಕಾದ ಕೌಟಿಲ್ಯನ ಈ ಜೀವನ ಪಾಠಗಳು

ಸಾಮಾನ್ಯವಾಗಿ ಚಾಣಕ್ಯ ಎಂದು ಕರೆಯಲ್ಪಡುವ ತತ್ವಜ್ಞಾನಿ ಮತ್ತು ಶಿಕ್ಷಕ ಕೌಟಿಲ್ಯನ ಬೋಧನೆಗಳು ಹಲವು ಶತಮಾನಗಳಿಂದ ಜನರಿಗೆ ಮಾರ್ಗದರ್ಶನ ನೀಡಿವೆ. ಅವರು ಮೌರ್ಯ ಸಾಮ್ರಾಜ್ಯದ ಬೆಳವಣಿಗೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಅರ್ಥಶಾಸ್ತ್ರವನ್ನೂ ಬರೆದಿದ್ದಾರೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ಪಾಠಗಳು (Life lesson by Chanakya) ಇಲ್ಲಿವೆ.
 

210

ಶಿಕ್ಷಣವು ಯಶಸ್ಸಿಗೆ ಕಾರಣವಾಗುತ್ತೆ
ಕೌಟಿಲ್ಯನು ಶಿಕ್ಷಣದ (Education) ಪ್ರಾಮುಖ್ಯತೆ ಬಗ್ಗೆ ಹೆಚ್ಚು ಬೆಳಕು ಬೀರಿದ್ದಾರೆ. ಅವರ ಪ್ರಕಾರ, ಶಿಕ್ಷಣವು ಯಾರಾದರೂ ಹೊಂದಬಹುದಾದ ಅತಿದೊಡ್ಡ ಸಂಪತ್ತು. ಜ್ಞಾನವು ಗೌರವ, ಅವಕಾಶಗಳು ಮತ್ತು ಬುದ್ಧಿವಂತಿಕೆಗೆ ಬಾಗಿಲು ತೆರೆಯುತ್ತದೆ. ನಮ್ಮಲ್ಲಿರುವ ಸೌಂದರ್ಯ, ಸಂಪತ್ತು ಮತ್ತು ವಯಸ್ಸು ಕೂಡ ಒಂದಲ್ಲ ಒಂದು ದಿನ ನಶಿಸಿ ಹೋಗಬಹುದು ಆದರೆ ನಾವು ಕಲಿತ ಶಿಕ್ಷಣ ಯಾವಾಗ್ಲೂ ನಮ್ಮ ಜೊತೆ ಇರುತ್ತೆ. 

310

ಕಲಿಕೆಯ ಪ್ರಾಮುಖ್ಯತೆ
ಕಲಿಕೆಯು (learning) ಜೀವನಪರ್ಯಂತದ ಪ್ರಯಾಣ ಎಂದು ನಿಮ್ಮ ಮಕ್ಕಳಿಗೆ ಕಲಿಸಿ. ಕುತೂಹಲದಿಂದಿರಲು, ಪ್ರಶ್ನೆಗಳನ್ನು ಕೇಳಲು ಮತ್ತು ಹೊಸ ವಿಷಯಗಳನ್ನು ಅನ್ವೇಷಿಸಲು ಅವರನ್ನು ಪ್ರೇರೇಪಿಸಿ ಎನ್ನುತ್ತಾರೆ ಕೌಟಿಲ್ಯ. 

410

ನಿಮ್ಮ ರಹಸ್ಯಗಳನ್ನು ಸುರಕ್ಷಿತವಾಗಿರಿಸಿಲು ಮಕ್ಕಳಿಗೆ ತಿಳಿಸಿ
ನಿಮ್ಮ ರಹಸ್ಯಗಳನ್ನು ಎಂದಿಗೂ ಎಲ್ಲರೊಂದಿಗೂ ಹಂಚಿಕೊಳ್ಳಬೇಡಿ. ಇದು ವಿವೇಚನೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಎಲ್ಲವನ್ನೂ ಎಲ್ಲರೊಂದಿಗೂ ಹಂಚಿಕೊಳ್ಳಬಾರದು. ಯಾರನ್ನು ನಂಬಬೇಕು ಮತ್ತು ಯಾವ ವಿಷ್ಯವನ್ನು ಹೇಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
 

510

ಗೌಪ್ಯತೆಯ ಮೌಲ್ಯ
ಮುಕ್ತವಾಗಿರುವುದು ಒಳ್ಳೆಯದಾದರೂ, ಭವಿಷ್ಯದಲ್ಲಿ ಉಂಟಾಗುವ ಹಾನಿ ಅಥವಾ ದುರುಪಯೋಗವನ್ನು ತಪ್ಪಿಸಲು ಕೆಲವು ವಿಷಯಗಳನ್ನು ಖಾಸಗಿಯಾಗಿಡುವುದು ಉತ್ತಮ ಎಂದು ಮಕ್ಕಳು ಅರ್ಥಮಾಡಿಕೊಳ್ಳಬೇಕು.

610

ನಿಮ್ಮ ಕೆಲಸ ಮಾತನಾಡುತ್ತೆ
"ಮನುಷ್ಯನು ಹುಟ್ಟಿನಿಂದ ಅಲ್ಲ, ತನ್ನ ಕೆಲಸಗಳಿಂದಾಗಿ ಶ್ರೇಷ್ಠನಾಗುತ್ತಾನೆ" ಎಂದು ಕೌಟಿಲ್ಯನು ಹೇಳಿದ್ದಾನೆ.  ಕಠಿಣ ಪರಿಶ್ರಮ (hard work) ಮತ್ತು ನೈತಿಕ ನಡವಳಿಕೆಯು ಒಬ್ಬ ವ್ಯಕ್ತಿಯ ಶ್ರೇಷ್ಠತೆ ಬಗ್ಗೆ ತಿಳಿಸುತ್ತೆ. ಅವರ ಹಿನ್ನೆಲೆ ಅಥವಾ ಸ್ಥಾನಮಾನವಲ್ಲ ಎಂದು ನಿಮ್ಮ ಮಕ್ಕಳಿಗೆ ಕಲಿಸಿ ಎನ್ನುತ್ತಾರೆ ಚಾಣಕ್ಯ.

710

ನೋಟದ ಬಗ್ಗೆ ಜಾಗೃತೆ ವಹಿಸಿ
ಹಾವು ವಿಷಕಾರಿಯಲ್ಲದಿದ್ದರೂ, ಅದು ವಿಷಕಾರಿಯಾಗಿ ನಟಿಸಬೇಕು ಇದು ಕಠಿಣವೆಂದು ತೋರಿದರೂ, ಇದು ಗ್ರಹಿಕೆಯ ಪಾಠವನ್ನು ಕಲಿಸುತ್ತದೆ. ಹಾಗಾಗಿ ಯಾವುದೇ ವ್ಯಕ್ತಿಯ ಮುಖ ನೋಡಿ ನಂಬೋದಕ್ಕೆ ಹೋಗಬೇಡಿ, ಅವರ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ. 

810

ನಿಮ್ಮನ್ನು ಜಾಣತನದಿಂದ ರಕ್ಷಿಸಿಕೊಳ್ಳಿ
ನೀವು ಯಾವಾಗಲೂ ಶಕ್ತಿಶಾಲಿ ಅಥವಾ ಆಕ್ರಮಣಕಾರಿಯಾಗಿರದಿದ್ದರೂ, ನಿಮ್ಮ ಎದುರಿಗೆ ಬರುವಂತಹ ಅಪಾಯವನ್ನು ತಡೆಗಟ್ಟೋದಕ್ಕೆ ಒಂದಿಷ್ಟು ಬುದ್ದಿವಂತಿಕೆ, ರಕ್ಷಣಾ ಕ್ರಮಗಳನ್ನು ತಿಳ್ಕೊಂಡಿದ್ರೆ ಒಳ್ಳೇದು. 

910

ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ
ಕೌಟಿಲ್ಯನು ಹೇಳುವಂತೆ ನಿಮ್ಮ ಸ್ಥಾನಮಾನಕ್ಕಿಂತ ಮೇಲಿನ ಅಥವಾ ಕೆಳಗಿನ ಯಾರೊಂದಿಗೂ ಎಂದಿಗೂ ಸ್ನೇಹ ಬೆಳೆಸಬೇಡಿ. ಸ್ನೇಹಿತರನ್ನು ಆಯ್ಕೆ ಮಾಡುವಾಗ ತುಂಬಾನೆ ಯೋಚನೆ ಮಾಡಿ ಆಯ್ಕೆ ಮಾಡಿ. 
 

1010

ಉತ್ತಮ ಗುಣಗಳುಳ್ಳ ಸ್ನೇಹಿತರನ್ನ ಆಯ್ಕೆ ಮಾಡಲು ಪ್ರೋತ್ಸಾಹಿಸಿ
ನಿಮ್ಮ ಮಕ್ಕಳನ್ನು ತೊಂದರೆಗೆ ಸಿಲುಕಿಸುವ ಸ್ನೇಹಿತರನ್ನು ಆಯ್ಕೆ ಮಾಡುವುದನ್ನು ತಪ್ಪಿಸಲು ಅವರಿಗೆ ಸರಿ ತಪ್ಪುಗಳ ಮಾಹಿತಿ ನೀಡಿ. ಒಂದೇ ರೀತಿಯ ಆಸಕ್ತಿಗಳು ಮತ್ತು ಮೌಲ್ಯಗಳನ್ನು ಹೊಂದಿರುವ ಸಂಗಾತಿಗಳನ್ನು ಮಾಡಿಕೊಳ್ಳಲು ಪ್ರೋತ್ಸಾಹಿಸಿ.  

Read more Photos on
click me!

Recommended Stories