ಮಾಜಿ ಸಿಎಂ ಪಟೇಲರ ಸಂಬಂಧಿ,  ಇಂಜಿನಿಯರಿಂಗ್ ಸ್ಟೂಡೆಂಟ್ ಬಲಿಪಡೆದ ಟಿಪ್ಪರ್..ಕಣ್ಣೀರ ಕತೆಗಳು

First Published | Jan 15, 2021, 6:57 PM IST

ದಾವಣಗೆರೆ(ಜ. 15)  ಬಾಲ್ಯದ ಗೆಳತಿಯರೆಲ್ಲರೂ ಒಟ್ಟಾಗಿ ಸಮಯ ಕಳೆಯಬೇಕು ಎಂದು ಹೊರಟಿದ್ದರು. ಆದರೆ ಘೋರ ವಿಧಿ ಅವರನ್ನೆಲ್ಲ ಬಲಿ ಪಡೆದಿತ್ತು. ಧಾರವಾಡದ ಭೀಕರ ರಸ್ತೆ ಅಪಘಾತದ ಕಣ್ಣೀರಿನ ಕತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. 

ಮಾಜಿ ಸಿಎಂ ಜೆಎಚ್ ಪಟೇಲರದ ದೂರದ ಸಂಬಂಧಿ ಪರಂಜ್ಯೋತಿ ಶಶಿಧರ್( ಗೃಹಿಣಿ)ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಇಂಜನೀಯರಿಂಗ್ ಸ್ಟುಡೆಂಟ್ ಯಶ್ಮೀತಾ ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
Tap to resize

ಹೇಮಲತಾ ಮಾನಸಿ( ಯಶ್ಮೀತಾ ತಾಯಿ) ಅವರ ಜೀವನವೂ ಕೊನೆಯಾಗಿದೆ.
ಬಿಸಿಎ ಮುಗಿದಿ ಎಂ ಸಿ ಎ ಅಡ್ಮಿಶನ್ ಆಗಿದ್ದು ಹೊಸ ಈದಿನ ಕನಸು ಕಂಡಿದ್ದ ಕ್ಷೀರಾ ಸುರೇಶ್ ( 23) ಯಮರೂಪಿ ಟಿಪ್ಪರ್ ಗೆ ಬಲಿಯಾಗಿದ್ದಾರೆ.
ಲ್ಯೂಬ್ರಿಕೇಶನ್ ಶಾಪ್ ಆಯಿಲ್ ಬಿಸನಸ್ ಮತ್ತು ಸೇಮೆಎಣ್ಣೆ ಬಂಕ್ ಮಾಲೀಕರಾಗಿದ್ದ ದಾವಣಗೆರೆಮಂಜುಳಾ ನಟೇಶ್ ದಾರುಣ ಸಾವು ಕಂಡಿದ್ದಾರೆ.
ಪೆಪ್ಸಿ ಡೀಲರ್ ಶಿವಕುಮಾರ್ ಪತ್ನಿ ರಾಜೇಶ್ವರಿ ಶಿವಕುಮಾರ್ (ಗೃಹಿಣಿ ) ಸಹ ಅಪಘಾತಕ್ಕೆ ಬಲಿಯಾಗಿದ್ದಾರೆ.
ಘೋರ ಅಪಘಾತಕ್ಕೆ ಹನ್ನೊಂದು ಜನರು ಬಲಿಯಾಗಿದ್ದಾರೆ.
ವರ್ಷಿತಾ ವಿರೇಶ (46) ಮಂಜುಳಾ ನಟೇಶ್ (47) ರಾಜೇಶ್ವರಿ ಶಿವಕುಮಾರ (40) ವೀಣಾ ಪ್ರಕಾಶ (47) ಮಲ್ಲಿಕಾರ್ಜುನ ತಿಮ್ಮಪ್ಪ( 21) ಹೇಮಲತಾ (40) ಪರಂ ಜ್ಯೋತಿ (47) ರಾಜು ಸೋಮಪ್ಪ (38), ಕ್ಷೀರಾ ಸುರೇಶ (47), ಪ್ರೀತಿ ರಾಜಕುಮಾರ (46) ಮತ್ತು ಯಶ್ಮಿತಾ (20) ಅವರ ಪ್ರಾಣವನ್ನು ಟಿಪ್ಪರ್ ಯಮ ಬಲಿಪಡೆದಿದ್ದಾನೆ.

Latest Videos

click me!