ಮನೆಗೆ ಹೋಗಬೇಕು ಎಂದು ಅಂಗಲಾಚಿದ ಕೋಚ್ ಸ್ಯಾಮಿ, ಭಾರತ ವಿರುದ್ದ ಸೋಲುಕಂಡ ಟೂರ್ನಿಯಿಂದ ಹೊರಬಿದ್ದರೂ ವಿಂಡೀಸ್ ತಂಡ ಕೋಲ್ಕತಾದಲಿ ಸಿಲುಕಿಕೊಂಡಿದೆ. ಇತ್ತ ಸಮಿ ಮನೆಗೆ ಹೋಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಟ20 ವಿಶ್ವಕಪ್ ಟೂರ್ನಿ ಅಂತಿಮ ಘಟ್ಟದಲ್ಲಿದೆ. ಭಾರತ ಆಯೋಜಿಸಿದ ಟೂರ್ನಿಯಲ್ಲಿ 2ನೇ ಸೆಮಿಫೈನಲ್ ಹೋರಾಟ ಹಾಗೂ ಫೈನಲ್ ಹೋರಾಟ ಮಾತ್ರ ಬಾಕಿ ಉಳಿದುಕೊಂಡಿದೆ. ಸೂಪರ್ 8 ಹಂತದ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾಗಿತ್ತು. ಅತ್ಯಂತ ಮಹತ್ವದ ಪಂದ್ಯಲ್ಲಿ ಭಾರತ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರೆ, ಇತ್ತ ವಿಂಡೀಸ್ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿತ್ತು. ತವರಿಗೆ ಮರಳಬೇಕಿದ್ದ ವಿಂಡೀಸ್ ತಂಡ ಇದೀಗ ಕೋಲ್ಕತಾದಲ್ಲೇ ಸಿಲುಕಿಕೊಂಡಿದೆ.
25
ನಾನು ಮನೆಗೆ ಹೋಗಬೇಕು
ಸೋಲಿನ ಬಳಿಕ ಮರು ದಿನವೇ ವೆಸ್ಟ್ ಇಂಡೀಸ್ ತಂಡ ತವರಿಗೆ ಮರಳಬೇಕಿತ್ತು.ಆದರೆ ಇದುವರೆಗೂ ಸಾಧ್ಯವಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ವಿಂಡೀಸ್ ತಂಡ ಕೋಲ್ಕತಾದಲ್ಲಿ ಉಳಿದಕೊಂಡಿದೆ. ಇದರ ಬೆನ್ನಲ್ಲೇ ವಿಂಡೀಸ್ ಹೆಡ್ ಕೋಚ್ ಡರನ್ ಸ್ಯಾಮಿ ಮನೆಗೆ ಹೋಗಲು ಪರಿತಪಿಸುತ್ತಿದ್ದಾರೆ. ನಾನು ಮನೆಗೆ ಹೋಗಬೇಕು ಎಂದು ಎಕ್ಸ್ ಮೂಲಕ ನೋವು ತೋಡಿಕೊಂಡಿದ್ದಾರೆ
35
ವಿಂಡೀಸ್ ಭಾರತದಲ್ಲೇ ಉಳಿದುಕೊಂಡಿದ್ದೇಕೆ
ವೆಸ್ಟ್ ಇಂಡೀಸ್ ತಂಡ ಭಾರತದಲ್ಲೇ ಉಳಿದುಕೊಳ್ಳಲು ಮುಖ್ಯ ಕಾರಣ ಇಸ್ರೇಲ್ ಇರಾನ್ ನಡುವಿನ ಯುದ್ದ. ಇರಾನ್ ಪ್ರತಿ ದಾಳಿಗೆ ದುಬೈ ಸೇರಿದಂತೆ ಮದ್ಯಪ್ರಾಚ್ಯ ದೇಶಗಳ ಮೇಲೆ ದಾಳಿ ನಡೆಸುತ್ತಿದೆ. ವಾಯ ಮಾರ್ಗಗಳು ಬಂದ್ ಆಗಿದೆ. ವಿಮಾನ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಅನಿವಾರ್ಯವಾಗಿ ಭಾರತದಲ್ಲೇ ಉಳಿದುಕೊಂಡಿದೆ.
ಕೆರಿಬಿಯನ್ ನಾಡಿಗೆ ತೆರಳಲು ದುಬೈ ವಿಮಾನ ನಿಲ್ದಾಣ ಪ್ರಮುಖ ವಾಯು ಮಾರ್ಗವಾಗಿದೆ. ಆದರೆ ಭಾರತದಿಂದ ದುಬೈ ತೆರಳುವ ವಿಮಾನಗಳು ಸ್ಥಗಿತಗೊಂಡಿದೆ. ಯುದ್ಧ ತೀವ್ರಗೊಳ್ಳುತ್ತಿರುವ ಕಾರಣ ಕೆಲ ದಿನಗಳ ಕಾಲ ವೆಸ್ಟ್ ಇಂಡೀಸ್ ತಂಡ ಭಾರತದಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
55
ಬಿಸಿಸಿಐ ಸ್ಪಷ್ಟನೆ
ವೆಸ್ಟ್ ಇಂಡೀಸ್ ತಂಡ ಕೋಲ್ಕತಾದಲ್ಲಿ ಸಿಲುಕಿಕೊಂಡಿದ್ದರೆ, ಜಿಂಬಾಬ್ವೆ ತಂಡ ದೆಹಲಿಯಲ್ಲಿ ಸಿಲುಕಿಕೊಂಡಿದೆ. ಇತ್ತ ಬಿಸಿಸಿಐ ಪರಿಸ್ಥಿತಿ ಕುರಿತು ಹೇಳಿಕೆ ನೀಡಿದೆ. ಭಾರತದಲ್ಲಿ ಎಲ್ಲಾ ಆಟಗಾರರು ಸುರಕ್ಷಿತರಾಗಿದ್ದಾರೆ. ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದ ವಾಯುಸೇವೆಗಳು ಸ್ಥಗಿತಕೊಂಡಿದೆ ಎಂದಿದೆ.
ಬಿಸಿಸಿಐ ಸ್ಪಷ್ಟನೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.