
ಇಂದು ಶುಕ್ರವಾರ 22ನೇ ಮೇ 2026 ಆಗಿದ್ದು, ಷಷ್ಠಿ ತಿಥಿ ಬೆಳಿಗ್ಗೆ 6:24 ರವರೆಗೆ ಇರುತ್ತದೆ. ಸಪ್ತಮಿ ತಿಥಿ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 5:04 ರವರೆಗೆ ಇರಲಿದೆ. ವಿಶೇಷ ಗ್ರಹ ಸ್ಥಾನವು ಇಂದು ಬೆಳಗ್ಗೆ 8:19 ರವರೆಗೆ ವೃದ್ಧಿ ಯೋಗವನ್ನು ಸೃಷ್ಟಿಸೋದರಿಂದ ಕೆಲ ರಾಶಿಯವರಿಗೆ ಪೂರ್ವಜರ ಆಸ್ತಿ ಲಭಿಸುವ ಸಾಧ್ಯತೆಗಳಿವೆ. ಇಂದಿನ ರಾಶಿಗಳ ಭವಿಷ್ಯದ ಮಾಹಿತಿ ಇಲ್ಲಿದೆ.
ಇಂದು ಸೃಜನಶೀಲತೆಯ ಗೆಳೆಯರನ್ನು ಭೇಟಿಯಾಗುವ ಸಮಯ ಬರುತ್ತದೆ. ಕಲ್ಲಿದ್ದಲು ಮತ್ತು ಸುಣ್ಣದ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಇಂದು ಇತರರಿಗಿಂತ ಹೆಚ್ಚು ಅಲರ್ಟ್ ಅಗಿರಬೇಕು. ಇಲ್ಲವಾದ್ರೆ ನಿಮ್ಮ ಸ್ಪರ್ಧಿಗಳು ನಿಮ್ಮನ್ನು ಹಿಂದೆ ಹಾಕಬಹುದು.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 9
ಇಂದು ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ಜನರು ನಿಮ್ಮನ್ನು ಗುರುತಿಸುತ್ತಾರೆ. ಸೂರ್ಯನಾಮ ಜಪ ಮಾಡಿ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 2
ಇಂದು ನೀವು ಮಾನಸಿಕವಾಗಿ ಬಲಶಾಲಿ, ಉತ್ತಮ ಮತ್ತು ಆತ್ಮವಿಶ್ವಾಸದಿಂದ ಕೆಲಸಗಳನ್ನು ಮಾಡುತ್ತೀರಿ. ಅವಕಾಶಗಳು ಬರಲಿದ್ದು, ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ತಜ್ಞರ ಸಲಹೆ ಪಡೆದುಕೊಂಡು ಹೂಡಿಕೆ ಮಾಡಿ. ಇದರಿಂದ ಲಾಭ ಹೆಚ್ಚಾಗುತ್ತದೆ. ಕುಟುಂಬದಲ್ಲಿ ನಡೆಯುತ್ತಿರೋಈ ಬೆಳವಣಿಗ ಬಗ್ಗೆ ಗಮನ ನೀಡೋದನ್ನು ಮರೆಯಬೇಡಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 5
ನೀವು ಬಯಸಿದ ಪ್ರೀತಿ ನಿಮ್ಮದಾಗುತ್ತದೆ. ಮನೆಯಲ್ಲಿ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತೀರಿ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಒಲಿದು ಬರಲಿವೆ. ಪ್ರೇಮ ಸಂಬಂಧದ ಕುರಿತು ಕುಟುಂಬಸ್ಥರೊಂದಿಗೆ ಚರ್ಚೆ ಮಾಡಿ.ಹಣಕಾಸಿನ ವಹಿವಾಟುಗಳಲ್ಲಿ ವಿಶೇಷವಾಗಿ ಜಾಗರೂಕರಾಗಿರಿ. ನಾಳೆ ದೈಹಿಕವಾಗಿ ಗಾಯಗೊಳ್ಳುವ ಸಾಧ್ಯತೆಯಿದೆ.
ಅದೃಷ್ಟ ಬಣ್ಣ: ಹಾಲಿನ ಬಿಳಿ ಬಣ್ಣ
ಅದೃಷ್ಟ ಸಂಖ್ಯೆ: 7
ಹಾರ್ಡ್‌ವರ್ಕ್‌ನಿಂದ ನಿಮ್ಮ ಕುಟುಂಬದ ಸದಸ್ಯರ ಬೇಡಿಕೆಗಳನ್ನು ಈಡೇರಿಸುತ್ತೀರಿ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಅದ್ಭುತ ಮತ್ತು ಪ್ರಗತಿಪರ ದಿನವಾಗಿರುತ್ತದೆ. ಮನಸ್ಸಿನಲ್ಲಿ ತಳಮಳ ಉಂಟಾಗುತ್ತಿದ್ರೆ, ಹಿಟ್ಟಿನಿಂದ ಮಾಡಿದ ಉಂಡೆಗಳನ್ನು ಮೀನುಗಳಿಗೆ ಆಹಾರವಾಗಿ ನೀಡಿ. ಇದರಿಂದ ಇಡೀ ದಿನ ನೆಮ್ಮದಿಯಾಗಿರುತ್ತದೆ. ಪೋಷಕರ ಆರೋಗ್ಯದ ಬಗ್ಗೆ ಮುತುವರ್ಜಿ ತೆಗೆದುಕೊಳ್ಳಿ.
ಅದೃಷ್ಟ ಬಣ್ಣ: ಚಿನ್ನ
ಅದೃಷ್ಟ ಸಂಖ್ಯೆ: 1
ಬಿಡುವಿಲ್ಲದೇ ಕೆಲಸ ಮಾಡುವ ಈ ರಾಶಿಯವರಿಗೆ ಇಂದು ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಕಚೇರಿಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ, ತಾಳ್ಮೆ ಕಾಪಾಡಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಸರಿಯಾಗಿ ಮಾತನಾಡಿದ ನಂತ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ.
ಅದೃಷ್ಟ ಬಣ್ಣ: ಗಾಢ ಹಸಿರು
ಅದೃಷ್ಟ ಸಂಖ್ಯೆ: 6
ಇಂದು ಈ ರಾಶಿಯ ಜನರಿಗೆ ಎಲ್ಲಾ ವಲಯದಲ್ಲಿಯೂ ಯಶಸ್ಸು ಸಿಗಲಿದೆ. ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ, ಸಂಬಳ ಏರಿಕೆಯಂತಹ ಸುದ್ದಿಗಳನ್ನು ಕೇಳುತ್ತೀರಿ. ದೀರ್ಘ ಸಮಯದ ಒತ್ತಡಗಳು ನಿವಾರಣೆಯಾಗುತ್ತದೆ. ಹಾಗೆಯೇ ಪೂರ್ವಜರ ಆಸ್ತಿ ವ್ಯಾಜ್ಯಗಳು ನಿವಾರಣೆಯಾಗಿ ಗೆಲುವು ನಿಮ್ಮದಾಗಲಿದೆ.
ಅದೃಷ್ಟ ಸಂಖ್ಯೆ: ತಿಳಿ ನೀಲಿ
ಅದೃಷ್ಟ ಸಂಖ್ಯೆ: 8
ಇಂದು ನಿಮಗೆ ಮಿಶ್ರ ದಿನವಾಗಿದ್ದು, ಮಾಡುವ ಎಲ್ಲಾ ಕೆಲಸ ಮತ್ತು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದಿರಿ. ಸಂಗಾತಿ ಅಥವಾ ಕುಟುಂಬದ ಹಿರಿಯರ ಸಲಹೆಗಳನ್ನು ಪರಿಗಣಿಸಿ. ಸಹೋದ್ಯೋಗಿಗಳ ಜೊತೆ ಕಿರಿಕಿರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಮನೆಯಿಂದ ಹೊರಗೆ ಹೋಗುವ ಮೊದಲು, ನಿಮ್ಮ ಹೆತ್ತವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ. ಇದರಿಂದ ಕೆಲಸದಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.
ಅದೃಷ್ಟ ಬಣ್ಣ: ಕೆಂಗಂದು
ಅದೃಷ್ಟ ಸಂಖ್ಯೆ: 3
ಬುದ್ಧಿವಂತಿಕೆಯಿಂದ ಉತ್ತಮ ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆದ್ರೆ ಹಠಾತ್ ವೆಚ್ಚಗಳಿಂದ ಹಣ ಉಳಿತಾಯ ಮಾಡಲು ಕಷ್ಟವಾಗಬಹುದು. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದು, ಆಪ್ತರಿಂದ ಬೆಂಬಲ ಮತ್ತು ಮಾನಸಿಕ ಸ್ಥೈರ್ಯ ಸಿಗಲಿದೆ. ಹೊಸ ವಿಷಯಗಳ ಬಗ್ಗೆ ಜ್ಞಾನ ಸಿಗಲಿದ್ದು, ಸಹೋದ್ಯೋಗಿಗಳಿಂದ ಕಲಹ ಮಾಡಿಕೊಳ್ಳಿ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 4
ಯಶಸ್ಸಿಗೆ ಇಂದು ತುಂಬಾ ಶ್ರಮಿಸಬೇಕಾಗುತ್ತದೆ. ಗೆಲುವಿಗಾಗಿ ಪ್ರತಿಯೊಂದು ವಿಷಯದಲ್ಲಿಯೂ ಗಮನ ಹರಿಸಿ ಕೆಲಸ ಮಾಡಿ. ಸಮಾಜದಲ್ಲಿ ಗೌರವ, ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಯಿಲ್ಲದೇ ನಡೆಯಲಿವೆ. ಕಿರಿಯರೊಂದಿಗೆ ವಾದಗಳು ಮತ್ತು ಭಿನ್ನಾಭಿಪ್ರಾಯಗಳ ಸಾಧ್ಯತೆ ಇದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ.
ಅದೃಷ್ಟ ಬಣ್ಣ: ಕಪ್ಪು
ಅದೃಷ್ಟ ಸಂಖ್ಯೆ: 10
ಇಂದು ಕುಂಭ ರಾಶಿಯವರಿಗೆ ಸಂಪೂರ್ಣವಾಗಿ ಅನುಕೂಲಕರ ಮತ್ತು ಸಕಾರಾತ್ಮಕವಾಗಲಿದೆ.ಹೊಸ ವ್ಯವಹಾರ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ವೃತ್ತಿಜೀವನದಲ್ಲಿ ನಿಮಗೆ ಅನೇಕ ಶುಭ ಅವಕಾಶಗಳು ಸಿಗುತ್ತವೆ. ಅನಗತ್ಯ ಜಗಳ, ಗಾಸಿಪ್‌ಗಳಿಂದ ಅಂತರ ಕಾಯ್ದುಕೊಂಡ ಕೆಲಸದತ್ತ ಗಮನ ನೀಡಿ
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 11
ಅನೇಕ ಹೊಸ ಮತ್ತು ಅತ್ಯುತ್ತಮ ವಿಚಾರಗಳು ನಿಮಗೆ ತಿಳಿಯಲಿವೆ. ಯಾವುದೇ ಹೊಸ ಕೆಲಸಗಳು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ ಮತ್ತು ಲಾಭವನ್ನು ನೀಡುತ್ತವೆ. ಸಹೋದ್ಯೋಗಿಗಳು ನಿಮ್ಮ ಕೆಲಸದ ಶೈಲಿಗೆ ಅತೃಪ್ತರಾಗಬಹುದು. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.
ಅದೃಷ್ಟ ಬಣ್ಣ: ಕೇಸರಿ
ಅದೃಷ್ಟ ಸಂಖ್ಯೆ: 12