Chanakya Niti: ಈ ಗುಣಗಳು ನಿಮಗೆ ಯಶಸ್ಸನ್ನು ತಂದು ಕೊಡುತ್ತೆ !

First Published | Sep 29, 2022, 4:40 PM IST

Chanakya Niti in Kannada: ಚಾಣಕ್ಯ ನೀತಿಯಲ್ಲಿ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಇದು ನಿಜಕ್ಕೂ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತೆ. ಚಾಣಕ್ಯನು ಉದ್ಯೋಗ ಮತ್ತು ವ್ಯವಹಾರದಲ್ಲಿನ ಪ್ರಗತಿಯ ಬಗ್ಗೆ ಕೂಡ ತನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಆಚಾರ್ಯ ಚಾಣಕ್ಯನು ಉದ್ಯೋಗ-ವ್ಯವಹಾರದಲ್ಲಿ ಯಶಸ್ವಿಯಾಗಲು ಒಬ್ಬ ವ್ಯಕ್ತಿಯಲ್ಲಿ ಯಾವ ಗುಣಗಳು ಅವಶ್ಯಕ ಎಂದು ಹೇಳಿದ್ದಾರೆ. ಇದೀಗ ನಾವು ಆ ಬಗ್ಗೆ ತಿಳಿಯೋಣ.

ಚಾಣಕ್ಯನನ್ನು ಭಾರತದ ಅತ್ಯುತ್ತಮ ವಿದ್ವಾಂಸ ಎಂದು ಪರಿಗಣಿಸಲಾಗಿದೆ. ಅವನು ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದರು ಎಂದು ಹೇಳಲಾಗುತ್ತದೆ. ಅದು ವೈವಾಹಿಕ ಜೀವನವಾಗಿರಬಹುದು ಅಥವಾ ಉದ್ಯೋಗ-ವ್ಯವಹಾರದಲ್ಲಿ (business) ಪ್ರಗತಿಯ ಮಂತ್ರವಾಗಿರಬಹುದು ಎಲ್ಲಾ ವಿಷ್ಯಗಳಲ್ಲೂ ಮಹತ್ತರ ಜ್ಞಾನ ಹೊಂದಿದ್ದರು. ಜೀವನದಲ್ಲಿ ದಾರಿ ತಪ್ಪಿದಾಗ, ಚಾಣಕ್ಯ ನೀತಿಯನ್ನು ಪಠಿಸಿದರೆ ಜೀವನ ಸರಿಯಾದ ಮಾರ್ಗದಲ್ಲಿ ನಡೆಯುತ್ತೆ. ಆಚಾರ್ಯ ಚಾಣಕ್ಯನು ಉದ್ಯೋಗ-ವ್ಯವಹಾರದಲ್ಲಿ ಯಶಸ್ವಿಯಾಗಲು ಒಬ್ಬ ವ್ಯಕ್ತಿಯಲ್ಲಿ ಯಾವ ಗುಣಗಳು ಅವಶ್ಯಕ ಎಂದು ಹೇಳಿದ್ದಾನೆ. ಅವುಗಳ ಬಗ್ಗೆ ತಿಳಿಯೋಣ.

ಗುರಿ
ಗುರಿ ನಿಗದಿಪಡಿಸಿದಾಗ ಮಾತ್ರ ಯಶಸ್ಸು )success) ಸಿಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ, ಒಬ್ಬ ವ್ಯಕ್ತಿಯು ತನ್ನ ಗುರಿ ತಿಳಿದುಕೊಳ್ಳುವುದು ಬಹಳ ಮುಖ್ಯ, ಆಗ ಮಾತ್ರ ಅವನು ಬಡ್ತಿ ಪಡೆಯುತ್ತಾನೆ. ಸರಿಯಾದ ಯೋಜನೆ ರೂಪಿಸಿದರೆ, ಆಗ ಮಾತ್ರ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತೆ. ವ್ಯವಹಾರದಲ್ಲಿ ಅಬಿವೃದ್ಧಿ ಸಾಧ್ಯವಾಗುತ್ತೆ.

Tap to resize

ಶಿಸ್ತು ಮತ್ತು ಕಠಿಣ ಪರಿಶ್ರಮ
ನೀವು ಗುರಿಯನ್ನು ಪೂರೈಸಲು ಬಯಸಿದರೆ, ಕಠಿಣ ಪರಿಶ್ರಮ (hard work) ಮತ್ತು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಚಾಣಕ್ಯನ ಪ್ರಕಾರ, ಕಠಿಣ ಪರಿಶ್ರಮದಿಂದ ಮಾತ್ರ ಒಬ್ಬ ವ್ಯಕ್ತಿಯಲ್ಲಿ ಶಿಸ್ತಿನ ಪ್ರಜ್ಞೆ ಬೆಳೆಯುತ್ತದೆ. ಗುರಿಯನ್ನು ಸಾಧಿಸಲು ಇತರರ ಮೇಲೆ ಅವಲಂಬಿತರಾಗಬೇಡಿ. 

ನಿಮ್ಮ ಬಳಿ ಎಷ್ಟೇ ಹಣ ಇದ್ದರೂ ಸಹ ನಿಮ್ಮ ಕೆಲಸವನ್ನು ನೀವು ಮಾಡಬೇಕು ಅನ್ನೋದು ಮರೆಯಬೇಡಿ. ನೀವು ನಿಮ್ಮ ಕೆಲಸವನ್ನು ಇತರರಿಗೆ ಹಸ್ತಾಂತರಿಸಿದರೆ, ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ನೀವೇ ಮಾಡಿ.

ನಿಷ್ಠೆ
ನಿಮ್ಮ ಕೆಲಸಕ್ಕೆ ನಿಷ್ಠರಾಗಿರುವುದು ಯಶಸ್ಸಿನ ಮೊದಲ ಸಂಕೇತವಾಗಿದೆ. ಕೆಲಸದಲ್ಲಿ ನಿರ್ಲಕ್ಷ್ಯ ಮಾಡೋದರಿಂದ ವ್ಯಕ್ತಿಯ ಉತ್ತಮ ಕೆಲಸಕ್ಕೂ ಹಾನಿಯಾಗಬಹುದು. ಒಬ್ಬ ವ್ಯಕ್ತಿಯು ಉದ್ಯೋಗ-ವ್ಯವಹಾರದಲ್ಲಿ ಪ್ರಾಮಾಣಿಕನಾಗಿದ್ದರೆ, ಭವಿಷ್ಯದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸಬಹುದು. ನಿರ್ಲಕ್ಷ್ಯವು ವ್ಯವಹಾರದಲ್ಲಿ ನಷ್ಟವನ್ನು ಉಂಟುಮಾಡುತ್ತದೆ ಮತ್ತು ಕೆಲಸದಲ್ಲಿರುವ ವ್ಯಕ್ತಿಯ ವರ್ಚಸ್ಸಿಗೆ ಹಾನಿ ಮಾಡಬಹುದು.

ರಿಸ್ಕ್ ತೆಗೆದುಕೊಳ್ಳಲು ಹೆದರಬೇಡಿ
ಒಬ್ಬ ವ್ಯಕ್ತಿಯು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ. ಚಾಣಕ್ಯನ ಪ್ರಕಾರ, ವ್ಯವಹಾರದಲ್ಲಿ ಲಾಭ ಮತ್ತು ನಷ್ಟದ ತಿಳುವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯ, ಇವುಗಳನ್ನು ಗಮನದಲ್ಲಿಟ್ಟುಕೊಂಡು, ಒಬ್ಬ ವ್ಯಕ್ತಿಯು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. 

ಅಲ್ಲದೇ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು (accept the challenges) ಸದಾ ಸಿದ್ಧರಿರಬೇಕು. ನಷ್ಟವಾಗಿದ್ದರೆ, ಅದರ ಮೇಲೆ ಕಣ್ಣು ಹಾಯಿಸುವ ಬದಲು, ಭವಿಷ್ಯದ ಕಾರ್ಯತಂತ್ರವನ್ನು ಸಿದ್ಧಪಡಿಸಬೇಕು. ವೈಫಲ್ಯಕ್ಕೆ ಹೆದರದೇ ಕೆಲಸ ಮಾಡುವ ವ್ಯಕ್ತಿಯು ಯಶಸ್ವಿಯಾಗುತ್ತಾನೆ, ಆದ್ದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರಬೇಡಿ.
 

Latest Videos

click me!