Ankola: ಶಾಲಾ ಚಾವಣಿ ಪದರ ಕುಸಿದು 5 ಮಕ್ಕಳಿಗೆ ಗಾಯ

First Published | Mar 10, 2022, 10:46 AM IST

ಅಂಕೋಲಾ(ಮಾ.10):  ಪ್ರಾಥಮಿಕ ಶಾಲೆಯ ವರ್ಗ ಕೊಠಡಿಯೊಂದರ ಚಾವಣಿ ಮೇಲ್ಪದರ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬುಧವಾರ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ನಿರ್ಮಲ ಹೃದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Government School) ನಡೆದಿದೆ. 
 

ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಸಫಲ್ ಡಿ ಚಿಂಚಣಕರ, ಅಮೋಘ ನಾಯ್ಕ ಸುಹಾನಿ ಶೇಡಗೇರಿ, ಸೃಷ್ಟಿ ಎಸ್ ನಾಯ್ಕ ಹಾಗೂ ಒಂದನೇ ತರಗತಿಯ ವಿದ್ಯಾರ್ಥಿ ಸದ್ವಿನ್ ಡಿ ಚಿಂಚರಕರ ಗಾಯಗೊಂಡವರು.

ನಾಲ್ಕನೇ ತರಗತಿಯ ವರ್ಗಕೋಣೆಯಲ್ಲಿ 68 ವಿದ್ಯಾರ್ಥಿಗಳಿದ್ದು(Students), ಮದ್ಯಾಹ್ನ(Food) ಊಟದ ಸಮಯವಾಗಿದ್ದರಿಂದ 16 ವಿದ್ಯಾರ್ಥಿಗಳು ಮಾತ್ರ ವರ್ಗಕೋಣೆಯಲ್ಲಿ ಊಟ ಮಾಡುತ್ತಿದ್ದರು. ಊಟ ಮಾಡುತ್ತಿರುವ ವೇಳೆ ಮೇಲ್ಪದರ ಕುಸಿದು, ಕಾಂಕ್ರೀಟ್ ಚೂರುಗಳು ಆಸುಪಾಸಿನಲ್ಲಿದ್ದ ವಿದ್ಯಾರ್ಥಿಗಳ ತಲೆಗೆ ಮತ್ತು ಬೆನ್ನಿಗೆ ಬಡಿದಿವೆ. ಮೇಲ್ಪದರ ಕುಸಿದ ಪರಿಣಾಮ ವರ್ಗಕೋಣೆಯ ಬೆಂಚುಗಳು ಮುರಿದು ಬಿದ್ದಿವೆ.

Tap to resize

ವಿದ್ಯಾರ್ಥಿಗಳು ಮೇಲ್ಪದರ ಕುಸಿದ ಜಾಗದಿಂದ ಸ್ವಲ್ಪ ದೂರದಲ್ಲಿ ಕುಳಿತ ಪರಿಣಾಮ ಹೆಚ್ಚಿನ ಅವಘಡ ಸಂಭವಿಸುವುದು ತಪ್ಪಿದೆ. ವಿದ್ಯಾರ್ಥಿಗಳಾದ ಸಫಲ ಚಿಂಚಣಕರ ಹಾಗೂ ಸೃಷ್ಟಿ ನಾಯ್ಕ ಅವರಿಗೆ ಗಂಭೀರವಾಗಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕಾರವಾರ ವೈದ್ಯಕೀಯ ಆಸ್ಪತ್ರೆಗೆ(Karwar Medial College) ಹೆಚ್ಚಿನ ಚಿಕಿತ್ಸೆಗೆ(Treatment) ಸಾಗಿಸಲಾಗಿದೆ.

ತಹಶೀಲ್ದಾರ್ ಉದಯ ಕುಂಬಾರ, ಇ.ಒ ಪರಶುರಾಮ ಸಾವಂತ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಪಿಎಸೈ ಪ್ರವೀಣಕುಮಾರ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಯ ಕಟ್ಟಡ 30 ವರ್ಷಗಳಿಗಿಂತ ಹಳೆಯದಾಗಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯ ಘಟನೆಗೆ ಕಾರಣ ಎಂದು ಪಾಲಕರು(Parents) ದೂರಿದ್ದಾರೆ. ಸುತ್ತಲೂ ಬಿರುಕುಗಳು ಇದ್ದರೂ ಅಧಿಕಾರಿಗಳು ತರಗತಿ ನಡೆಸಲು ಹೇಗೆ ಅನುಮತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಘಟನೆಯು ನಡೆಯಿತು.

ವರ್ಗಕೋಣೆ ವೀಕ್ಷಿಸಿದ ತಹಶೀಲ್ದಾರ್ ಉದಯ ಕುಂಬಾರ, 'ಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ನೀಡಿ. ಮುಂಜಾಗ್ರತಾ ಕ್ರಮ ಕೈಗೊಂಡ ಬಗ್ಗೆ ವಿವರ ಒದಗಿಸುವಂತೆ ಆದೇಶಿಸಿ' ಎಂದು ಶಿಕ್ಷಣ ಇಲಾಖೆಯ(Department of Education) ಅಧಿಕಾರಿಗಳಿಗೆ ಸೂಚಿಸಿದರು.

ಘಟನೆ ನಡೆಯುತ್ತಿದ್ದಂತೆ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ದೌಡಾಯಿಸಿ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋದರು. ಘಟನೆಯಿಂದ ಹೆದರಿದ ಕೆಲವು ವಿದ್ಯಾರ್ಥಿಗಳು ಅಳುತ್ತಿದ್ದರೆ ಅವರೊಂದಿಗೆ ಪಾಲಕರು ಅಳುತ್ತಿರುವ ದೃಶ್ಯ ಕಂಡುಬಂತು.

Latest Videos

click me!