ಫ್ಲಿಂಟಾಫ್‌ 'ಹೀಗನ್ನದಿದ್ದರೆ' ಬಹುಶಃ ಯುವಿ 6 ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ..?

First Published | Apr 22, 2020, 8:23 PM IST

ಬೆಂಗಳೂರು: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದು ಮಾತ್ರವಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ?
ಇಂಗ್ಲೆಂಡ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್‌ ಮಾಡಿದ ಎಡವಟ್ಟಿಗೆ ಸ್ಟುವರ್ಟ್ ಬ್ರಾಡ್ ಬೆಲೆ ತೆರಬೇಕಾಯಿತು. ಟೀಂ ಇಂಡಿಯಾ ರಣಕಲಿ ಯುವಿಗೆ, ಫ್ಲಿಂಟಾಫ್ ಆ ಒಂದು ಮಾತು ಹೇಳದಿದ್ದರೆ ಬಹುಶಃ ಯುವಿ ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ. ಅಷ್ಟಕ್ಕೂ 2007ರ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಫ್ಲಿಂಟಾಫ್ ಹೇಳಿದ್ದೇನು? ಅದಕ್ಕೆ ಯುವಿ ಉತ್ತರ ಹೇಗಿತ್ತು ಎನ್ನೋದನ್ನು ನೀವೇ ನೋಡಿ.

ಸ್ಟುವರ್ಟ್ ಬ್ರಾಡ್ ವಿರುದ್ಧ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ಯುವರಾಜ್ ಸಿಂಗ್
undefined
ಯುವಿಯನ್ನು ಕೆಣಕಿದರೆ ಏನಾಗುತ್ತೆ ಎಂದು ಇಡೀ ಜಗತ್ತಿಗೆ ಪರಿಚಯ ಮಾಡಿಕೊಟ್ಟ ಪಂಜಾಬ್ ಪುತ್ತರ್
undefined

Latest Videos


ಇಂಗ್ಲೆಂಡ್ ವೇಗಿ ಫ್ಲಿಂಟಾಫ್ ಎಸೆದ ಪಂದ್ಯದ 18 ಓವರ್‌ನ 4 ಹಾಗೂ 5ನೇ ಎಸೆತದಲ್ಲಿ ಯುವಿ ಬೌಂಡರಿ ಬಾರಿಸಿದ್ದರು.
undefined
ಬೌಂಡರಿ ಬಾರಿಸಿದ ಬೆನ್ನಲ್ಲೇ ಫ್ಲಿಂಟಾಫ್, ಇದು ಕೆಟ್ಟ ಹೊಡೆತ ಎಂದಿದ್ದು ಮಾತ್ರವಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
undefined
ಇದಕ್ಕೆ ಯುವಿ ಕೂಡಾ ಅಷ್ಟೇ ಕೆಟ್ಟದಾಗಿ ಫ್ಲಿಂಟಾಫ್‌ಗೆ ಮರು ಉತ್ತರ ನೀಡಿದರು.
undefined
ಆಗ ಫ್ಲಿಂಟಾಫ್, ಯುವಿಗೆ ನೀನು ಹೊರಗೆ ಬಾ ನಿನ್ನ ಕತ್ತು ಕತ್ತರಿಸುತ್ತೇನೆ ಎಂದು ಆವಾಜ್ ಹಾಕಿದರು.
undefined
ಆಗ ಹೊರಗೆ ಸಿಗೋದು ಆಮೇಲೆ, ಈಗ ಬ್ಯಾಟ್‌ನಲ್ಲೇ ಉತ್ತರಿಸುತ್ತೇನೆ ನೋಡು ಎಂದಿದ್ದರು ಯುವಿ
undefined
ಅಷ್ಟರಲ್ಲಿ ಅಂಪೈರ್ ಮಧ್ಯ ಪ್ರವೇಶಿಸಿ ಇಬ್ಬರ ನಡುವಿನ ಜಗಳ ಬಿಡಿಸಿದರು
undefined
ಆಗಲೇ ನಾನು ಇವರಿಗೆಲ್ಲ ಬ್ಯಾಟ್‌ನಿಂದಲೇ ಉತ್ತರಿಸಬೇಕೆಂದು ನಿರ್ಧರಿಸಿದೆ ಎಂದು ಯುವಿ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
undefined
18ನೇ ಓವರ್ ಮುಕ್ತಾಯದ ವೇಳೆಗೆ 6 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 14 ರನ್ ಬಾರಿಸಿದ್ದ ಯುವಿ, 19 ಓವರ್ ಮುಕ್ತಾಯದ ವೇಳೆಗೆ 50 ರನ್ ಪೂರೈಸಿದರು.
undefined
click me!