ಗೌತಮ್ ಅದಾನಿ ಯಾವುದೇ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರು ತಮ್ಮ ಕಠಿಣ ಪರಿಶ್ರಮದಿಂದಲೇ ಮೇಲೆ ಬಂದು ಅದಾನಿ ಗ್ರೂಪ್ (Adani Group) ಸ್ಥಾಪಿಸಿದರು. ಅಹ್ಮದಾಬಾದಿನ ಮಧ್ಯಮ ಕುಟುಂಬಕ್ಕೆ ಸೇರಿದ ಗೌತಮ್, ಶಾಲೆಯಲ್ ಬಳಿಕ, ಕಾಮರ್ಸ್ ಪದವಿಗೆ ಸೇರಿದ್ದರು, ಆದರೆ ಯಾವುದೋ ಕಾರಣದಿಂದಾಗಿ ಪದವಿಯನ್ನು ಪೂರ್ತಿಗೊಳಿಸಲಾಗಿರಲಿಲ್ಲ. ಅವರು ಹೆಚ್ಚು ವಿದ್ಯಾವಂತರಲ್ಲ. ಇದರ ಹೊರತಾಗಿಯೂ, ಅವರು ತಮ್ಮ ಕೋಟಿ ಕೋಟಿ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.