ಸೌಧಕ್ಕೆ ಹೊರಟ ಸುರೇಶ್ ಕುಮಾರ್ ತಡೆದು ನಿಲ್ಲಿಸಿದ ಯಂಗ್ ಫ್ರೆಂಡ್!

First Published | Jun 4, 2020, 9:30 PM IST

ಬೆಂಗಳೂರು(ಜೂ. 04) ಶಾಲೆ ಯಾವಾಗಿನಿಂದ ಆರಂಭ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಸದ್ಯಕ್ಕಿಲ್ಲ ಸಚಿವ ಸುರೇಶ್ ಕುಮಾರ್ ಉತ್ತರ. ಗುರುವಾರ ವಿಧಾನಸೌಧಕ್ಕೆ ಹೊರಟ ಸುರೇಶ್ ಕುಮಾರ್ ಅವರಿಗೆ ಬಾಲಕಿಯೊಬ್ಬಳು ಎದುರಾದಳು. ಬಾಲಕಿ ಮತ್ತು ಸುರೇಶ್ ಕುಮಾರ್ ನಡುವಿನ ಸಂಭಾಷಣೆಯನ್ನು ಸಚಿವರ ಮಾತಿನಲ್ಲಿಯೇ ಕೇಳಿ

ವಿಧಾನಸೌಧಕ್ಕೆ ಹೊರಟಿದ್ದೆ. ಈ young friend ಬಂದು ನನ್ನೆದುರು ನಿಂತಳು.
ನಿಮ್ಮನ್ನು ಟಿವಿ ಯಲ್ಲಿ ನೋಡಿದ್ದೇನೆ" ಎಂದಳು ಮಹನ್ಯಾ ಎಂಬ ಈ ಬಾಲೆ.
Tap to resize

ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ" ಎಂದು ಕೇಳಿದಳು.
'ಯಾವಾಗ ಶುರು ಮಾಡಬೇಕು?" ಎಂಬ ನನ್ನ ಪ್ರಶ್ನೆಗೆ "ಕೊರೋನಾ ಹೋದ ಮೇಲೆ" ಎಂದಳು First Std ಓದುತ್ತಿರುವ ಈ ಚಿನ್ನಾರಿ.
ತುಂಬಾ ದಿನ ಕೊರೋನಾ ಹೋಗದಿದ್ದರೆ" ಎಂದು ನಾನು ಪ್ರಶ್ನಿಸಿದ್ದಕ್ಕೆ "ಇಲ್ಲ. ಕೊರೋನಾ ಹೋದ ಮೇಲೇ ಓಪನ್ ಮಾಡಿ" ಎಂದಳಾ ಪೋರಿ.
"ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ" ಎಂಬ ನನ್ನ ಪ್ರಶ್ನೆಗೆ "ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ" ಎಂದು ಬೀಗುತ್ತಾ ನುಡಿದಳು ಮಹನ್ಯಾ.
ಇವೆಲ್ಲವನ್ನೂ ವಿಡಿಯೋ ಮಾಡಿಕೊಳ್ಳುತ್ತಿದ್ದದ್ದು ದೂರದಲ್ಲಿ ನಿಂತಿದ್ದ ಅವರಮ್ಮ.

Latest Videos

click me!