19 ವರ್ಷದ ಡೆಲಿವರಿ ಬಾಯ್ ಪ್ರೀತಮ್ ಆರ್. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೇ 2ರಂದು ಪ್ರೀತಮ್ ಶವ ಶಾಲೆಯೊಂದರ ಹಿಂದೆ ಪತ್ತೆಯಾಗಿತ್ತು. ಪ್ರೀತಿ ಪ್ರಕರಣದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
19 ವರ್ಷದ ಡೆಲಿವರಿ ಬಾಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೇ 2ರಂದು ಡೆಲವರಿ ಬಾಯ್ ಶವ ನಿರಗಂಟೆಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹಿಂದೆ ಪತ್ತೆಯಾಗಿತ್ತು.
25
ಪ್ರೀತಮ್ ಆರ್. ಕೊಲೆಯಾದ ಡೆಲಿವರಿ ಬಾಯ್. ಬಂಧಿತರನ್ನು ಶ್ರೀಕಾಂತ್ (22), ಸಂಜಯ್ (23), ಚರಣ್ (21) ಮತ್ತು ಶಿವಕುಮಾರ್ (22) ಎಂದು ಗುರುತಿಸಲಾಗಿದೆ. ಮೃತ ಪ್ರೀತಮ್ ಕ್ವಿಕ್ ಕಾಮರ್ಸ್ ಸಂಸ್ಥೆಯಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದನು.
35
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಂ ತಂದೆ ರಾಮಚಂದ್ರ ಅವರು ದೂರು ದಾಖಲಿಸಿದ್ದರು. ಈ ದೂರಿನಲ್ಲಿ ತನ್ನ ಮಗ ಗಂಟೆಗಾನಹಳ್ಳಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವ ವಿಷಯ ಪ್ರೀತಂನ ಗೆಳೆಯರಿಂದ ಗೊತ್ತಾಗಿದೆ ಎಂಬ ಮಾಹಿತಿಯನ್ನು ಉಲ್ಲೇಖಿಸಿದ್ದರು.
ಕೊಲೆಗೂ ಮುನ್ನ ಆರೋಪಿ ಶ್ರೀಕಾಂತ್ ಮತ್ತು ಪ್ರೀತಂ ನಡುವೆ ಹುಡುಗಿಯ ವಿಚಾರಕ್ಕೆ ಗಲಾಟೆ ನಡೆದಿತ್ತು. ಪ್ರೀತಂ ಮೇಲೆ ಹಲ್ಲೆ ನಡೆಸಿದ್ದ ಶ್ರೀಕಾಂತ್, ಯುವತಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದನು. ಹಾಗಾಗಿ ಪೊಲೀಸರಿಗೆ ಶ್ರೀಕಾಂತ್ ಮೇಲೆ ಅನುಮಾನ ಬಂದಿತ್ತು.
55
ಮೇ 2ರಂದು ರಾತ್ರಿ ಸುಮಾರು 10.30ರ ವೇಳೆಗೆ ಶ್ರೀಕಾಂತ್ ತನ್ನ ಸಹಚರರೊಂದಿಗೆ ಸೇರಿ ಪ್ರೀತಮ್‌ನನ್ನು ಆಪಹರಿಸಿ ಥಳಿಸಿದ್ದಾರೆ. ಪ್ರೀತಮ್ ಜೀವ ಹೋಗುತ್ತಿದ್ದಂತೆ ಶವವನ್ನು ಶಾಲೆಯ ಹಿಂದೆ ಎಸೆದು ಪರಾರಿಯಾಗಿದ್ದರು. ಸಾರ್ವಜನಿಕರೊಬ್ಬರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದಶಾ ಪ್ರಕರಣ ಬೆಳಕಿಗೆ ಬಂದಿತ್ತು. ನಾಲ್ವರು ಆರೋಪಿಗಳ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.