ಸೈನ್ಸ್ ಡೈರೆಕ್ಟ್ ವೆಬ್‌ಸೈಟ್ ಪ್ರಕಾರ, ಮೂರು ಚಕ್ರವುಳ್ಳ ಆಟೋ ರಿಕ್ಷಾ ನಿರ್ಮಾಣ ಮತ್ತು ನಿರ್ವಹಣಾ ವೆಚ್ಚ ಕಡಿಮೆಯಾಗಿರುತ್ತದೆ. ಹೆಚ್ಚು ಸಮತೋಲಿತವಾಗಿರುವ ಕಾರಣ ಇವುಗಳನ್ನು ಓಡಿಸೋದು ಸಹ ಸುಲಭವಾಗಿದೆ. ಮೂರು ಚಕ್ರದ ಆಟೋಗಳು ಹಗುರವಾಗಿದ್ದು, ಕಿರಿದಾದ ರಸ್ತೆಗಳಲ್ಲಿಯೂ ಹೋಗುತ್ತವೆ. ಇಂಜಿನ್ ಹಗುರವಾಗಿರೋದರಿಂದ ಕಡಿಮೆ ಇಂಧನವನ್ನು ಬಳಸುತ್ತವೆ.