5 ದುಷ್ಕರ್ಮಿಗಳ ತಂಡದ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿಹೋದ ಪ್ರಕಾಶ್ ನಿಡಗುಂದಿ ಕುಟುಂಬ. ಪತಿ ಇಲ್ಲದ ವೇಳೆ ಮನೆಗೆ ನುಗ್ಗಿರುವ ಆಗಂತುಕರು. ಏಕಾಏಕಿ ಸಿನಿಮೀಯ ರೀತಿಯಲ್ಲಿ ಮನೆಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಜೀಪಿಗೂ ಬೆಂಕಿ ಇಟ್ಟ ದುಷ್ಕರ್ಮಿಗಳು.
ಹಾಡುಹಗಲೇ ಐದು ಜನ ಮನೆಗೆ ನುಗ್ಗಿರುವ ಗೂಂಡಾಗಳು. ಮನೆಯಲ್ಲಿ ಪತಿ ಇಲ್ಲದ್ದು ಗಮನಿಸಿಯೇ ದಾಳಿ ನಡೆಸಿರುವ ಸಾಧ್ಯತೆ. ಏಕಾಏಕಿ ನಡೆದ ದಾಳಿಗೆ ಮನೆಯೊಳಗಿದ್ದ ವಸ್ತುಗಳನ್ನ ಒಡೆದುಹಾಕಿ ಮಹಿಳೆಗೆ ಎಚ್ಚರಿಕೆ ನೀಡಿ ಅಲ್ಲಿಂದ ಪರಾರಿಯಾಗಿರುವ ದುಷ್ಕರ್ಮಿಗಳು ವಿಡಿಯೋದಲ್ಲಿ ದೃಶ್ಯ ದಾಖಲಾಗಿದೆ.
ಇಟ್ಟಿಗೆಯಿಂದ ಮನೆಯೊಗಿದ್ದ ಟಿವಿ, ಫ್ರಿಡ್ಜ್ ಒಡೆದುಹಾಕಿದ ದುಷ್ಕರ್ಮಿಗಳು. ಇದನ್ನ ಪ್ರಶ್ನಿಸಿದ ಪ್ರಕಾಶ್ ನಿಡಗುಂದಿ ಪತ್ನಿ ಮೇಲೆಯೂ ದಾಳಿ ನಡೆಸಿರುವ ದುಷ್ಕರ್ಮಿಗಳು, ಸೀರೆ ಎಳೆದು ಅಸಭ್ಯವಾಗಿ ವರ್ತಿಸಿದ್ದಾರೆ. ದುಷ್ಕರ್ಮಿಗಳ ದಾಳಿಗೆ ಕಣ್ಣೀರು ಹಾಕಿದ ಮಹಿಳೆ.
ಹುಯಿಲಗೋಳ ಗ್ರಾಮ ಪಂಚಾಯತಿ ಸದಸ್ಯ ಮಿಲಿಂದ್ ಕಾಳೆ, ನಾಗರಾಜ್ ಕಾಳೆ ಕುಮ್ಮಕ್ಕಿನಿಂದಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಮ್ಮ ಜೀವಕ್ಕೆ ಏನಾದರೂ ಆಪಾಯ ಆದರೆ ಹುಯಿಲಗೋಳ ಗ್ರಾಪಂ ಸದಸ್ಯ ಮಿಲಿಂದ ಕಾಳೆ ಹೊಣೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗದಗ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.