ಟಿ20 ವಿಶ್ವಕಪ್‌: ವೆಸ್ಟ್‌ಇಂಡೀಸ್‌ಗೂ ಶಾಕ್‌ ನೀಡಿ ಗೆಲ್ಲುತ್ತಾ ಜಿಂಬಾಬ್ವೆ?

Published : Feb 23, 2026, 05:07 PM IST

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿಂದು ಅಜೇಯ ತಂಡಗಳಾದ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲೂ ಅಚ್ಚರಿ ಫಲಿತಾಂಶ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

PREV
16
ಮಾಜಿ ಚಾಂಪಿಯನ್‌ಗಳನ್ನು ಸೋಲಿಸಿರುವ ಜಿಂಬಾಬ್ವೆ

ಈ ಬಾರಿ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಮಾಜಿ ಚಾಂಪಿಯನ್‌ಗಳಾದ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧ ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದ ಜಿಂಬಾಬ್ವೆ ತಂಡ ಈಗ ಸೂಪರ್‌-8 ಹಣಾಹಣಿಗೆ ಸಜ್ಜಾಗಿದೆ.

26
ವೆಸ್ಟ್ ಇಂಡೀಸ್‌ಗೆ ಶಾಕ್ ನೀಡಲು ರೆಡಿಯಾದ ಜಿಂಬಾಬ್ವೆ

ಸೋಮವಾರ 2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ವಿರುದ್ಧ ಸೆಣಸಾಡಲಿದ್ದು, ಕೆರಿಬಿಯನ್‌ ತಂಡಕ್ಕೂ ಆಘಾತ ನೀಡಿ ಗೆಲ್ಲಲು ಜಿಂಬಾಬ್ವೆ ರೆಡಿಯಾಗಿದೆ. 

36
ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ಈ ಬಾರಿಯ ಟೂರ್ನಿಯಲ್ಲಿ ಸೋಲು ಕಂಡಿಲ್ಲ

ಜಿಂಬಾಬ್ಬೆ ‘ಬಿ‘ ಗುಂಪಿನಲ್ಲಿ 3 ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನಿಯಾಗಿದ್ದರೆ, ವೆಸ್ಟ್‌ಇಂಡೀಸ್ ‘ಸಿ’ ಗುಂಪಿನ ತನ್ನೆಲ್ಲಾ 4 ಪಂದ್ಯಗಳಲ್ಲೂ ಜಯಗಳಿಸಿತ್ತು. ಈ 2 ತಂಡಗಳೂ ಟೂರ್ನಿಯಲ್ಲಿ ಸೋಲನ್ನೇ ಕಂಡಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ.

46
ಟಿ20 ಸ್ಪೆಷಲಿಸ್ಟ್ ಆಟಗಾರರನ್ನೊಳಗೊಂಡಿರುವ ವೆಸ್ಟ್ ಇಂಡೀಸ್

ವಿಂಡೀಸ್‌ ತಂಡ ಶಾಯ್ ಹೋಪ್‌, ಹೆಟ್ಮೇಯರ್‌, ಶೆಫರ್ಡ್‌, ರುಥರ್‌ಫೋರ್ಡ್, ಹೋಲ್ಡರ್‌ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ. ಟಿ20 ಸ್ಪೆಷಲಿಸ್ಟ್ ಆಟಗಾರರ ದಂಡನ್ನೇ ಹೊಂದಿರುವ ವೆಸ್ಟ್ ಇಂಡೀಸ್ ತಂಡ ಕೂಡಾ ಉತ್ತಮ ಲಯದಲ್ಲಿದೆ.

56
ಜಿಂಬಾಬ್ವೆ ತಂಡದ ಆಧಾರಸ್ತಂಭಗಳು

ನಾಯಕ ಸಿಕಂದರ್‌ ರಾಜಾ, ಯುವ ಬ್ಯಾಟರ್‌ ಬ್ರಿಯಾನ್‌ ಬೆನೆಟ್‌, ಬ್ಲೆಸಿಂಗ್‌ ಮುಜರಬಾನಿ, ಬ್ರಾಡ್‌ ಎವಾನ್ಸ್‌ ಜಿಂಬಾಬ್ವೆಯ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.

66
ಸಂಜೆ 7 ಗಂಟೆಯಿಂದ ಪಂದ್ಯ ಆರಂಭ

ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ನಡುವಿನ ಹೈವೋಲ್ಟೇಜ್ ಪಂದ್ಯವು ಇಂದು ಸಂಜೆ 7 ಗಂಟೆಯಿಂದ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories