ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ

Published : Feb 19, 2026, 08:20 PM IST

ಬೆಂಗಳೂರು: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ 10ನೇ ಕ್ಲಾಸ್‌ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಕೊನೆಗೂ ವೈಭವ್ ತಂದೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. 

PREV
16
ಸುದ್ದಿಯಲ್ಲಿರುವ ವೈಭವ್ ಸೂರ್ಯವಂಶಿ

ಇತ್ತೀಚೆಗಷ್ಟೇ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈಭವ್ ಸೂರ್ಯವಂಶಿ ಕ್ರಿಕೆಟ್ ಅಭಿಮಾನಿಗಳ ಮನೆಮಾತಾಗಿದ್ದರು.

26
10ನೇ ತರಗತಿ ಎಕ್ಸಾಂ ಬರೆಯಲು ರೆಡಿಯಾಗಿದ್ದ ವೈಭವ್

ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಭಾರತಕ್ಕೆ ಬಂದಿದ್ದ ವೈಭವ್ ಸೂರ್ಯವಂಶಿ, ಇದೇ ಫೆಬ್ರವರಿ 17ರಿಂದ ಆರಂಭವಾಗುವ ಸಿಬಿಎಸ್‌ಇ ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅದಕ್ಕೆ ಸಾಕ್ಷಿಯೆನ್ನುವಂತೆ ವೈಭವ್ ಓದುವ ಶಾಲಾ ಸಿಬ್ಬಂದಿಗಳು ಈಗಾಗಲೇ ಹಾಲ್‌ ಟಿಕೆಟ್ ವೈಭವ್ ಅವರಿಗೆ ತಲುಪಿದೆ ಎಂದು ಹೇಳಿದ್ದರು.

36
ವೈಭವ್‌ಗೆ ಯಾವುದೇ ವಿಶೇಷ ಸೌಲಭ್ಯಗಳಿರುವುದಿಲ್ಲವೆಂದಿದ್ದ ಪ್ರಿನ್ಸಿಪಾಲ್

ಇನ್ನು ಇದೆಲ್ಲದರ ನಡುವೆ ವೈಭವ್ ಸೂರ್ಯವಂಶಿ ಸ್ಟಾರ್ ಕ್ರಿಕೆಟಿಗನಾಗಿದ್ದರೂ, ಪರೀಕ್ಷೆ ಬರೆಯುವ ವೇಳೆಯಲ್ಲಿ ಯಾವುದೇ ವಿಶೇಷ ಸೌಲಭ್ಯಗಳು ಅವರಿಗಿರುವುದಿಲ್ಲ ಎಲ್ಲರಂತೆ ಅವರು ಪರೀಕ್ಷೆ ಬರೆಯಬಹುದು ಎಂದು ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಿನ್ಸಿಪಾಲ್ ಮಾಹಿತಿ ಹಂಚಿಕೊಂಡಿದ್ದರು.

46
ಕೊನೆಯ ಕ್ಷಣದಲ್ಲಿ ಎಕ್ಸಾಂನಿಂದ ಹಿಂದೆ ಸರಿದ ವೈಭವ್

ಹೀಗಿರುವಾಗಲೇ 10ನೇ ತರಗತಿ ಪರೀಕ್ಷೆ ಬರೆಯಲು ಕೇವಲ ಒಂದು ದಿನ ಬಾಕಿ ಇರುವಾಗ ವೈಭವ್ ಸೂರ್ಯವಂಶಿ 10ನೇ ತರಗತಿ ಪರೀಕ್ಷೆಗೆ ಗೈರು ಹಾಜರಾಗುವುದು ಖಚಿತವಾಗಿತ್ತು. ಇನ್ನು ಫೆಬ್ರವರಿ 17ರಂದು ನಡೆದ ಪರೀಕ್ಷೆಯಲ್ಲಿ ವೈಭವ್ ಪಾಲ್ಗೊಂಡಿಲ್ಲ. ಹೀಗಾಗಿ ನಿಯಮಾನುಸಾರ ಅವರು ಗೈರಾಗಿದ್ದಾರೆ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ ಎಂದು ಪ್ರಿನ್ಸಿಪಾಲ್ ಎನ್‌.ಕೆ ಸಿನ್ಹಾ ತಿಳಿಸಿದ್ದರು.

56
ಮಗ ಚಕ್ಕರ್ ಹೊಡೆದ ಬಗ್ಗೆ ಮೌನ ಮುರಿದ ತಂದೆ ಸಂಜೀವ್

ಇದೀಗ ಈ ವಿಚಾರವಾಗಿ ವೈಭವ್ ತಂದೆ ಸಂಜೀವ್ ಮೌನ ಮುರಿದಿದ್ದು, 'ನಮ್ಮ ಮಗ ನಾಗ್ಪುರದಲ್ಲಿ ಐಪಿಎಲ್ ತಂಡವಾದ ರಾಜಸ್ಥಾನ ರಾಯಲ್ಸ್ ಆಟಗಾರರ ಜತೆ ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಈ ವರ್ಷ ವೈಭವ್ ಎಕ್ಸಾಂ ಬರೆಯುವುದರ ಬಗ್ಗೆ ಎಲ್ಲಾ ಕಡೆ ದೊಡ್ಡದಾಗಿ ಬಿಂಬಿಸಲಾಗಿದೆ. ಹೀಗಾಗಿ ಈ ಬಾರಿ ಎಕ್ಸಾಂಗೆ ಗೈರಾಗಿ ಮುಂದಿನ ವರ್ಷ ಪರೀಕ್ಷೆ ಬರೆಯಲು ತೀರ್ಮಾನಿಸಿದ್ದಾನೆ' ಎಂದು ತಿಳಿಸಿದ್ದಾರೆ.

66
ಮುಂದಿನ ವರ್ಷ ಪರೀಕ್ಷೆ ಬರೆಯುತ್ತಾನೆ ವೈಭವ್

ವೈಭವ್ ಈ ಬಾರಿ ಎಕ್ಸಾಂ ಬರೆದರೂ ಹೆಚ್ಚು ಏಕಾಗ್ರತೆಯಿಂದ ಇರಲು ಸಾಧ್ಯವಾಗುವುದಿಲ್ಲ. ವೈಭವ್ ಶಾಲೆಗೆ ಹೋಗುವಾಗ ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತ ಶಾಲೆಗೆ ಹೋಗುವಾಗ ಎಲ್ಲಾ ವಿಷಯದಲ್ಲೂ 90+ ಸ್ಕೋರ್ ಮಾಡುತ್ತಿದ್ದ. ಆದರೆ ಈಗ ಆತನ ಸದ್ಯದ ಟಾರ್ಗೆಟ್ ಕ್ರಿಕೆಟ್ ಮೇಲಿದೆ. ಮುಂದಿನ ವರ್ಷ ಖಂಡಿತ ಆತ 10ನೇ ತರಗತಿ ಪರೀಕ್ಷೆ ಬರೆಯುತ್ತಾನೆ ಎಂದು ವೈಭವ್ ತಂದೆ ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories