ಸಾರಾ ಸುದ್ದಿ ನಡುವೆ ಭಾರತೀಯರಿಗೆ ಶಾಕ್‌ ಕೊಟ್ಟ ಸನಾ, ಯಾರೀಕೆ ಸಾನಿಯಾ ಮಿರ್ಜಾ ಸವತಿ?

ಬೆಂಗಳೂರು: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. ಹಲವು ಮುಸುಕಿನ ಗುದ್ದಾಟದ ಬಳಿಕ ಕೊನೆಗೂ ಈ ತಾರಾ ಜೋಡಿ ಬೇರ್ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಮಾಜಿ ಪತಿ ಮಲಿಕ್, ಪಾಕಿಸ್ತಾನದ ಚಂದುಳ್ಳಿ ಚೆಲುವೆಯೊಂದಿಗೆ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ಮೂಗುತಿ ಸುಂದರಿ ಸಾನಿಯಾ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ ಚೆಂದುಳ್ಳಿ ಚೆಲುವೆ ಯಾರು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
 

ಭಾರತದ ಅಳಿಯ ಶೋಯೆಬ್ ಮಲಿಕ್‌ ಅವರನ್ನು ಮದುವೆಯಾಗುವ ಮೂಲಕ ಸನಾ ಜಾವೆದ್ ಭಾರತೀಯರಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಇದೀಗ ಸಾನಿಯಾ ಮಿರ್ಜಾ ಜತೆಗಿನ ಸಂಸಾರಕ್ಕೆ ಗುಡ್‌ ಬೈ ಹೇಳಿದ್ದಾರೆ ಇದೀಗ ಶೋಯೆಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೆದ್ ಮೂರನೇ ಮದುವೆಯಾಗಿದ್ದಾರೆ.


ಇದೀಗ ಶೋಯೆಬ್ ಮಲಿಕ್ ಹಾಗೂ ಸನಾ ಜಾವೆದ್ ಇಬ್ಬರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವಿಬ್ಬರು ಮದುವೆಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.

ಇಬ್ಬರು ಮದುವೆಯಾಗಿರುದಕ್ಕೆ ನಗುನಗುತ್ತಲೇ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಮದುವೆಯಲ್ಲಿ ಶೋಯೆಬ್ ಮಲಿಕ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ. ಇನ್ನು ಸನಾ ಜಾವೆದ್‌ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.

ಖಾನಿ ಎನ್ನುವ ಪ್ರಣಯ ನಾಟಕದಲ್ಲಿ ಅವರ ಅದ್ಭುತ ಪ್ರದರ್ಶನದ ಮೂಲಕ ಜನಮನ ಸೆಳೆದಿದ್ದ ಸನಾ ಜಾವೆದ್ ಲಕ್ಸ್ ಸ್ಟೈಲ್ ಅವಾರ್ಡ್ಸ್‌ಗೆ ನಾಮನಿರ್ದೇಶಗೊಂಡಿದ್ದರು.

ಇನ್ನು ಸಾಮಾಜಿಕ ಕಾಳಜಿಯುಳ್ಳ ನಾಟಕಗಳಾದ ರುಸ್ವಾಯಿ ಹಾಗೂ ಡಂಕ್ ನಟನೆಯು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಸನಾ ಜಾವೆದ್ ಈ ಮೊದಲು ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದು, ಸನಾ ಆ ಸಂಬಂಧಕ್ಕೆ ಗುಡ್‌ಬೈ ಹೇಳಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ.

ಸನಾ ಜಾವೆದ್ ಮಾರ್ಚ್ 25, 1993ರಲ್ಲಿ ಸೌದಿ ಅರೆಬಿಯಾದ ಜೆದ್‌ನಲ್ಲಿ ಜನಿಸಿದರು. ಬೆಹದ್ದ್, ಶಾರಿಕ್ ಈ ಹಯತ್, ದಿನೋ ಕಿ ದುಲ್ಹಾನಿಯಾ ಹಾಗೂ ಐ ಲವ್ ಯೂ ಝದ ದಲ್ಲಿ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದರು.

ಸನಾ ಜಾವೆದ್ 2020ರಲ್ಲಿ ಪಾಕಿಸ್ತಾನಿ ನಟ, ಗಾಯಕ ಹಾಗೂ ಸಾಹಿತ್ಯ ರಚನೆಕಾರ ಉಮೈರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದರು. ಇನ್ನು  ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅವರು ಬೇರ್ಪಟ್ಟಿದ್ದರು.

ಇನ್ನು ಮಲಿಕ್ ಅವರನ್ನು ಮದುವೆಯಾಗುತ್ತಿದ್ದಂತೆಯೇ ಸನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ಸನಾ ಶೋಯೆಬ್ ಮಲಿಕ್' ಎಂದು ಹೆಸರು ಬದಲಿಸಿಕೊಂಡಿದ್ದಾರೆ. 

ಶೋಯೆಬ್ ಮಲಿಕ್ ಹಾಗೂ ಸನಾ ಜಾವೆದ್ ಇಬ್ಬರೂ 2023ರ ಆರಂಭದಿಂದಲೂ ಡೇಟಿಂಗ್ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಕಳೆದ ವರ್ಷ ಸನಾ ಹುಟ್ಟುಹಬ್ಬದಂದು ಶೋಯೆಬ್ ಆಕೆಗೆ. " "Happy Birthday Buddy." ಎಂದು ವಿಶ್‌ ಮಾಡಿದ್ದರು. ಇದು ಸಾಕಷ್ಟು ಸಂಚಲನ ಸೃಷ್ಟಿಸಿತ್ತು.

Latest Videos

click me!