ಟೀಂ ಇಂಡಿಯಾದ ಈ ಕ್ರಿಕೆಟಿಗರಿಗೆ ವಯಸ್ಸಾದರೂ ಹುಡುಗೀರು ಸಾಯ್ತಾರೆ!

First Published | Jan 8, 2024, 6:07 PM IST

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್‌ ಅನ್ನು ಒಂದು ಧರ್ಮದಂತೆ ಆರಾಧಿಸುವ ಜನರಿದ್ದಾರೆ. ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಹಲವು ಸೂಪರ್ ಸ್ಟಾರ್ ಆಟಗಾರರಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೆ ಮಹಿಳಾ ಫ್ಯಾನ್ಸ್ ಫಾಲೋವರ್ಸ್ ಸಂಖ್ಯೆಯೇನೂ ಕಡಿಮೆಯಿಲ್ಲ. ನಾವಿಂದು ಅತಿಹೆಚ್ಚು ಫೀಮೇಲ್ ಫಾಲೋವರ್ಸ್‌ ಹೊಂದಿದ ಟಾಪ್ 7 ಕ್ರಿಕೆಟಿಗರು ಯಾರು ನೋಡೋಣ ಬನ್ನಿ.
 

1. ವಿರಾಟ್ ಕೊಹ್ಲಿ:

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಹ್ಯಾಂಡ್ಸಮ್‌ ಆಟಗಾರ ಎನಿಸಿಕೊಂಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಗೆ ಅಸಂಖ್ಯಾತವಾಗಿ ಎಲ್ಲಾ ವಯೋಮಾನದ ಮಹಿಳಾ ಫ್ಯಾನ್ಸ್‌ಗಳು ಫಾಲೋ ಮಾಡುತ್ತಿದ್ದಾರೆ.
 

2. ರಾಹುಲ್ ದ್ರಾವಿಡ್:

ರಾಹುಲ್ ದ್ರಾವಿಡ್ ಕ್ರಿಕೆಟ್‌ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅಪಾರ ಮಹಿಳಾ ಫ್ಯಾನ್ ಫಾಲೋವರ್ಸ್ ಹೊಂದಿದ್ದರು. ಜಂಟಲ್‌ಮನ್ ಕ್ರಿಕೆಟಿಗ ದ್ರಾವಿಡ್ ಒಮ್ಮೆಯೂ ಮಹಿಳಾ ಕಾಂಟ್ರೊವರ್ಸಿ ಸಿಲುಕಿರಲಿಲ್ಲ ಎನ್ನುವುದು ವಿಶೇಷ.
 

Tap to resize

3. ಶುಭ್‌ಮನ್ ಗಿಲ್

ಆಧುನಿಕ ಕ್ರಿಕೆಟ್‌ನ ಪೋಸ್ಟರ್ ಬಾಯ್ ಶುಭ್‌ಮನ್ ಗಿಲ್ ತಮ್ಮ ಕ್ರಿಕೆಟ್ ಆಟದ ಮೂಲಕ ಮಾತ್ರವಲ್ಲದೇ ಸ್ಟೈಲೀಷ್ ಲುಕ್ ಮೂಲಕವೂ ಮಿಂಚುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಗಿಲ್‌ಗಾಗಿ ಹುಡುಗಿಯರು ಎಡಬಿಡದೇ ಹಿಂಬಾಲಿಸುತ್ತಾ ಬಂದಿದ್ದಾರೆ.
 

4. ಇರ್ಫಾನ್ ಪಠಾಣ್

ಟೀಂ ಇಂಡಿಯಾ ಆಲ್ರೌಂಡರ್ ಇರ್ಫಾನ್ ಪಠಾನ್ ಹದಿಹರೆಯದ ವಯಸ್ಸಿನಲ್ಲಿಯೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಕ್ರಿಕೆಟ್ ಆಡುವಾಗ ಹಾಗೂ ಈಗ ಕ್ರಿಕೆಟ್ ವಿಶ್ಲೇಷಕರಾಗಿ ಮಿಂಚುತ್ತಿರುವ ಪಠಾಣ್‌ಗೆ ಅಪಾರ ಅಭಿಮಾನಿಗಳಿದ್ದಾರೆ.
 

5. ಕೆ ಎಲ್ ರಾಹುಲ್:

ಕನ್ನಡಿಗ ಕೆ ಎಲ್ ರಾಹುಲ್, ಮೈದಾನದಲ್ಲಿ ಕ್ಲಾಸಿಕ್ ಆಟವಾಡುವ ಮೂಲಕ ಗಮನ ಸೆಳೆಯುತ್ತಾ ಬಂದಿದ್ದಾರೆ. ತಮ್ಮ ಗುಡ್‌ ಲುಕ್ ಮೂಲಕವೇ ರಾಹುಲ್ ಅಪಾರ ಫೀಮೇಲ್ ಫ್ಯಾನ್ಸ್ ಮನ ಗೆದ್ದಿದ್ದಾರೆ.
 

6. ಯುವರಾಜ್ ಸಿಂಗ್:

ದಶಕಗಳ ಕಾಲ ಅದ್ಭುತ ಫೀಲ್ಡಿಂಗ್ ಹಾಗೂ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಯುವರಾಜ್ ಸಿಂಗ್ ತಮ್ಮ ಸ್ಟೈಲೀಶ್ ಲುಕ್ ಮೂಲಕವೇ ಅಪಾರ ಮಹಿಳಾ ಅಭಿಮಾನಿಗಳ ಡ್ರೀಮ್ ಹೀರೋ ಎನಿಸಿಕೊಂಡಿದ್ದರು.
 

7. ಜಹೀರ್ ಖಾನ್:

ಎಡಗೈ ವೇಗಿ ಜಹೀರ್ ಖಾನ್ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಕಾಲೇಜ್ ಹುಡುಗಿಯರ ಪಾಲಿನ ಡ್ರೀಮ್ ಬಾಯ್ ಎನಿಸಿಕೊಂಡಿದ್ದರು. ಇನ್ನು ಕ್ರಿಕೆಟ್ ಆಡುವಾಗಲು ಹಲವು ಹುಡುಗಿಯರು ಜಾಕ್‌ಗೆ ಮದುವೆ ಪ್ರಪೋಸ್ ಮಾಡಿದ್ದು ಸಹಾ ಇದೆ.
 

Latest Videos

click me!