ಉನ್ನತ ಶಿಕ್ಷಣ, ಉದ್ಯೋಗಾವಕಾಶ: ಕರ್ನಾಟಕ-ಬ್ರಿಟನ್‌ ಒಪ್ಪಂದ

First Published Dec 18, 2020, 8:26 AM IST

ಬೆಂಗಳೂರು(ಡಿ.18): ವಿದ್ಯಾರ್ಥಿಗಳ ಇಂಗ್ಲೀಷ್‌ ಭಾಷಾ ಕೌಶಲ್ಯವೃದ್ಧಿ, ಉದ್ಯೋಗಾವಕಾಶ ಹೆಚ್ಚಳ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು ಸೇರಿದಂತೆ ವಿವಿಧ ಉದ್ದೇಶಗಳನ್ನು ಒಳಗೊಂಡ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಹಾಗೂ ಬ್ರಿಟಿಷ್‌ ಕೌನ್ಸಿಲ್‌ ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಮ್ಮುಖದಲ್ಲಿ ಸಹಿ ಹಾಕಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವ ಬೆಳವಣಿಗೆಗೆ ಸಂಬಂಧಿಸಿ ಮೂರು ವರ್ಷಗಳ ಅವಧಿಯ ಒಪ್ಪಂದಕ್ಕೆ ಎರಡೂ ಸರ್ಕಾರಗಳು ಸಹಿ ಮಾಡಿವೆ. ಸಹಕಾರ, ವಾಣಿಜ್ಯ, ತಂತ್ರಜ್ಞಾನ, ರಕ್ಷಣಾ ಮತ್ತು ಸಂಸ್ಕೃತಿ ಮುಂತಾದ ಕ್ಷೇತ್ರಗಳಿಗೆ ಉಭಯ ದೇಶಗಳ ಸಂಬಂಧ ವ್ಯಾಪಿಸಿದೆ ಎಂದು ಹೇಳಿದರು.
undefined
ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಉನ್ನತ ಶಿಕ್ಷಣವು ಬಹುಶಿಸ್ತೀಯ ಅಧ್ಯಯನವಾಗಲಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯಕ್ಕೆ ತಕ್ಕಂತೆ ಕನಿಷ್ಠ ನಾಲ್ಕು ವಿಷಯಗಳಿಂದ ಹಿಡಿದು ಗರಿಷ್ಠ ಎಷ್ಟುಸಾಧ್ಯವೋ ಅಷ್ಟುವಿಷಯಗಳನ್ನು ಅಭ್ಯಾಸ ಮಾಡಬಹುದು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದ ಸ್ವರೂಪವೇ ಬದಲಾಗಲಿದೆ. ಹೀಗಾಗಿ, ಈ ಸಹಭಾಗಿತ್ವ ಪರಸ್ಪರ ಎರಡೂ ದೇಶಗಳಿಗೆ ಅನುಕೂಲಕರವಾಗಿದೆ ಎಂದರು.
undefined
ಈ ಸಂದರ್ಭದಲ್ಲಿ ರಾಜ್ಯ ಮುಖ್ಯಕಾರ್ಯದರ್ಶಿ ವಿಜಯ್‌ ಭಾಸ್ಕರ್‌, ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್‌ ರಾಬ್‌, ಬ್ರಿಟಿಷ್‌ ಕೌನ್ಸಿಲ್‌ (ಭಾರತ) ನಿರ್ದೇಶಕಿ ಬಾರ್ಬರಾ ವಿಕ್‌ಹ್ಯಾಮ್‌ ಉಪಸ್ಥಿತರಿದ್ದರು.
undefined
ಒಪ್ಪಂದದಲ್ಲಿನ ಪ್ರಮುಖ ಅಂಶಗಳು: ಶಿಕ್ಷಣ ಕಾರ್ಯಕ್ರಮಗಳನ್ನು ಯೋಜಿಸಲು ಸೂಕ್ತ ನೀಲನಕ್ಷೆ ರೂಪಿಸುವುದು, ಹೊಸ ಜ್ಞಾನಶಾಖೆಗಳಿಗೆ ಯು.ಕೆ.ಸಂಸ್ಥೆಗಳೊಂದಿಗೆ ಸಹಭಾಗಿತ್ವ, ಉನ್ನತ ಶಿಕ್ಷಣದ ಬೋಧಕ ವೃಂದದಲ್ಲಿ ನಾಯಕತ್ವ ವೃದ್ಧಿ, ವಿದ್ಯಾರ್ಥಿಗಳು-ಬೋಧಕರ ಮಟ್ಟದಲ್ಲಿ ಎರಡೂ ದೇಶಗಳ ನಡುವೆ ಪರಸ್ಪರ ವಿನಿಮಯ ಶೈಕ್ಷಣಿಕ ಸಂಶೋಧನೆ ಹಾಗೂ ಶಿಕ್ಷಣ ಗುಣಮಟ್ಟದತ್ತ ಗಮನ ಕೇಂದ್ರೀಕರಣ.
undefined
click me!