ವೈಜ್ಞಾನಿಕ ಪ್ರಜ್ಞೆ ಬೆಳೆಸಲು ಯುವ ಬ್ರೇಗೇಡ್‌ನಿಂದ ಸ್ಪಾರ್ಕ್ ಯೋಜನೆ

First Published | Oct 15, 2020, 9:48 PM IST

ಕೊರೋನಾ ಏನನ್ನು ನುಂಗಿದೆಯೋ ಗೊತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನಂತೂ ನುಂಗುತ್ತಿದೆ. ಇದರ ಮಧ್ಯೆ ಯುವಾಬ್ರಿಗೇಡ್ ಚಾಮರಾಜನಗರದ ದೀನಬಂಧು ಟ್ರಸ್ಟ್‌ನ ಸಹಯೋಗದೊಂದಿಗೆ spark ಎನ್ನುವ ಯೋಜನೆಯನ್ನು ಇಂದಿನಿಂದ ಆರಂಭಿಸಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಯಡ್ಯೂರಪ್ಪನವರು ಉದ್ಘಾಟಿಸಿದರು.

ಭಾರತ ಕಂಡ ಅದ್ಬುತ ವ್ಯಕ್ತಿ, ಭಾರತ ರತ್ನ ಮಾಜಿ ಪ್ರಧಾನಿ, ವಿಜ್ಞಾನಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್‌ ಚಾಮರಾಜನಗರ‌ದ ದೀನಬಂಧು ಟ್ರಸ್ಟ್ ಸಹಯೋಗದಲ್ಲಿ ಆರಂಭಿಸಿದ ಸಂಚಾರಿ ಸ್ಪಾರ್ಕ್ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಮಕ್ಕಳಲ್ಲಿ ವೈಜ್ಞಾನಿಕ ತಿಳುವಳಿ ಅತಿ ಮುಖ್ಯ. ಇಂತಹ ವಿಜ್ಞಾನ ಸಂಬಂಧಿತ ದೃಷ್ಟಿಕೋನದ ಬೆಳವಣಿಗೆಗೆ ಪೂರಕವಾಗುವಂತೆ ಈ ಯೋಜನೆಗೆ ಚಾಲನೆ ನೀಡಲಾಗಿದೆ‌. ಕಲಾಂ ಅವರ ಜನ್ಮದಿನ‌ದಂದೇ ಈ ಯೋಜನೆಯನ್ನು ಆರಂಭ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ.
Tap to resize

ಈ ಯೋಜನೆಯ ಮೂಲಕ ವಿಜ್ಞಾನ‌ದ ಉಪಕರಣಗಳೊಂದಿಗೆ ಸ್ಥಳದಲ್ಲೇ ಪ್ರಯೋಗಗಳನ್ನು ಮಾಡಿ, ಅವರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಯುವಂತೆ ಮಾಡಲು ಯುವ ಬ್ರಿಗೇಡ್ ಸ್ಪಾರ್ಕ್ ಯೋಜನೆ ಆರಂಭಿಸಿದೆ.
ಕೊರೋನಾ ಸಂಕಷ್ಟ‌ದ ಅವಧಿಯಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ಹೆಚ್ಚಾಗುವಂತೆ ಮಾಡಲು ಸ್ಪಾರ್ಕ್ ಆರಂಭ ಮಾಡಲಾಗಿದೆ.
ಈ ಯೋಜನೆಯಂತೆ ದ್ವಿಚಕ್ರ ಸವಾರನೊಬ್ಬ ತನ್ನೊಂದಿಗೆ 40 ಕ್ಕೂ ಅಧಿಕ ವಿಜ್ಞಾನ ಪ್ರಯೋಗಗಳನ್ನು ನಡೆಸಲು ಬೇಕಾದ ಸಾಮಗ್ರಿಗಳನ್ನು ಹೊತ್ತುಕೊಂಡು ಹಳ್ಳಿ ಹಳ್ಳಿಗೆ ತೆರಳಿ ಅಲ್ಲಿ ನಾಲ್ಕಾರು ಮಕ್ಕಳನ್ನು ಒಗ್ಗೂಡಿಸಿ ಅವರಿಗೆ ಈ ಪ್ರಯೋಗಗಳನ್ನು ಮಾಡಿ ತೋರಿಸಲು ಅನುಕೂಲವಾಗುವಂತೆ ಈ ಯೋಜನೆ ಇದೆ. ಮಕ್ಕಳಲ್ಲಿ ಗಣಿತ ಮತ್ತು ವಿಜ್ಞಾನ ಸಾಧನೆಗಳ ಪರಿಚಯವನ್ನು ಮಾಡುವ ಪುಟ್ಟ ಪ್ರದರ್ಶನ ಸಹ ಸಂಚಾರಿ ಸ್ಪಾರ್ಕ್‌ನ ಅಂಗವಾಗಿದೆ.
ಯುವಾ ಬ್ರಿಗೇಡ್ ಸಂಸ್ಥೆಯ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತಿರಿದ್ದರು

Latest Videos

click me!