ಬೆಡ್‌ರೂಂಗೆ ಹೋದವಳು ಬಾಗಿಲು ತೆಗೆಯಲೇ ಇಲ್ಲ; ಮದುವೆ ದಿನವೇ ನವವಧು ಜೀವನ ಅಂತ್ಯ! ಆಗಿದ್ದೇನು?

Published : Feb 02, 2025, 01:08 PM ISTUpdated : Feb 02, 2025, 01:14 PM IST

ಮದುವೆ ಬಳಿಕ ತವರು ಮನೆಗೆ ಬಂದ ನವವಧು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಲನಾಡಿನ ಆಂಡಿಪಟ್ಟಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿಯೋಣ.

PREV
14
ಬೆಡ್‌ರೂಂಗೆ ಹೋದವಳು ಬಾಗಿಲು ತೆಗೆಯಲೇ ಇಲ್ಲ; ಮದುವೆ ದಿನವೇ ನವವಧು ಜೀವನ ಅಂತ್ಯ! ಆಗಿದ್ದೇನು?
ಮದುವೆ ಆದ ಕೂಡ್ಲೇ ನವ ವಧು ಆತ್ಮಹತ್ಯೆ!

ತೇಣಿ ಜಿಲ್ಲೆ ಆಂಡಿಪಟ್ಟಿ ಹತ್ತಿರದ ಕದಿರ್‌ನರಸಿಂಗಪುರದವರು ಪರಮೇಶ್ವರನ್ (56). ಸರ್ಕಾರಿ ಬಸ್ಸಿನಲ್ಲಿ ಚಾಲಕರಾಗಿದ್ದಾರೆ.ಇವರ ಮಗಳು ಸೌಮ್ಯಾ (24). ಪೆರಿಯಕುಳಂ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾಳೆ. ಕಂಬಂ ಪುದುಪಟ್ಟಿಯ ರವಿಚಂದ್ರನ್ ಮಗ ಪಾಲಾಜಿ (27) ಜೊತೆ ಸೌಮ್ಯಾಳ ಮದುವೆ ನಿಶ್ಚಯ ಆಗಿತ್ತಂತೆ.

 

24
ಮದುವೆ

ಮದುವೆ ತಯಾರಿ ಜೋರಾಗಿ ನಡೀತಿತ್ತು. ಆದ್ರೆ ಸೌಮ್ಯಾಗೆ ಈ ಮದುವೆಯಲ್ಲಿ ಇಷ್ಟ ಇರಲಿಲ್ಲವಂತೆ ಅದ್ಯಾಗೂ ಪೋಷಕರು ಜನವರಿ 31 ರಂದು ಕಂಬಂನಲ್ಲಿರುವ ಖಾಸಗಿ ಮದುವೆ ಮಂಟಪದಲ್ಲಿ ಮಗಳಿಗೆ ಮದುವೆ ಮಾಡಿದ್ದಾರೆ.

34
ಆತ್ಮಹತ್ಯೆ

ಮದುವೆ ಮನೆಯವರು ವಧುವನ್ನು ಕದಿರ್‌ನರಸಿಂಗಪುರಕ್ಕೆ ಕರೆದುಕೊಂಡು ಹೋದರು. ಮನೆಗೆ ಬಂದ ಸೌಮ್ಯಾ ಬಾತ್ರೂಮ್‌ಗೆ ಹೋಗಬೇಕು ಅಂದ್ರಂತೆ. ಬೆಡ್‌ರೂಮ್‌ಗೆ ಹೋದ ಸೌಮ್ಯಾ ಬಾಗಿಲು ಹಾಕಿಕೊಂಡ್ಳು. ಬಾಗಿಲು ತೆಗೆಯದಿದ್ದಾಗ ಮನೆಯವರು ಬಾಗಿಲು ಒಡೆದು ನೋಡಿದಾಗ ಸೌಮ್ಯಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ.

44
ಪೊಲೀಸ್ ತನಿಖೆ

ಪೊಲೀಸರಿಗೆ ವಿಷಯ ತಿಳಿಸಲಾಯ್ತು. ಸೌಮ್ಯಾಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯ್ತು. ಪೊಲೀಸರು ತನಿಖೆ ಮಾಡ್ತಿದ್ದಾರೆ. ತನಿಖೆ ವೇಳೆ ತಿಳಿದುಬಂದಿದ್ದು ಏನೆಂದರೆ ಸೌಮ್ಯಾಗೆ ಮದುವೆ ಇಷ್ಟ ಇರಲಿಲ್ಲ, ಆಕೆ ಕನ್ಯಾಸ್ತ್ರೀ ಆಗಿ ಉಳಿಬೇಕು ಅಂದುಕೊಂಡಿದ್ದಳಂತೆ. ಅಂದರೆ ಮದುವೆಯಾಗದೇ ಜೀವನ ಕಳೆಯಬೇಕು ಎಂಬ ಆಸೆ ಇತ್ತಂತೆ ಆದರೆ ಪೋಷಕರು ಮದುವೆ ಮಾಡಿದ ಕಾರಣ ಬೇಸರಗೊಂಡು ಜೀವಕ್ಕೆ ಅಂತ್ಯ ತಂದುಕೊಂಡಿದ್ದಾಳೆಂದು ಹೇಳಲಾಗಿದೆ. ಆದ್ಯಾಗೂ ಪೊಲೀಸರು ಆತ್ಮಹತ್ಯೆಯ ನಿಖರ ಕಾರಣವೇನು ಎಂದು ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

click me!

Recommended Stories