ಈತ ಭಾರತ ಏಕದಿನ ತಂಡದಲ್ಲಿ ಯಾಕಿದ್ದಾನೆ? ಗಾಯಕ್ವಾಡ್ ಬದಲಿಗೆ ಈ ಆಟಗಾರನಿಗೆ ಸ್ಥಾನ ನೀಡಿದ್ದಕ್ಕೆ ಕಿಡಿಕಾರಿದ ಮಾಜಿ ಕ್ರಿಕೆಟರ್!

Published : Jan 05, 2026, 03:21 PM IST

ಚೆನ್ನೈ: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಅಜಿತ್‌ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕೆಲವೊಂದು ಅಚ್ಚರಿ ತೀರ್ಮಾನ ತೆಗೆದುಕೊಂಡಿದೆ. ಈ ಪೈಕಿ ಋತುರಾಜ್ ಗಾಯಕ್ವಾಡ್ ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ ಹೊರಹಾಕಿದ್ದಾರೆ. 

PREV
110
ಕಿವೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ

ಇದೇ ಜನವರಿ 11ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಗಿಲ್‌ ನಾಯಕರಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಇದರ ಜತೆಗೆ ರಿಷಭ್ ಪಂತ್, ಮೊಹಮ್ಮದ್ ಸಿರಾಜ್ ಕೂಡಾ ತಂಡ ಕೂಡಿಕೊಂಡಿದ್ದಾರೆ.

210
ಶಮಿ ಸೇರಿ ಹಲವರಿಗೆ ನಿರಾಸೆ

ಇನ್ನು ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ, ಪುಣೆ ಮೂಲದ ಋತುರಾಜ್ ಗಾಯಕ್ವಾಡ್, ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌ಗೆ ನಿರಾಸೆ ಎದುರಾಗಿದೆ.

310
ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ ಬದ್ರಿನಾಥ್

ಇದೀಗ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಕಿವೀಸ್‌ ಸರಣಿಗೆ ಆಯ್ಕೆ ಮಾಡಿದ ತಂಡದ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್ ಗಂಭೀರವಾದ ಸವಾಲು ಹಾಕಿದ್ದಾರೆ.

410
ಆಯ್ಕೆ ಸಮಿತಿ ಪ್ರಶ್ನಿಸಿದ ಮಾಜಿ ಕ್ರಿಕೆಟರ್

ಫಾರ್ಮ್‌ನಲ್ಲಿರುವ ಋತುರಾಜ್ ಗಾಯಕ್ವಾಡ್ ಅವರನ್ನು ಕೈಬಿಟ್ಟು ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದೇಕೆ ಎಂದು ಎಸ್‌ ಬದ್ರಿನಾಥ್ ಪ್ರಶ್ನಿಸಿದ್ದಾರೆ.

510
ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಬದ್ರಿನಾಥ್

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಂಡದಲ್ಲಿ ಈಗಾಗಲೇ ತಜ್ಞ ಆಲ್ರೌಂಡರ್ ಇರುವಾಗ, ನಿತೀಶ್ ಕುಮಾರ್ ರೆಡ್ಡಿಯನ್ನು ಆಯ್ಕೆ ಸಮಿತಿ ಯಾವ ಕಾರಣಕ್ಕೆ ಆಯ್ಕೆ ಮಾಡಿದೆಯೋ ಗೊತ್ತಾಗುತ್ತಿಲ್ಲ. 

610
ಫಾರ್ಮ್‌ನಲ್ಲಿರುವ ಗಾಯಕ್ವಾಡ್ ಕೈಬಿಟ್ಟು ನಿತೀಶ್ ಆಯ್ಕೆ ಮಾಡಿದ್ದೇಕೆ?

ಫಾರ್ಮ್‌ನಲ್ಲಿರುವ ಗಾಯಕ್ವಾಡ್ ಅವರನ್ನು ಬಿಟ್ಟು ನಿತೀಶ್ ಕುಮಾರ್ ರೆಡ್ಡಿ ಆಯ್ಕೆ ಮಾಡಿದ್ದೇಕೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಬದ್ರಿನಾಥ್ ಹೇಳಿದ್ದಾರೆ.

710
ಇಬ್ಬರು ಆಲ್ರೌಂಡರ್ ಇರುವಾಗ ನಿತೀಶ್ ಕುಮಾರ್ ಯಾಕೆ?

ಸದ್ಯ ಈಗಾಗಲೇ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಹೀಗೆ ಇಬ್ಬರು ತಜ್ಞ ಆಲ್ರೌಂಡರ್‌ಗಳಿದ್ದಾರೆ. ಇದರ ಹೊರತಾಗಿ ಮತ್ತೋರ್ವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಆತ ಏಕದಿನ ತಂಡದಲ್ಲಿ ಯಾಕಿದ್ದಾನೆ ಎನ್ನುವುದು ನನಗಂತೂ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

810
ನಿತೀಶ್ ಕುಮಾರ್ ರೆಡ್ಡಿ ಮೇಲೆ ಬದ್ರಿನಾಥ್ ಟೀಕೆ

ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಲ್ರೌಂಡರ್ ಎಂದು ಆಯ್ಕೆ ಮಾಡಲಾಗಿದೆ ಎನ್ನುತ್ತಾರೆ. ಆದರೆ ಆತನ ಎಸೆತಗಳನ್ನು ಬ್ಯಾಟರ್‌ಗಳು ಮೂಲೆ ಮೂಲೆಗೆ ಬೌಂಡರಿ ಚಚ್ಚುತ್ತಿದ್ದಾರೆ. ಹೀಗಿರುವಾಗ ಋತುರಾಜ್ ಗಾಯಕ್ವಾಡ್ ಕೈಬಿಟ್ಟು ನಿತೀಶ್ ಕುಮಾರ್ ರೆಡ್ಡಿ ಆಯ್ಕೆ ಮಾಡಿದ್ದು ನಿಜಕ್ಕೂ ಅನ್ಯಾಯವೇ ಸರಿ ಎಂದು ಬದ್ರಿನಾಥ್ ಹೇಳಿದ್ದಾರೆ.

910
ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಗಾಯಕ್ವಾಡ್‌ಗಿಲ್ಲ ಸ್ಥಾನ

ಋತುರಾಜ್ ಗಾಯಕ್ವಾಡ್ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಕೇವಲ 83 ಎಸೆತಗಳಲ್ಲಿ 105 ರನ್ ಸಿಡಿಸಿದ್ದರು. ದೇಶಿ ಕ್ರಿಕೆಟ್‌ನಲ್ಲೂ ಗಾಯಕ್ವಾಡ್ ಮಿಂಚುತ್ತಿದ್ದಾರೆ. ಹೀಗಿದ್ದೂ ಕಿವೀಸ್ ಎದುರಿನ ಏಕದಿನ ಸರಣಿಯಲ್ಲಿ ಋತುರಾಜ್‌ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

1010
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಜನವರಿ 11ರಂದು ಬರೋಡದಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಜನವರಿ 14ರಂದು ರಾಜ್‌ಕೋಟ್‌ನಲ್ಲಿ ಹಾಗೂ ಜನವರಿ 18ರಂದು ಇಂದೋರ್‌ನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories