ಈ ಸವಾಲಿನ ಕಾಲದಲ್ಲಿ ಸುಲಭವಾಗಿ ಕಾರ್ಯಗಳನ್ನು ಮಾಡಬಹುದೆಂಬುದನ್ನು ಹಲವು ಉದಾಹರಣೆಗಳು ತೋರಿಸಿಕೊಟ್ಟಿವೆ. ಇಂತಹ ಸಮಯದಲ್ಲಿ ಜೀವನ ಎದುರಿಸಲು ಸಿದ್ಧವಾಗಲು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ 5 ಕೌಶಲ್ಯಗಳು ಇಲ್ಲಿವೆ:
undefined
ಹೊಂದಿಕೊಳ್ಳುವಿಕೆ, ಚುರುಕುತನಬದಲಾವಣೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಮತ್ತು ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಹೊಂದಿಕೊಳ್ಳುವ ನಿಮ್ಮ ಸಾಮರ್ಥ್ಯ, ಜೀವನ ಪಯಣದಲ್ಲಿ ಸವಾಲುಗಳನ್ನು ಎದುರಿಸುವುದು, ಇದಕ್ಕೆಲ್ಲ ನಿಮಗೆ ನೀವೇ ನೀಡಬಹುದಾದ ಮೋಟಿವೇಷನ್ ಪ್ರಮುಖ ಪಾತ್ರ ವಹಿಸುತ್ತದೆ.
undefined
ಯಾವುದೇ ಸಂದರ್ಭಕ್ಕೆ ನೀವು ಹೇಗೆ ರಿಯಾಕ್ಟ್ ಮಾಡುತ್ತೀರಿ, ನಿಮ್ಮ ರೆಸ್ಪಾನ್ಸ್ ಹೇಗಿರುತ್ತದೆ ಅನ್ನೋದರ ಮೇಲೆ ಗಮನ ಕೊಡಿ. ನಿಮ್ಮ ಗೆಳೆಯರೊಂದಿಗೆ ನೀವು ಹೇಗೆ ಸಂವಹನ ನಡೆಸುತ್ತೀರಿ? ನೀವೇ ಗಮನಿಸಿ ಸುಧಾರಿಸಿಕೊಳ್ಳಿ .
undefined
ರಿಸ್ಕ್ ಟೇಕಿಂಗ್ ಮತ್ತು ಇನ್ನೋವೇಶನ್ಒಂದು ಅವಕಾಶವನ್ನು ತೆಗೆದುಕೊಳ್ಳುವುದು,ಔಟ್ ಅಫ್ ಬಾಕ್ಸ್ -ಪರಿಹಾರಗಳು, ವಿಭಿನ್ನ ಆಲೋಚನೆಗಳೊಂದಿಗೆ ಬರುವುದು ಮತ್ತು ವೈಫಲ್ಯಗಳನ್ನು ಸ್ವೀಕರಿಸುವ ಧೈರ್ಯ ಭವಿಷ್ಯದ ನಾಯಕರಿಗೆ ತುಂಬಾ ಮುಖ್ಯವಾಗಿದೆ. ಅಸಾಧ್ಯ ಸನ್ನಿವೇಶಗಳಲ್ಲಿ ನೀವು ಪರಿಹಾರಗಳನ್ನು ಕಂಡುಕೊಳ್ಳಬಹುದೇ? ಇಲ್ಲವೇ ಎಂಬುದನ್ನು ನೀವು ಕಂಡುಕೊಳ್ಳಬೇಕಾದುದು ತುಂಬಾನೇ ಮುಖ್ಯ.
undefined
ವಿಮರ್ಶಾತ್ಮಕ ಚಿಂತನೆಎಲ್ಲಾ ಅಂಶಗಳಿಂದ ಪರಿಸ್ಥಿತಿಯನ್ನು ನಿರ್ಣಯಿಸುವ ನಿಮ್ಮ ಸಾಮರ್ಥ್ಯವು ತುಂಬಾ ಮುಖ್ಯವಾಗಿದೆ. ನೀವು ಸಮಸ್ಯೆ ಪರಿಹಾರಗಾರರಾಗಿದ್ದೀರಾ? ನೀವು ಬಹು ಪರಿಹಾರಗಳ ಬಗ್ಗೆ ಯೋಚಿಸಬಹುದೇ? ಪರಿಸ್ಥಿತಿಯಲ್ಲಿ ನೀವು ಪರಿಗಣಿಸದ ದೃಷ್ಟಿಕೋನವಿದೆಯೇ? ಈ ಪ್ರಮುಖ ಪ್ರಶ್ನೆಗಳನ್ನು ಕೇಳುವುದು ನಿಮ್ಮನ್ನು ಜೀವನ ಮತ್ತು ಯಾವುದೇ ಪರಿಸ್ಥಿತಿಗೆ ಸಿದ್ಧಗೊಳಿಸುತ್ತದೆ.
undefined
ಪಾಸಿಟಿವ್ ಆಗಿರಿವಿಷಯಗಳನ್ನು ಸರಳ ಮತ್ತು ಪಾರದರ್ಶಕವಾಗಿ ಇರಿಸಿ. ಸಕಾರಾತ್ಮಕ ಮನೋಭಾವ ನಿಮ್ಮನ್ನು ಬಹಳ ದೂರದವರೆಗೆ ಕೈ ಹಿಡಿಯುತ್ತದೆ. ಒಬ್ಬರಿಗೊಬ್ಬರು ಬೆಂಬಲಿಸುವವರು, ಪ್ರತಿ ಯಶಸ್ಸು ಮತ್ತು ವೈಫಲ್ಯವನ್ನು ಸಮಾನವಾಗಿ ಸ್ವೀಕರಿಸಿ ಒಟ್ಟಾಗಿ ಕೆಲಸ ಮಾಡುವವರು ನೀವಾಗಬೇಕು.
undefined
ಭಾವನಾತ್ಮಕ ಬುದ್ಧಿವಂತಿಕೆನಿಮ್ಮ ಗೆಳೆಯರೊಂದಿಗೆ ನೀವು ಹೇಗೆ ವರ್ತಿಸುತ್ತೀರಿ ಮತ್ತು ಅವರಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ? ನೀವು ಸುಲಭವಾಗಿ ಹೊಂದಿಕೊಳ್ಳುತ್ತೀರಾ ಮತ್ತು ವೈವಿಧ್ಯಮಯ ಅಭಿಪ್ರಾಯಗಳಿಗೆ ಅವಕಾಶ ನೀಡಬಹುದೇ? ಒತ್ತಡದಲ್ಲಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಮತ್ತು ಪರಸ್ಪರ ಸಂಬಂಧಗಳನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ? ಈ ಕೌಶಲ್ಯಗಳನ್ನು ಗಮನಿಸಿ, ಕಲಿಯಿರಿ ಮತ್ತು ನಿಮ್ಮನ್ನು ನೀವು ಎತ್ತರಕ್ಕೆ ಕೊಂಡೊಯ್ಯಿರಿ.
undefined
ಜೀವನದಲ್ಲಿ ನಾವು ಯಾವಾಗಲೂ ಸವಾಲುಗಳನ್ನು ಎದುರಿಸಲೇಬೇಕು. ನಮ್ಮ ಸುತ್ತಲಿನ ಪರಿಸರ ಮತ್ತು ಅದರೊಂದಿಗೆ ಬರುವ ಸಂದರ್ಭವು ಹೆಚ್ಚಾಗಿ ನಮ್ಮ ನಿಯಂತ್ರಣಕ್ಕೆ ಮೀರಿದೆ. ಆದುದರಿಂದ ಜೀವನವು ನಮ್ಮ ಮೇಲೆ ಇರಿಸುವ ಯಾವುದೇ ಸವಾಲುಗಳನ್ನು ಎದುರಿಸಿ ಮುನ್ನುಗ್ಗಲು ನಾವು ತಯಾರಾಗಿರಬೇಕು..
undefined